ಜೈಂಟ್ ವ್ಹೀಲ್ ಕುಸಿದು 10 ವರ್ಷದ ಬಾಲಕಿ ದುರ್ಮರಣಕ್ಕೀಡಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಅಮೃತ ಮೃತೆ. ಈಕೆ ಅನಂತಪುರ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಮೋಜು ಮೇಳ ಪ್ರದರ್ಶನಕ್ಕೆ ತೆರಳಿದ್ದಳು.
ಈ ವೇಳೆ ಅಲ್ಲಿದ್ದ ಜೈಂಟ್ ವ್ಹೀಲ್ ನಲ್ಲಿ ಕುಳಿತಿದ್ದಳು. ತಿರುಗುತ್ತಿದ್ದ ಸಂದರ್ಭದಲ್ಲಿ ಅದು ಕುಸಿದು ಬಿದ್ದಿದ್ದರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