ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!

Date:

ಈಗ ಎಲ್ಲೆಲ್ಲೂ ಜಿಯೋನದ್ದೇ ಸದ್ದು.. ಉಚಿತ ಜಿಯೋ ಸಿಮ್‍ಗಾಗಿ ಗ್ರಾಹಕರು ದಿನ ಗಟ್ಟಲೇ ಕ್ಯೂನಲ್ಲಿ ನಿಂತು ಕೊಂಡುಕೊಂಡ ಉದಾಹರಣೆಗಳೂ ಉಂಟು.. ಮಾರುಕಟ್ಟೆಗೆ ಬಂದು ತಿಂಗಳು ಕಳೆಯೋಕು ಮುನ್ನ ಜಿಯೋ ಸಿಮ್ ವಿಶ್ವದಾಖಲೆಯ ಗ್ರಾಹಕರನ್ನು ಹೊಂದಿದ್ದು ನಿಜ ಅದೇ ರೀತಿ ಜಿಯೋನ ಸದ್ದು ಕೂಡ ಈಗ ಕಡಿಮೆಯಾಗ್ತಾ ಇರೋದು ನಿಜ..! ಯಾಕಂದ್ರೆ ಪ್ರಸ್ತುತದ ಸನ್ನಿವೇಶವನ್ನು ಅವಲೋಕಿಸಿದಾಗ ಇದೀಗ ಜಿಯೋ ಸಿಮ್ ಕೊಂಡುಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.. ಕ್ಯೂನಲ್ಲಿ ಕೊಂಡುಕೊಂಡ ಅಂಗಡಿಗಳಲ್ಲಿ ಈಗ ಜನರೇ ಇಲ್ಲ.. ಇದಕ್ಕೆಲ್ಲಾ ಕಾರಣ ಇಷ್ಟೆ ಜಿಯೋ ಸಿಮ್‍ನ ವೇಗ ಕುಂಠಿತಗೊಳ್ತಾ ಇರೋದು..
ಖಂಡಿತ ಹೌದು.. ಜಿಯೋ ತನ್ನ ವೇಗವನ್ನು ಕಳೆದುಕೊಳ್ಳುತ್ತಿದೆ.. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ರಿಲಯಾನ್ಸ್ ಸಂಸ್ಥೆ ಹಾಗೆ ಬಿಟ್ಟಿದ್ದೇ ಆದಲ್ಲಿ ಈಗಿರುವ ಗ್ರಾಹಕರನ್ನೂ ಕಳೆದುಕೊಳ್ಳುವ ಆತಂಕವನ್ನೂ ಎದುರಿಸಬೇಕಾದೀತು.. ಜಿಯೋ ಸಿಮ್ ಗ್ರಾಹಕರಿಗೆ ತಲುಪಿ ಕೇವಲ 26 ದಿನಗಳಾಗಿವೆ ಅಷ್ಟೇ ಆಗಲೇ ಈ ಸಿಮ್ ಸುಮಾರು 16 ದಶಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ವಿಶ್ವ ದಾಖಲೆಯನ್ನು ಬರೆಯಿತು. ಅದೇ ರೀತಿ ಯುವ ಜನಾಂಗದ ಅಚ್ಚುಮೆಚ್ಚಿನ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್, ಟ್ವಿಟರ್‍ಗಳಿಗಿಂತಲೂ ಅತೀ ವೇಗದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತು. ಆದರೆ ಈಗ.. ಜಿಯೋನ ವರಸೆ ಕ್ಷೀಣಿಸುವಂತೆ ಗೋಚರವಾಗ್ತಾ ಇದೆ.. ಕಳೆದ ಕೆಲವು ದಿನಗಳಿಂದ ಜಿಯೋ ಸಿಮ್‍ನ ವೇಗ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬರ್ತಾ ಇದೆ. ಜಿಯೋನ ದೋಷದ ಕುರಿತು ಸಾರ್ವಜನಿಕ ಗಮನಕ್ಕೆ ತಂದಿರುವ ವಿಶ್ವದ ಅತ್ಯಂತ ವಿಶ್ವಾಸನಿಯ ಸ್ಪೀಡ್‍ಟೆಸ್ಟ್ ಪ್ರೊವೈಡರ್ ಆದ ಊಕ್ಲಾ ಇಂತಹದೊಂದು ಶಾಕಿಂಗ್ ನ್ಯೂಸ್ ಹೊರ ಹಾಕಿದೆ..! ಜಿಯೋ ನೆಟ್ವರ್ಕ್ ಈಗ ಸರ್ವೀಸ್‍ಗೆ ಸಂಬಂಧಪಟ್ಟ ಸಮಸ್ಯೆಯಿಂದ ತೀವ್ರವಾಗಿ ಬಳಲ್ತಾ ಇದೆ ಎಂದಿದೆ. ಮೊದಲಿನಂತೆ ಜಿಯೋ ಮೊಬೈಲ್‍ಗಳಲ್ಲಿ 4ಜಿ ನೆಟ್ವರ್ಕ್ ವೇಗ ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗ್ತಾ ಇಲ್ಲ ಎಂಬ ದೂರುಗಳು ರಿಲಯಾನ್ಸ್ ನತ್ತ ಹರಿದು ಬಂದಿದೆ. ಇದೀಗ 16 ದಶಲಕ್ಷಕ್ಕೂ ಅಧಿಕ ಜಿಯೋ ಗ್ರಾಹರನ್ನು ಹೊಂದಿರುವ ಈ ಸಂಸ್ಥೆ, ನೆಟ್ವರ್ಕ್ ಸಮಸ್ಯೆ ಹಾಗೂ ಇಂಟರ್‍ನೆಟ್ ಸಮಸ್ಯೆಯಿಂದ ಬಳಲುತ್ತಿರುವುದು ಬಹುಪಾಲು ಸತ್ಯ ಎಂದು ತಿಳಿದು ಬಂದಿದೆ. ಈ ಸಮಸ್ಯೆಯನ್ನು ರಿಲಯಾನ್ಸ್ ಬಹು ಬೇಗ ಬಗೆಹರಿಸದೇ ಇದ್ದಲ್ಲಿ ಈಗಿರುವ ಅರ್ಧದಷ್ಟು ಗ್ರಾಹಕರು ಜಿಯೋನಿಂದ ಹೊರ ನಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಎಷ್ಟು ಬೇಗ ಜಿಯೋ ಜನಪ್ರಿಯತೆಯ ಉತ್ತುಂಗಕ್ಕೆ ಏರಿತೋ ಅದೇ ವೇಗದಲ್ಲಿ ಪಾತಾಳಕ್ಕೆ ಕುಸಿಯೋದ್ರಲ್ಲಿ ಅನುಮಾನವೇ ಇಲ್ಲ ಎಂಬ ಆತಂಕವೂ ಕೂಡ ಎದುರಾಗಿದೆ.

POPULAR  STORIES :

News Channel Exposed | ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!

60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!

ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!

ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!

ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!

ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...