ಅಪಘಾತದಲ್ಲಿ ತುಂಡಾದ ಕಾಲನ್ನೇ ವೈದ್ಯರು ಗಾಯಾಳುವಿಗೆ ತಲೆದಿಂಬು ಮಾಡಿದ ಅಮಾನವೀಯ ಘಟನೆ ಝಾನ್ಸಿಯಲ್ಲಿ ಬೆಳಕಿಗೆ ಬಂದಿದೆ.
ಬಮೌರ್ ಗ್ರಾಮದಲ್ಲಿ ಶಾಲಾ ಬಸ್ ವೊಂದು ರಸ್ತೆಯಲ್ಲಿದ್ದ. ದನಗಳಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತದಲ್ಲಿ ಬಸ್ ಕ್ಲೀನರ್ ಧ್ಯಾನ್ ಶ್ಯಾಮ್ ಎಂಬುವವರ ಕಾಲು ತುಂಡಾಗಿದೆ.ಜೊತೆಗೆ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಧ್ಯಾನ್ ಶ್ಯಾಮ್ ಅವರನ್ನು ಝಾನ್ಸಿಯ ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ತುಂಡಾದ ಕಾಲನ್ನು ಗಾಯಾಳುಗೆ ತಲೆದಿಂಬಿನಂತೆ ಬಳಸಿದ್ದಾರೆ. ಇದರ ವಿರುದ್ಧ ಕುಟುಂಬದವರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ಸೂಕ್ತಕ್ರಮಕ್ಕೆ ಮುಂದಾಗುವುದಾಗಿ ಪ್ರಿನ್ಸಿಪಾಲ್ ಸಧ್ನಾ ಕೌಶಿಕ್ ಹೇಳಿದ್ದಾರೆ.