ಅವಳು ಕಲ್ಪನಾ.. ಶಿವಮೊಗ್ಗ ಸಮೀಪದ ಒಂದು ಕುಗ್ರಾಮದವಳು.. ಆಸ್ಪತ್ರೆ, ಶಾಲೆ ಯಾವುದೂ ಇಲ್ಲದ ಊರು ಆಕೆಯದು..ಎಲ್ಲರಂತೆ ಹುಟ್ಟುತ್ತಲೇ ಸಾವಿರ ಕನಸುಗಳನ್ನ ಬೊಗಸೆ ಕಣ್ಣಲ್ಲಿ ತುಂಬಿಸಿಕೊಂಡವಳು. ಕನಸು ನನಸಾಗಿಸುವ ಪರಿಸರ ತನ್ನ ಸುತ್ತಮುತ್ತಲಿಲ್ಲ ಅನ್ನೋದು ಆಕೆಗಂದು ತಿಳಿದಿರಲಿಲ್ಲ… ಬಾಲ್ಯದಲ್ಲಿ ತಂದೆ ತಾಯಿಯಿಂದ ದೂರವುಳಿದು ಶಿಕ್ಷಣವನ್ನು ಪೂರೈಸಬೇಕಾದ ಅನಿವಾರ್ಯ. ಹಾಗಾಗಿ ಸಂಬಂಧಿಗಳ ಮನೆಯಲ್ಲಿದ್ದು ಓದು ಆರಂಭಿಸಿದಳು ಕಲ್ಪನಾ. ಆಗಲೇ ತಂದೆ ತಾಯಿಯ ಜೊತೆಗಿರುವ ಪುಟ್ಟ ಮನಸಿನ ಕನಸು ಭಗ್ನವಾಗಿದ್ದು.
ಅತೀ ಸಾಧಾರಣವಾದ ಸರ್ಕಾರಿ ಶಾಲೆಯಲ್ಲಿ ಆಕೆಯ ಪ್ರಾಥಮಿಕ ಶಿಕ್ಷಣ..ಕಲ್ಪನಾಳಿಗೆ ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ಆಸಕ್ತಿಯಿದ್ದರೂ ಪ್ರೋತ್ಸಾಹವೆಂಬ ನೀರು ಸಿಗದೇ ಒಣಗಿ ಹೋದ ಬಯಕೆ ಅದಾಗಿಹೋಯ್ತು.. ತನ್ನ ಸೌಂದರ್ಯದ ಬಗ್ಗೆ ಚಿಕ್ಕ ವಯಸ್ಸಿನಲ್ಲೆ ಗಮನ ಕಾಳಜಿ ಗೌರವ ಇದ್ದ ಕಾರಣ, ಸೌಂದರ್ಯದ ಬಗ್ಗೆ ಗಮನ ನೀಡ್ತಾಳೆ ಅನ್ನೋ ಕುಹಕದ ಮಾತು ಕೇಳಬೇಕಾಯ್ತು.
ಪ್ರೌಢ ಶಿಕ಼್ಷಣವಂತೂ ಇನ್ನಷ್ಟು ಸಂದಿಗ್ಧತೆಯಲ್ಲಿ ಆರಂಭ.. ಎಲ್ಲರಂತೆ ಅತೀ ನವಿರಾದ ಬಟ್ಟೆಯ ಕೊರತೆ, ಭಾಷೆಯ ಕಲಿಕೆಗೆ ಸರಿಯಾಗಿ ಸಿಗದ ಪಾಠ, ಓದು ಹೊರತು ಇನ್ನಾವುದಕ್ಕೂ ಇಲ್ಲದ ಪ್ರೊತ್ಸಾಹ ಹೀಗೆ ಎಲ್ಲದರಿಂದಲೂ ಕಲ್ಪನಾ ವಂಚಿತಳು.
ಎಲ್ಲವನ್ನ ಮುಗಿಸಿ ಕಾಲೇಜು ಹಂತಕ್ಕೆ ಬಂದಾಗ ಕಲ್ಪನಾ ಎದುರಿಸಿದ ಸವಾಲು ಹಲವಾರು. ಎಲ್ಲರಂತೆ ಆ ವಯಸ್ಸಿನಲ್ಲಿ ಪ್ರೀತಿಯ ಅಂಕುರವಾಗಿ ಅಲ್ಲಿಯೂ ಹಲವರು ಆಕೆಯ ಭಾವನೆಗಳೊಂದಿಗೆ ಆಟವಾಡಿದವರೇ.ಆಕೆಯ ಹೆತ್ತವರೇ ಆಕೆಯನ್ನ ಅನುಮಾನಿಸುವ ಹಲವಾರು ಘಟನೆಗಳು ಕಲ್ಪನಾ ಕಾಲೇಜು ಜೀವನದಲ್ಲಿ ನಡೆದೆ ಹೋಯ್ತು.
