ಜಾಹ್ನವಿ ಮಹಡಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ…? ಇವ್ರ ವಾಯ್ಸ್ ಅನ್ನು ಇಷ್ಟಪಡದೇ ಇರೋರೆ ಇಲ್ಲ ಅಲ್ವಾ…? ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರೋ ನಿರೂಪಕಿಯರಲ್ಲಿ ಇವರು ಸಹ ಒಬ್ರು. ಇವ್ರು ನ್ಯೂಸ್ ಪ್ರೆಸೆಂಟ್ ಮಾಡೋ ಸ್ಟೈಲ್, ಡಿಸ್ಕಶನ್ಸ್ ನಡೆಸಿಕೊಡುವಾಗ ಇರೋ ಗತ್ತು ಸೂಪರ್…ಅದ್ಕೆ ಅಲ್ವಾ ಕನ್ನಡಿಗರು ಇವ್ರನ್ನು ಇಷ್ಟಪಡೋದು.
ಹಾಸನ ಜಿಲ್ಲೆಯ ಸಕಲೇಶಪುರ ಜಾಹ್ನವಿ ಅವರೂರು. ಅಪ್ಪ ಕೆ.ಟಿ ರಾಜಶೇಖರ್, ಅಮ್ಮ ಭಾನುಮತಿ, ಅಣ್ಣ ನಿರಂಜನ್ ಕೆ.ರ್, ಚಿಕ್ಕಮಗಳೂರಲ್ಲಿ ಕೆಪಿಟಿಸಿಎಲ್ ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್. ಅತ್ತಿಗೆ ನಂದಿನಿ, ಪತಿ ಕಾರ್ತಿಕ್ ಮಹಡಿ, ನಾದಿನಿ ಐಶ್ವರ್ಯ, ಮಗ ಗ್ರಂಥ್ ಮಹಡಿ.
ನಿಮ್ಗೆ ಖಂಡಿತಾ ನೆನಪಿರುತ್ತೆ. ‘ದಿ ನ್ಯೂ ಇಂಡಿಯನ್ ಟೈಮ್ಸ್’ ಕಳೆದ ವರ್ಷ (2017 ಮಾರ್ಚ್-ಏಪ್ರಿಲ್) ಫೇವರೇಟ್ ಆ್ಯಂಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನ ತಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡಿದ್ದರು. ಫೀಮೇಲ್ ವಿಭಾಗದಲ್ಲಿ ರನ್ನರ್ ಅಪ್ ಆಗಿ ಜನಾದೇಶ ಪಡೆದು ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಪ್ರಶಸ್ತಿ ಪಡೆದ ನಿರೂಪಕಿ ಇದೇ ಜಾಹ್ನವಿ ಮಹಡಿ ಅವರು.
ಜಾಹ್ನವಿ ತಮ್ಮ ಹುಟ್ಟೂರು ಸಕಲೇಶಪುರದ ಸಂತ ಜೋಸೆಫರ ಶಾಲೇಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿ ತುಮಕೂರಿನ ಎಂಪ್ರೆಸ್ ಕಾಲೇಜಲ್ಲಿ ಪಿಯುಸಿ ಮಾಡಿದ್ರು. ಸ್ಕೂಲ್, ಕಾಲೇಜ್ ಡೇಸ್ ನಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ಇವ್ರಿಗೆ ಸಿಕ್ಕಾಪಟ್ಟೆ ಆಸಕ್ತಿ. ಭಾಷಣ, ಚರ್ಚಾ ಸ್ಪರ್ಧೆ, ಆಶುಭಾಷಣಗಳಿಗೆ ಜಾಹ್ನವಿ ತಪ್ಪಿಸಿಕೊಳ್ತಾನೇ ಇರ್ಲಿಲ್ಲ. ಆ ದಿನಗಳಲ್ಲೇ ಮಾಧ್ಯಮ ಕ್ಷೇತ್ರದಲ್ಲಿ ಕೆಲ್ಸ ಮಾಡೋ ಕನಸು ಇವರಲ್ಲಿ ಮೊಳಕೆಯೊಡೆದಿತ್ತು. ಆದ್ರೆ, ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿರ್ಲಿಲ್ಲ. ಪಿಯುಸಿ ಮುಗಿದ್ಮೇಲೆ ಡಿಪ್ಲೋಮಾ ಕೋರ್ಸ್‍ಗೆ ಜಾಯಿನ್ ಆಗಿದ್ರು. ಎಲ್ಲಾ ಚೆನ್ನಾಗೇ ನಡೀತಾ ಇತ್ತು. ಹೀಗಿರುವಾಗ ಒಂದ್ ದಿನ ಜಾಹ್ನವಿ ಅಪಘಾತವೊಂದ್ರಲ್ಲಿ ಗಾಯಗೊಳ್ತಾರೆ. ಆಗ ಚಿಕಿತ್ಸೆ ಪಡೆಯೋಕೆ ಊರಿಗೆ ಮರಳಿದ್ರು.
