ಜಾನ್ಸನ್ ಅಂಡ್ ಜಾನ್ಸನ್ ಪೌಡರ್ ಕ್ಯಾನ್ಸರ್ ಗೆ ಕಾರಣ..! ರೂ.4929116400.00 ದಂಡ..!

admin
By admin
2 Min Read

ಈಗಂತೂ ಎಲ್ಲರ ಮನೆಯಲ್ಲೂ ಮಕ್ಕಳಿಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಬಳಸ್ತಾ ಇದಾರೆ, ಆದ್ರೆ ಅದೇ ಪೌಡರ್ ನಿಂದ ಕ್ಯಾನ್ಸರ್ ಗೆ ಬರುತ್ತೆ ಅಂದ್ರೆ ಹೇಗೆ ಶಾಕ್ ಆಗ್ಬೇಡ.. ಹೌದು ಇದು ನಿಜ

ಸುಮಾರು 35 ವರ್ಷಗಳಿಂದ  ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಬಳಸಿದ ಕಾರಣ ಅಲಬಾಮಾದ ಬಿರ್ಮಿಂಗ್‌ಹ್ಯಾಮ್ ನಿವಾಸಿಯಾಗಿದ್ದ ಫಾಕ್ಸ್, ಅಂಡಾಶಯದ ಕ್ಯಾನ್ಸರ್‌ನಿಂದ ಮೃತ ಪಟ್ಟಿದ್ದಾರೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಬಳಸಿದ ಕಾರಣ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವಾದಿಸಿದ ಕುಟುಂಬಕ್ಕೆ ರೂ.4929116400.00  ಪರಿಹಾರ ಧನ ನೀಡುವಂತೆ ಮಿಸ್ಸೋರಿ ನ್ಯಾಯಾಲಯ ಆದೇಶಿಸಿದೆ.
ಜಾಕ್ಲಿನ್ ಫಾಕ್ಸ್ ಎಂಬಾಕೆಯ ಕುಟುಂಬ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ವಿರುದ್ಧ ಕಾನೂನಿನ ಮೆಟ್ಟಿಲೇರಿತ್ತು. ಟಾಲ್ಕ್‌ಯುಕ್ತ ಉತ್ಪನ್ನಗಳು ಕ್ಯಾನ್ಸರ್‌ ಗೆ ಕಾರಣವಾಗುತ್ತದೆ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡದೇ ಇರುವುದಕ್ಕೆ ನ್ಯಾಯಾಲಯ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಅಲಬಾಮಾದ ಬಿರ್ಮಿಂಗ್‌ಹ್ಯಾಮ್ ನಿವಾಸಿಯಾಗಿದ್ದ ಫಾಕ್ಸ್, ಸುಮಾರು 35 ವರ್ಷಗಳಿಂದ ಬೇಬಿ ಪೌಡರ್ ಮತ್ತು ಶಾವರ್ ಟು ಶಾವರ್‌ನ್ನು ಬಳಸಿದ್ದರು. ಆಮೇಲೆ ಅವರಿಗೆ ಅಂಡಾಶಯದ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಯಿತು. ಮೂರು ವರ್ಷಗಳ ಕಾಲ ಕ್ಯಾನ್ಸರ್ ಪೀಡಿತರಾಗಿದ್ದ ಫಾಕ್ಸ್ 62ನೇ ವರ್ಷದಲ್ಲಿ ಸಾವಿಗೀಡಾಗಿದ್ದರು.
ಆಕೆಗೆ ಕ್ಯಾನ್ಸರ್ ಬರಲು ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನವೇ ಕಾರಣ ಎಂದು ಫಾಕ್ಸ್ ಕುಟುಂಬದ ವಕೀಲರು ವಾದಿಸಿದ್ದರು. ಈ ವಾದಕ್ಕೆ ವೈಜ್ಞಾನಿಕ ಸಾಕ್ಷ್ಯಗಳನ್ನು ವಕೀಲರು ಒದಗಿಸಿದ್ದು, ಇದನ್ನು ಪರಿಗಣಿಸಿದ ನ್ಯಾಯಾಲಯ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಫಾಕ್ಸ್ ಕುಟುಂಬಕ್ಕೆ ಪರಿಹಾರ ಧನ ನೀಡುವಂತೆ ಆದೇಶ ನೀಡಿದೆ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸ್ಮೃತಿ ಇರಾನಿ ಭಾಷಣಕ್ಕೆ `ಸತ್ಯಮೇವ ಜಯತೇ’ ಎಂದು ಮೋದಿ ಟ್ವೀಟ್.. !

ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

Share This Article