ಗರ್ಭ ಧರಿಸಿದ್ದಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರ….? ಇಂಥಾ ಒಂದು ಘಟನೆ ನಿಮ್ಮ ಕಿವಿಗೆ ಅಂತೆಕಂಥೆ ರೂಪದಲ್ಲಾದರೂ ಬಿದ್ದಿದೆಯೇ…? ಇಲ್ಲ…ಸಾಧ್ಯವೇ ಇಲ್ಲ…!
ಆದರೆ, ಇದೀಗ ಹೀಗೊಂದು ಸುದ್ದಿ ಬಂದಿದೆ. ಆಶ್ಚರ್ಯ ಎನಿಸಿದರೂ ಸತ್ಯವಿದು. ಮಹಿಳೆಯೊಬ್ಬರು ಗರ್ಭಧರಿಸಿದ್ದಾರೆ ಎಂಬ ಕಾರಣಕ್ಕೆ ಆಕೆಯನ್ನು ಸಂಸ್ಥೆಯ ಬಾಸ್ ಕೆಲಸದಿಂದ ತೆಗೆದು ಹಾಕಿರುವ ವಿಚಿತ್ರ ಘಟನೆಯೊಂದು ಜಪಾನಿನಲ್ಲಿ ನಡೆದಿದೆ.
ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಮದುವೆಯಾಗಲುವ ಮತ್ತು ಮಕ್ಕಳನ್ನು ಹೆರಲು ಸಂಸ್ಥೆ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟಿದೆ. ಆದರೆ, ಮಹಿಳೆಯೊಬ್ಬರು ತಮ್ಮ ಸರದಿ ಬರೋ ಮುನ್ನವೇ ಗರ್ಭಧರಿಸಿದ್ದಕ್ಕೆ, ನಿಯಮ ಮೀರಿ ನಡೆದಿದ್ದಾರೆಂದು ಕೆಲಸದಿಂದ ವಜಾ ಮಾಡಿದ್ದಾರಂತೆ…!