ಡಿಪ್ಲೋಮ ಕಂಟಿನ್ಯೂ ಮಾಡೋಕೆ ಆಗ್ಲಿಲ್ಲ. ಬಿಎ ಪದವಿಗೆ ಸೇರಿದ್ರು. ಪದವಿ ವ್ಯಾಸಂಗ ಮಾಡ್ತಿರುವಾಗಲೇ ಇವ್ರಿಗೆ ಮದುವೆ ಮಾಡಿದ್ರು. ಮದ್ವೆ ಆದ್ಮೇಲೆ, ಇನ್ನೇನ್ ಓದ್ತಾಳೆ, ಏನ್ ಮಾಡ್ತಾಳೆ ಅಂತ ಕೆಲವ್ರು ಮಾತಾಡ್ಕೊಂಡಿದ್ದೂ ಇದೆ. ಆದ್ರೆ, ಅವ್ರುಗಳ ಕೆಟ್ಟ ಆಲೋಚನೆಗಳು ಸತ್ಯವಾಗ್ಲಿಲ್ಲ. ಅತ್ತೆ, ಮಾವ, ಪತಿ ತುಂಬಾನೇ ಸಪೋರ್ಟ್ ಮಾಡಿದ್ರು. ಉದಯ ನ್ಯೂಸ್ ನಲ್ಲಿದ್ದ ನಿರೂಪಕಿ ಜಯಶ್ರೀ ಶೇಖರ್ ಅವರ ಪರಿಚಯವಾಯ್ತು. ಅವ್ರಿಂದಾಗಿ 2012ರಲ್ಲಿ ಉದಯ ನ್ಯೂಸ್ ಮೂಲಕ ಮೀಡಿಯಾ ಜರ್ನಿ ಆರಂಭಿಸಿದ್ರು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಜಾಹ್ನವಿ ಮತ್ತೆ ಹಿಂತಿರುಗಿ ನೋಡ್ಲೇ ಇಲ್ಲ ಅನ್ನೋದು ಬಿಡಿಸಿ ಹೇಳ್ಬೇಕೆ…?
ಉದಯದಲ್ಲಿ ಹೆಚ್ಚು ಕಡಿಮೆ ಒಂದ್ ವರ್ಷ ಕೆಲ್ಸ ಮಾಡಿದ್ರು. ಅಲ್ಲಿಂದ 2013ರಲ್ಲಿ ಟಿವಿ9 ಗೆ ಪ್ರವೇಶ. ಅಲ್ಲಿ ಕಾರಣಾಂತರದಿಂದ ಮೂರ್ ತಿಂಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಕ್ಕೆ ಆಗಿಲ್ಲ. ಅನಿವಾರ್ಯವಾಗಿ ಟಿವಿ9ಗೆ ಗುಡ್ ಬೈ ಹೇಳಿದ್ರು.
