No menu items!
11.2 C
Munich
Friday, April 17, 2026

ನಾಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಂಗಳೂರಿಗೆ

Must read

 

ಮಂಗಳೂರಿನಲ್ಲಿ ಹತ್ಯೆಯಾದ ಮೂವರು ಯುವಕರ ಕುಟುಂಬಕ್ಕೆ ನಾಳೆ ಭೇಟಿ ನೀಡಲಿದ್ದೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಳೆ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ, ಹತ್ಯೆಯಾದ ಮಸೂದ್, ಪ್ರವೀಣ್ ನೆಟ್ಟರು ಹಾಗೂ ಫಾಜಿಲ್ ಮನೆಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ಇಲ್ಲಿ ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ, ರಾಜಕೀಯದ ದೊಡ್ಡಮಟ್ಟದ ಷಡ್ಯಂತ್ರವಿದೆ. ಭಾವನಾತ್ಮಕ ವಿಚಾರ ಕೆದಕಿ ರಾಜಕೀಯ ಲಾಭ ಪಡೆಯಲು, ಮತ ಪಡೆಯಲು ಕೆಲ ಪಕ್ಷ ಹೊರಟಿವೆ ಎಂದು ಟೀಕಿಸಿದರು. ಎಲ್ಲ ರಾಜಕೀಯ ಪಕ್ಷಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಘಟನೆಗಳ ಬಗ್ಗೆ ನಾನು ಹೇಳುವುದು ಇಷ್ಟೇ. ಯಾರು ಬೇಕಾದರೂ ಸಂಘಟನೆ ಮಾಡಿಕೊಳ್ಳಲಿ ನನ್ನ ತಕರಾರಿಲ್ಲ. ಆದರೆ ಈ ರೀತಿಯ ಹತ್ಯೆಗಳಿಂದ ಸಂಘಟನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article