ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರೈತರನ್ನು ಸಂಶೋಧನೆಗಾಗಿ ಇಸ್ರೆಲ್ ಗೆ ಕಳುಹಿಸೋದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ದಾವಣಗೆರೆಯ ಜಗಳೂರಿನಲ್ಲಿ ವಿಕಾಸ ಪರ್ವ ಯಾತ್ರೆಯಲ್ಲಿ ಮಾತಾಡಿದ ಅವರು, ಇಸ್ರೇಲ್ ನಲ್ಲಿ 200ಸಂಶೋಧಕರನ್ನು ಭೇಟಿಯಾಗಿದ್ದು, ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ್ರೆ ಕೃಷಿ ಬಗ್ಗೆ ತಿಳಿದುಕೊಳ್ಳಲು ಅಲ್ಲಿಗೆ ರೈತರನ್ನು ಕಳುಹಿಸ್ತೀನಿ ಅಂದ್ರು.

ಮುಂದುವರೆದು ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಜಾಹಿರಾತುಗಾಗಿ 1ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ. ಟಿವಿ ಆನ್ ಮಾಡಿದ್ರೆ ಸಾಕು ಜಾಹಿರಾತು… ಜನರ ದುಡ್ಡನ್ನು ದುಂದು ವೆಚ್ಚ ಮಾಡಿ ಜಾಹಿರಾತು ನೀಡ್ತಿದ್ದಾರೆ ಎಂದು ಕಿಡಿಕಾರಿದ್ರು.