ಮುಂದೆ..? ಎಂಬ ಪ್ರಶ್ನೆ ಎದುರಾದಾಗ ತೆರೆದಿದ್ದೇ ಬಿಟಿವಿ. ಇಲ್ಲಿ ಇವ್ರು ಸಿಗ್ನೇಚರ್ ಪ್ರೋಗ್ರಾಂ ‘ಊರು-ಕೇರಿ’. ಒಂದು-ಒಂದುವರೆ ವರ್ಷ ಬಿಟಿವಿಯಲ್ಲಿ ಕೆಲ್ಸ ಮಾಡಿದ್ರು. ಅಷ್ಟರಲ್ಲಿ (2015) ಅಂದಿನ ಈ-ಟಿವಿ, ಇಂದಿನ ನ್ಯೂಸ್ 18 ಕನ್ನಡದಿಂದ ಆಫರ್ ಬಂತು. ಒಳ್ಳೇ ಆಫರ್ ಸಿಕ್ರೆ ಯಾರ್ ತಾನೆ ಬಿಡ್ತಾರೆ..? ಜಾಹ್ನವಿ ಬಿಟಿವಿ ಬಿಟ್ಟು ಈ-ಟಿವಿಗೆ ಹೋದ್ರು. ನೀವು ಮೊನ್ನೆ ಮೊನ್ನೆ ತನಕವೂ ನ್ಯೂಸ್18ಕನ್ನಡದಲ್ಲಿ (ಈ-ಟಿವಿ) ಇವ್ರು ನಡೆಸಿಕೊಡ್ತಿದ್ದ ಸ್ಪೆಷಲ್ ಪ್ರೋಗ್ರಾಮ್ಸ್, ಡಿಸ್ಕಶನ್ಸ್ ಎಲ್ಲವನ್ನು ನೋಡಿರ್ತೀರಿ. ಶೀಘ್ರದಲ್ಲೇ ಆರಂಭವಾಗಲಿರೋ ‘ಫಸ್ಟ್ ನ್ಯೂಸ್’ ಟೀಂ ಸೇರಲಿದ್ದಾರೆ.
ಜಾಹ್ನವಿ ಅವ್ರಿಗೆ ಅವರ ಮಗ ಗ್ರಂಥ್ ಅಂದ್ರೆ ಪ್ರಾಣ. ಅವ್ನು ತನ್ನ ವಯಸ್ಸಿಗಿಂತ ಹೆಚ್ಚು ಮಾತಾಡ್ತಿರ್ತಾನಂತೆ. ಇದನ್ನು ಕೇಳಿಸಿಕೊಂಡು ಜಾಹ್ನವಿ ಎಂಜಾಯ್ ಮಾಡ್ತಾರೆ. ಇವ್ನನನ್ನು ನೋಡಿದ ಕೂಡ್ಲೇ ಕೆಲ್ಸದ ಒತ್ತಡ, ದಣಿವು ಎಲ್ಲವೂ ಮಾಯಾ ಆಗುತ್ತೆ ಅಂತ ಹೇಳ್ತಾರೆ.
ಇವತ್ತು ತುಂಬಾ ಖುಷಿ ಖುಷಿಯಿಂದಿರೋ ಇವ್ರನ್ನ ಕಾಡೋದು ತಂದೆಯ ಸಾವು. ಜಾಹ್ನವಿ ಅವ್ರು ಮೀಡಿಯಾಕ್ಕೆ ಸೇರಿದ್ದ ಆರಂಭದಲ್ಲಿ ತಂದೆ ಇದ್ರು. ದಿನ ಮಗಳು ನ್ಯೂಸ್ ಪ್ರೆಸೆಂಟ್ ಮಾಡೋದನ್ನು ನೋಡ್ತಿದ್ರು. ಆದರೆ, ಈಗ ಅವರಿಲ್ಲ. ನಾಲ್ಕು ಜನರು ಗುರುತು ಹಿಡಿಯೋ ಹೊತ್ತಿಗೆ ಅವ್ರು ಜೊತೆ ಇರ್ಬೇಕಿತ್ತು ಅನ್ನೋ ಕೊರಗು ಜಾಹ್ನವಿ ಅವರದ್ದು.
