ರಿಲೆಯನ್ಸ್ ಜಿಯೋ ಸಂಸ್ಥೆ ಗ್ರಾಹಕರಿಗೆ ಶಾಕ್ ನೀಡಿದೆ. ಬೇಕಾಬಿಟ್ಟಿ ಗಂಟೆಗಟ್ಟಲೆ ಮಾತನಾಡುವ ಅವಕಾಶಕ್ಕೆ ಕಡಿವಾಣ ಹಾಕಲು ಸಂಸ್ಥೆ ನಿರ್ಧರಿಸಿದೆ.
ಅನ್‍ಲಿಮಿಟೆಡ್ ಕರೆ ಹಾಗೂ ಅನ್‍ಲಿಮಿಟೆಡ್ ಇಂಟರ್ನೆಟ್ ಡೇಟಾ ಸೇವೆ ನೀಡಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ಜಿಯೋ ಇದೀಗ ಆನ್‍ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸ್ಥಗಿತಗೊಳಿಸಲು ತೀರ್ಮಾನ ಮಾಡಿದೆ. ಇನ್ನು ಪ್ರತಿದಿನ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಬದಲಿಗೆ ಕೇವಲ 300 ನಿಮಿಷದವರೆಗೆ ಮಾತ್ರ ಮಾತಾಡಬಹುದಷ್ಟೇ.
ಹೀಗೆ ಇದ್ದಕ್ಕಿದ್ದಂತೆ ಜಿಯೋ ಅನ್‍ಲಿಮಿಟೆಡ್ ವಾಯ್ಸ್ ಕಾಲ್‍ಗೆ ಬ್ರೇಕ್ ಹಾಕಲು ನಿರ್ಧರಿಸಿದ್ದೇಕೆ? ಎಂಬ ಪ್ರಶ್ನೆ ಸಹಜವಾಗಿ ಗ್ರಾಹಕರಿಗೆ ಮೂಡುತ್ತೆ. ಅಷ್ಟೇಅಲ್ಲ, ಕೆಲವರು ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರೂ ಅಚ್ಚರಿ ಇಲ್ಲ. ಆದರೆ, ರಿಲೆಯನ್ಸ್ ಜಿಯೋ ಇದ್ದಕ್ಕಿದ್ದಂತೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದು ಈ ಆಫರ್‍ಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗ್ರಾಹಕರ ದೆಸೆಯಿಂದ! ಜಿಯೋ ಅನ್‍ಲಿಮಿಟೆಡ್ ವಾಯ್ಸ್ ಕಾಲ್‍ಗೆ ಕಡಿವಾಣ ಹಾಕಿದ್ದಕ್ಕೆ ಯಾರಾದ್ರೂ ಬೈಕೋಳೋದಿದ್ರೆ ಜಿಯೋ ಅವರಿಗೆ ಹಿಡಿಶಾಪ ಹಾಕ್ಬೇಡಿ. ಬದಲಾಗಿ ದುರುಪಯೋಗಪಡಿಸಿಕೊಂಡ ಗ್ರಾಹಕರನ್ನ ತರಾಟೆಗೆ ತೆಗೆದುಕೊಳ್ಳಿ.
ವೈಯಕ್ತಿಕ ಬಳಿಕೆಗೆ ಅಂತ ಜಿಯೋ ಕೊಟ್ಟ ಆಫರನ್ನ ಕೆಲವು ಖಾಸಗಿ ಸಂಸ್ಥೆಗಳು ಸೇರಿದಂತೆ ನಾನಾ ಗ್ರಾಹಕರು, ತಮ್ಮ ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ತಾ ಇದ್ದಾರಂತೆ! ಫೋನ್ ಕರೆಗಳ ಮೂಲಕ ತಮ್ಮ ಸಂಸ್ಥೆಯ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರಂತೆ ಇದರಿಂದ ಸಂಸ್ಥೆ ಅನ್‍ಲಿಮಿಟೆಡ್ ಕರೆಗೆ ಬ್ರೇಕ್ ಹಾಕಿದೆ. 28 ದಿನಗಳಲ್ಲಿ 3ಸಾವಿರ ನಿಮಿಷ ಅಂದರೆ ದಿನಕ್ಕೆ 300 ನಿಮಿಷ ಮಾತ್ರ ಕರೆ ಮಾಡಬಹುಷ್ಟೇ. ಒಟ್ನಲ್ಲಿ ಯಾರೋ ದುರಪಯೋಗ ಪಡಿಸಿಕೊಂಡಿದ್ದಕ್ಕೆ ಎಲ್ಲಾ ಜಿಯೋ ಗ್ರಾಹಕರು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯದಿಂದ ವಂಚಿತರಾಗಬೇಕಿದೆ.