ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಟುಕೊಂಡಂಗಾಯ್ತು ಈ ಮಹಿಳೆಯ ಸ್ಟೋರಿ

Date:

ಹೊಟ್ಟೆಕಿಚ್ಚಿನ ಜನ ಈ ಜಗತ್ತಿನಲ್ಲಿ ಎಲ್ಲಿಲ್ಲ ಹೇಳಿ..? ಪಕ್ಕದ ಮನೆಯವರು ಏನೇ ತಂದರೂ ವ್ಹಾ.. ತುಂಬಾ ಚನ್ನಾಗಿದೆ ಎಂದು ಅವರ ಮುಂದೆ ಹೊಗಳುತ್ತಾ.. ಹೊಟ್ಟೆಯಲ್ಲಿ ಬೆಂಕಿಯ ಕಿಚ್ಚು ಕಟ್ಟಿಕೊಂಡಿರುತ್ತಾರೆ. ಅವುಗಳು ಗೊತ್ತಾಗದೇ ಇದ್ದರೂ ಹಣೆಬರಹ ಕೆಟ್ಟಾಗ ತಾನಾಗಿಯೇ ಸಿಕ್ಕಿಕೊಳ್ಳುತ್ತದೆ. ಅಂತಹ ಒಂದು ಹೊಟ್ಟೆ ಕಿಚ್ಚಿನಿಂದ ಮಾಡಬಾರದನ್ನು ಮಾಡಲು ಹೋಗಿ ಸಿಕ್ಕಿಬಿದ್ದ ಒಂದು ಸ್ಟೋರಿ ಇಲ್ಲಿದೆ.
ಪಕ್ಕದ ಮನೆಯ ಹುಡುಗನಿಗೆ ಉನ್ನತ ವ್ಯಾಸಾಂಗ ಮಾಡಲು ಆಸ್ಟ್ರೇಲಿಯಾದಲ್ಲಿ ಸೀಟು ಲಭಿಸಿದ್ದು ತನ್ನ ಮಗಳಿಗೆ ಆ ಸೀಟು ಲಭ್ಯವಾಗಲಿಲ್ಲವಲ್ಲಾ ಎಂದು ಹೊಟ್ಟೆ ಉರಿಯಿಂದ ಏನೋ ಮಾಡಲು ಹೋಗಿ ಸಿಕ್ಕಿಬಿದ್ದಳು ನೋಡಿ.
ಜೈಪುರ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗೆ ಆಸ್ಟ್ರೇಲಿಯಾದ ಪ್ರತಿಷ್ಠಿತ ವಿದ್ಯಾನಿಲಯದಲ್ಲಿ ಉನ್ನತ ವ್ಯಾಸಾಂಗ ಮಾಡುವ ಅವಕಾಶ ಸಿಕ್ಕಿತ್ತು. ಇದೇ ವಿವಿಯಲ್ಲಿ ತನ್ನ ಮಗಳಿಗೂ ವ್ಯಾಸಾಂಗ ಮಾಡಬೇಕೆಂಬ ಬಯಕೆಯಿದ್ದು ಆಕೆಗೆ ಅಲ್ಲಿ ಸೀಟು ಲಭಿಸಿರಲಿಲ್ಲ. ಇದರಿಂದ ತಾಯಿಗೆ ಒಳಗೊಳಗೇ ಜ್ವಾಲಾಮುಖಿ ಕುದಿಯತೊಡಗಿ ಅವಕಾಶಕ್ಕಾಗಿ ಕಾಯುತ್ತಿದ್ದಳು.
ವಿದ್ಯಾರ್ಥಿ ಬಲ್‍ರಾಜ್ ಸಿಂಗ್ ಆಸ್ಟ್ರೇಲಿಯಾಕ್ಕೆ ಹೊರಡಲು ಎಲ್ಲಾ ಸಿಧ್ದತೆ ಮಾಡಿಕೊಂಡು ಪೋಷಕರ ಜೊತೆ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ ಆ ಮಹಿಳೆ ಈತನ ಬ್ಯಾಗಿನಲ್ಲಿ ಸ್ಪೋಟಕಗಳು ಸಾಗಿಸುತ್ತಿರುವುದಾಗಿ ಹೇಳಿದ್ದಳು.
ಮಾಹಿತಿಯಿಂದ ಆತಂಕಗೊಂಡ ವಿಮಾನ ನಿಲ್ದಾಣದ ಸಿಬ್ಬಂಧಿ, ಬಲ್‍ರಾಜ್ ಸಿಂಗ್‍ನನ್ನು ತಡೆದು ವಿಚಾರಿಸಿದಾಗ ಆತನ ಬ್ಯಾಗಿನಲ್ಲಿ ಯಾವುದೇ ಸ್ಪೋಟಕಗಳು ಇರವುದು ಕಂಡು ಬಂದಿರುವುದಿಲ.್ಲ ಅಲ್ಲದೇ ಆತ ಉನ್ನತ ವ್ಯಾಸಾಂಗಕ್ಕಾಗಿ ಆಸ್ಟ್ರೇಲಿಯಾಗೆ ಹೋಗುತ್ತಿರುವ ಮಾಹಿತಿ ತಿಳಿಯಿತು.
ಅನುಮಾನಗೊಂಡ ವಿಮಾನ ಸಿಬ್ಬಂದಿ ಈ ನಂಬರ್‍ನಿಂದ ನಮಗೆ ತಪ್ಪು ಮಾಹಿತಿಯ ಕರೆ ಬಂದದ್ದು ಎಂದು ಹೇಳಿದಾಗ ಪೋಷಕರಿಗೆ ಅದು ತಮ್ಮ ಪಕ್ಕದ ಮನೆಯ ಮಹಿಳೆಯ ನಂಬರ್ ಎಂದು ತಿಳಿದು ಬಂದಿತ್ತು. ಇದೀಗ ಆಕೆಯ ಮೇಲೆ ಕ್ರಮಕ್ಕೆ ಮುಂದಾಗಿದ್ದು ವಿದ್ಯಾರ್ಥಿಗೆ ತೊಂದರೆ ಕೊಡಲು ಹೋದ ಮಹಿಳೆ ಈಗ ತಾನೇ ಸಂಕಷ್ಟಕ್ಕೆ ಗುರಿಯಾಗಿದ್ದಾಳೆ.

POPULAR  STORIES :

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...