ಜಾಹ್ನವಿ ಅವ್ರ ಬಗ್ಗೆ ಇಷ್ಟೆಲ್ಲಾ ಹೇಳಿದ್ಮೇಲೆ ಅವ್ರು ಮೀಡಿಯಾದಲ್ಲಿ ಯಾರನ್ನೆಲ್ಲಾ ನೆನಪು ಮಾಡಿಕೊಳ್ತಾರೆ ಅನ್ನೋದನ್ನು ಹೇಳದೇ ಇರೋಕೆ ಆಗುತ್ತಾ…? ನನ್ನ ಬಗ್ಗೆ ಏನು ಬರೆಯದೇ ಇದ್ರು ಬೇಜಾರಿಲ್ಲ, ನನಗೆ ಮಾರ್ಗದರ್ಶನ ನೀಡಿ, ಪ್ರೋತ್ಸಾಹ ನೀಡುವವರ ಬಗ್ಗೆ ಬರೆಯಲೇ ಬೇಕು ಅಂತ ಪ್ರೀತಿಯಿಂದ ಒತ್ತಾಯ ಮಾಡಿದ್ದಾರೆ ಜಾಹ್ನವಿ ಅವರು. ಇದು ಅವರ ದೊಡ್ಡಗುಣಕ್ಕೆ ಹಿಡಿದ ಕನ್ನಡಿ…
ಅನುಭವಿ ಪತ್ರಕರ್ತ ಸಮೀವುಲ್ಲಾ ಅವರು ತನ್ನ ಗಾಡ್ ಫಾದರ್ ಎಂದು ಜಾಹ್ನವಿ ಹೆಮ್ಮೆಯಿಂದ ಹೇಳಿಕೊಳ್ತಾರೆ. “ಏನೇ ಡಿಸ್ಕಶನ್ಸ್, ಯಾವುದೇ ಪ್ರೋಗ್ರಾಂ ಇರಲಿ ಸಮೀವುಲ್ಲಾ ಅವರಿಗೆ ಕಾಲ್ ಮಾಡಿ ಪಾಯಿಂಟ್ಸ್ ತಗೋಳ್ತಾರೆ. ಹುಷಾರಿಲ್ಲದೆ ಐಸಿಯುನಲ್ಲಿದ್ದಾಗಲೂ ನನಗೆ ಡಿಸ್ಕಶನ್ ಗೆ ಬೇಕಾದ ಪಾಯಿಂಟ್ ಗಳನ್ನು ಹೇಳಿದ ಪುಣ್ಯಾತ್ಮರು. ನನ್ನ ಪರ್ಸನಲ್ ಲೈಫ್ ಹಾಗೂ ಪ್ರೊಫೆಶನಲ್ ಲೈಫ್‍ನಲ್ಲೂ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳೋದು ಅವರನ್ನು ಕೇಳಿಯೇ…ನನ್ನ ಇವತ್ತು ಜನ ಗುರುತು ಹಿಡಿಯುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಸಮೀವುಲ್ಲಾ ಸರ್ರೇ…ತುಂಬಾ ಹೇಳಿಕೊಟ್ಟಿದ್ದಾರೆ. ತಪ್ಪುಗಳನ್ನು ತಿದ್ದಿದ್ದಾರೆ. ಅವರಲ್ಲಿ ನಾನು ದೇವರನ್ನು ನೋಡ್ತೀನಿ. ಕೊನೆ ಉಸಿರು ಇರೋ ತನಕ ಅವರನ್ನು ಮರೆಯಲ್ಲ” ಎನ್ನುತ್ತಾರೆ ಜಾಹ್ನವಿ.
ಉದಯದಲ್ಲಿ ಅವಕಾಶ ಕೊಡಿಸಿದ ಜಯಶ್ರೀ ಶೇಖರ್, ಬಿ ಟಿವಿಯಲ್ಲಿ ಸದಾ ಪ್ರೋತ್ಸಾಹ ನೀಡ್ತಿದ್ದ ಭೂಷಣ್, ಈ ಟಿವಿಗೆ ಮೊದಲು ಬರಮಾಡಿಕೊಂಡ ರಂಗನಾಥ್ ಭಾರಧ್ವಜ್ (ಈಗ ಟಿವಿ9ನಲ್ಲಿದ್ದಾರೆ), ಡಿ.ಪಿ ಸತೀಶ್ ಹಾಗೂ ಈಗಿನ ಪ್ರಧಾನ ಸಂಪಾದಕ ಅನಂತ್ ಚಿನಿವಾರ ಅವರು ಸಹ ತುಂಬಾನೇ ಸಪೋರ್ಟ್ ಮಾಡಿದ್ದಾರೆ, ಮಾಡ್ತಿದ್ದಾರೆ ಎಂದು ನೆನೆಯುತ್ತಾರೆ.
ನಾನು ಡಿಬೇಟ್ ಅಂತ ಮಾಡಿದ್ದೇ ಈ-ಟಿವಿಗೆ ಬಂದಮೇಲೆ. ನನಗೆ ತುಂಬಾ ಭಯ ಇತ್ತು. ನನ್ನಲ್ಲಿನ ಭಯ ಹೋಗಿದೆ, ಡಿಬೇಟ್ ಮಾಡ್ತೀನಿ ಅಂದ್ರೆ ಕಾರಣನೇ ರಂಗನಾಥ್ ಭಾರಧ್ವಜ್ ಸರ್. ಇವರನ್ನು ಜಾಹ್ನವಿ ಯಾವತ್ತಿಗೂ ನೆನೆಸಿಕೊಳ್ತಾರಂತೆ.
‘ರವಿಕುಮಾರ್ ಮತ್ತು ಮಾರುತಿ ಮಾಧ್ಯಮ ಕ್ಷೇತ್ರದ ಸೂಪರ್ ಸ್ಟಾರ್ ಗಳು. ಅವರ ಜೊತೆ ಕೆಲಸ ಮಾಡ್ಬೇಕು ಅನ್ನೋ ಆಸೆ ತುಂಬಾ ಇತ್ತು. ಹಿಂದೆ ಟಿವಿ9ನಲ್ಲಿರುವಾಗ ತುಂಬಾ ಸಮಯ ಕೆಲಸ ಮಾಡೋಕೆ ಆಗಿರ್ಲಿಲ್ಲ. ಮತ್ತೆ ಕೆಲಸ ಮಾಡ್ಬೇಕು ಅನ್ನೋ ಮಹದಾಸೆ ಇತ್ತು.
ಕನಸು ನನಸಾಗಿದೆ. ಈ-ಟಿವಿ ಬಿಡಬೇಕು ಅಂತೇನೂ ಇರ್ಲಿಲ್ಲ. ರವಿಕುಮಾರ್, ಮಾರುತಿ ಅವರ ಫಸ್ಟ್ ನ್ಯೂಸ್ ನಿಂದ ಅವಕಾಶ ಬಂದಾಗ ಇಲ್ಲ ಎನ್ನಲಾಗದೆ ಖುಷಿಯಿಂದ ಹೋಗುತ್ತಿದ್ದೇನೆ. ಮುಂದೆ ನನ್ನ ವೃತ್ತಿ ಬದುಕನ್ನು ಹಿಂತಿರುಗಿ ನೋಡಿದಾಗ ಇಂಥಾ ದಿಗ್ಗಜರ ಜೊತೆ ಕೆಲಸ ಮಾಡಿದ ಸಂತೋಷ, ಹೆಮ್ಮೆ ಇರುತ್ತೆ’ ಎಂದು ಮನದಾಳದ ಮಾತುಗಳನ್ನು ಜಾಹ್ನವಿ ಹಂಚಿಕೊಂಡ್ರು.
ಜಾಹ್ನವಿ ಕುಟುಂಬದ ಸದಸ್ಯರ ಬಗ್ಗೆ ಹೇಳೋದನ್ನು ಕೂಡ ಮರೆತಿಲ್ಲ. “ಮಾವ ರುದ್ರಮುನಿ ಮಹಡಿಯವರು, ಅತ್ತೆ ಸುಜಾತ ಮಹಡಿಯವರ ಆಶೀರ್ವಾದ, ಪ್ರೋತ್ಸಾಹ ಮಾಧ್ಯಮದಲ್ಲಿ ನನ್ನ ಬೆಳವಣಿಗೆಗೆ ಪ್ರಮುಖ ಕಾರಣ. ಇನ್ನು ಪತಿ ಕಾರ್ತಿಕ್ ಅವ್ರು ನೀಡೋ ಪ್ರೋತ್ಸಾಹ ದೊಡ್ಡದು.
ಮದುವೆ ಆದ ದಿನದಿಂದ ಕಾರ್ತಿಕ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಪ್ರೋತ್ಸಾಹ ಇಲ್ಲದೆ ನನ್ನ ಬೆಳವಣಿಗೆ ಸಾಧ್ಯವೇ ಇಲ್ಲ. ಮದುವೆ ಆದ್ಮೇಲೆ, ಮಗ ಗ್ರಂಥ್ ಹುಟ್ಟಿದ ಮೇಲೂ ಸಾಧನೆ ಹಾದಿಯಲ್ಲಿ ನಡೀತಿದ್ದೀನಿ ಅಂದ್ರೆ ಪತಿ ಕಾರ್ತಿಕ್ ಅವರೇ ಕಾರಣ.
ಮನೆಯ ಲಕ್ಷ್ಮಿಯಾಗಿ, ಅಮ್ಮನಾಗಿ ಉದ್ಯೋಗ ಮಾಡೋದು ಅಷ್ಟು ಸುಲಭವಲ್ಲ. ಸದಾ ಕಾಲ ಪ್ರೋತ್ಸಾಹವನ್ನು ನೀಡುತ್ತಾ, ಕೆಲಸಕ್ಕೆ ಹೋದಾಗ ಮಗುವನ್ನು ನೋಡಿಕೊಳ್ಳುತ್ತಾ ನನ್ನ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಅಪಪ್ರಚಾರಗಳನ್ನು ನಂಬದೆ ನನಗೆ ಹುರುದುಂಬಿಸಿ, ಪಾಸಿಟೀವ್ ಎಜರ್ನಿ ತುಂಬುತ್ತಾರೆ. ಅತ್ತೆ-ಮಾವ ಆಧುನಿಕ ಕಾಲಕ್ಕೆ ತಕ್ಕ ಆಲೋಚನೆಗಳನ್ನು ಮಾಡ್ತಾರೆ. ಯಾವುದಕ್ಕೂ ಏನೂ ಹೇಳಲ್ಲ. ಇದು ಅತ್ಯಂತ ಮುಖ್ಯ. ಜೊತೆಗೆ ಅಣ್ಣ, ಅತ್ತಿಗೆ ಸೇರಿದಂತೆ ಇಡೀ ಕುಟುಂಬದವರ ತ್ಯಾಗ ತನ್ನ ಅಲ್ಪ ಸಾಧನೆಯ ಹಿಂದಿದೆ’’ ಎಂದು ಜಾಹ್ನವಿ ಹೇಳುತ್ತಾರೆ.
ಇನ್ನು ಮಾಧ್ಯಮ ಹಾಗೂ ಕುಟುಂದ ಆಚೆಗೆ ಜಾಹ್ನವಿ ನೆನೆಯುವ ವ್ಯಕ್ತಿ ವೆಂಕಟೇಶ್. ಇವ್ರು ಕೆ.ಸಿ ಜರ್ನಲ್ ಲಿ ಲ್ಯಾಬ್ ಟೆಕ್ನಿಶನ್. ಇವರು ಜಾಹ್ನವಿ ಅವರಿಗೆ ಒಳ್ಳೆಯ ಫ್ರೆಂಡ್, ಗುರು ಎಲ್ಲವೂ ಹೌದು. ಸುಖ, ದುಃಖ ಎಲ್ಲಾ ಟೈಮ್ ನಲ್ಲೂ ಜೊತೆಗಿದ್ದಾರೆ. ಮುಂದೆಯೂ ಜೊತೆಗಿರ್ತಾರೆ ಎಂಬ ಭರವಸೆ ಜಾಹ್ನವಿ ಅವರಿಗಿದೆ.
ಕ್ಲೋಸ್ ಫ್ರೆಂಡ್ಸ್ ನಲ್ಲಿ ಈ ವೆಂಕಟೇಶ್ ಅವ್ರು, ಫರನಾ ಭಾನು ಹಾಗೂ ಅದೇರೀತಿ ಆಪತ್ಭಾಂದವರಂತಿರೋ ಪ್ರವೀಣ್ ಅವರಿಗೆ ಜಾಹ್ನವಿ ಅವರಲ್ಲಿ ಮೊದಸ್ಥಾನವಂತೆ. ಫರಾನ ಮತ್ತು ಜಾಹ್ನವಿ ಅವ್ರು 5ನೇ ಕ್ಲಾಸ್‍ನಿಂದಲೂ ಬೆಸ್ಟ್ ಫ್ರೆಂಡ್ಸ್. ಇವರಿಬ್ಬರು ದೀಪದ ಕಂಬದ ಕೆಳಗೆ ಓದ್ತಿದ್ರಂತೆ. ಜಾಹ್ನವಿ ಅವರ ಸಾಧನೆ ಕಂಡು ಫರಾನ ಅವರಷ್ಟು ಖುಷಿ ಪಡೋರು ಯಾರೂ ಇಲ್ಲ.
ವಿದ್ಯಾಭ್ಯಾಸ ಮಾಡಿದ ಸಕಲೇಶಪುರದ ಸಂತ ಜೋಸೆಫರ ಶಾಲೆಯಲ್ಲಿ ಸಿಸ್ಟರ್ ಪೌಲಿನ್ ಅಂತಿದ್ರು. ಇವರನ್ನು ಸ್ಮರಿಸಿಕೊಳ್ಳೋ ಜಾಹ್ನವಿ, ‘ ಅವರು ನನಗೆ ಸ್ಪೂರ್ತಿ. ನೀನು ಐಎಎಸ್ ಆಫೀಸರ್ ಆಗ್ಬೇಕು ಅಂತ ಹೇಳ್ತಿದ್ರು. ಅವರು ಮತ್ತು ಅಲ್ಲಿನ ಎಲ್ಲಾ ಶಿಕ್ಷಕರು ನನಗೆ ಕನ್ನಡ ಕಲಿಸಿಕೊಟ್ರು. ಚೆನ್ನಾಗಿ ಕನ್ನಡ ಮಾತಾಡ್ತಿದ್ದೀನಿ. ಕನ್ನಡ ಅನ್ನ ಹಾಕ್ತಿದೆ ಎನ್ನೋದಕ್ಕೆ ಕಾರಣ ಎಲ್ಲಾ ಶಿಕ್ಷಕರು. ಅದರಲ್ಲೂ ಮುಖ್ಯವಾಗಿ ಸಿಸ್ಟರ್ ಪೌಲಿನ್ ಎನ್ನುತ್ತಾರೆ.
ಮಾಧ್ಯಮ ಕ್ಷೇತ್ರದಲ್ಲೇ ಏನಾದ್ರು ಸಾಧಿಸಬೇಕು, ಸಮಾಜಕ್ಕೆ ಒಳಿತು ಮಾಡ್ಬೇಕು ಅನ್ನೋದು ಜಾಹ್ನವಿ ಅವ್ರ ಭವಿಷ್ಯದ ಕನಸು. ಇವ್ರ ಕನಸುಗಳೆಲ್ಲಾ ನನಸಾಗಲಿ…
ಶುಭವಾಗಲಿ ಮೇಡಂ
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ
67) 22 ಜನವರಿ 2018 : ಪ್ರಜ್ವಲ ಹೊರನಾಡು
ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
68) 25 ಜನವರಿ 2018 : ಮಂಜುನಾಥ್ ದಾವಣಗೆರೆ
ಜನವರಿ 26 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
69) 27 ಜನವರಿ 2018 : ರಕ್ಷತ್ ಶೆಟ್ಟಿ
70) 28 ಜನವರಿ 2018 : ಶಿವಶಂಕರ್
ಜನವರಿ 27 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
71) 28 ಜನವರಿ 2018 : ಸ್ಮಿತ ರಂಗನಾಥ್
ಜನವರಿ 29, 30,31, ಫೆಬ್ರವರಿ1 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
72) 2 ಫೆಬ್ರವರಿ 2018 : ಜಾಹ್ನವಿ