ಇಷ್ಟೆಲ್ಲಾ ಆದರೂ ಕನ್ನಡ ಹೊರತುಪಡಿಸಿ ಬೇರೆ ಭಾಷೆ ಬಾರದ ಆಕೆಯ ಬದುಕು ದೆಹಲಿಯಂತಹ ಮಹಾನಗರದಲ್ಲಿ ಮುಂದೆ ಆಕೆಗಾಗಿ ಕಾದಿತ್ತು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಕಾಲೇಜು ಪ್ರವೇಶಿಸುತ್ತಾಳೆ ಕಲ್ಪನಾ. ಭಾಷೆ ಗೊತ್ತಿರದ ಕಾರಣ ಪರೀಕ್ಷೆಗಳನ್ನ ಎದುರಿಸುವಲ್ಲಿ ವಿಫಲಳಾಗ್ತಾಳೆ… ಇಲ್ಲೂ ಹಲವರ ಮೋಡಿಯ ಮಾತಿಗೆ ಆಕೆ ತನ್ನ ಮನಸ್ಸನ್ನ ಕೊಟ್ಟು ಮಾನಸಿಕ ಅಸ್ಥಿರತೆಯನ್ನು ಅನುಭವಿಸುತ್ತಾಳೆ. ಕೊನೆಗೂ ಓದನ್ನ ಅರ್ಧಕ್ಕೆ ನಿಲ್ಲಿಸಿ ಆಕೆ ಆಯ್ಕೆ ಮಾಡಿಕೊಂಡಿದ್ದು ಮಾಡೆಲಿಂಗ್ ಜಗತ್ತನ್ನ.. ಆಕೆ ಸಾಧಾರಣ ಬಣ್ಣದವಳಾದರೂ ನೋಡಲು ರೂಪವಂತೆ. ಹಾಗಾಗಿ ಹಲವು ಸೋಲಿನ ನಂತರ ಆಕೆಗದು ಬದುಕು ಕಟ್ಟಿಕೊಡುವ ಮಾಧ್ಯಮವಾಗತ್ತೆ..
ಕೆಲವು ವರ್ಷಗಳ ಪಯಣದಲ್ಲಿ ಸಂತೋಷವನ್ನು ಆಕೆ ಅನುಭವಿಸುವ ಸಮಯ ಅದು. ಮತ್ತೆ ಆಕೆ ಮನಸ್ಸಿನ ಮಾತಿಗೆ ಸೋತು ವೈವಾಹಿಕ ಬಂದಕ್ಕೆ ಬಂಧಿಯಾಗ್ತಾಳೆ.. ಆತನೊಬ್ಬ ಕೋಪಿಷ್ಟ, ಭಾವನೆಗಳು ಇಲ್ಲದ ವ್ಯಕ್ತಿ, ತನ್ನವರು, ತವರಿನವರು ಯಾರನ್ನು ಗೌರವಿಸದ ಮನುಷ್ಯ.. ಸ್ವಾರ್ಥಿ.. ಆತನಂತೆ ಆತನ ಮನೆಯವರು ಅನ್ನೋದು ಆಕೆಗೆ ಸ್ಪಷ್ಟವಾಗಿ ಅರ್ಥವಾಗುವಷ್ಟರಲ್ಲಿ ಆಕೆಯ ಮಡಿಲು ತುಂಬಿತ್ತು.. ಮಗುವಿನ ಬದುಕಿಗಾಗಿ ತನ್ನೆಲ್ಲಾ ಮಹದಾಸೆಯನ್ನ ಬದಿಗೊತ್ತಿ ತಾಯಿಯಾಗಿ ಬದುಕಲಾರಂಬಿಸಿದ ಕಲ್ಪನಾ ನಂತರ ಗಂಡನಿಂದ ಎದುರಿಸಿದ್ದು ಬರೀ ಅವಮಾನಗಳನ್ನ.. ಕಷ್ಟದಲ್ಲೆ ದಿನ ದೂಡಿದ ಹೆತ್ತವರಿಗಾಗಿ ದುಡಿದ ಹಣವನ್ನ ಕೊಟ್ಟ ಆಕೆಯದು ಬರೀಗೈ ಆಗಿತ್ತು.. ಸ್ವಾಭಿಮಾನವನ್ನು ಮೀರಿ, ಆತ್ಮಗೌರವವನ್ನು ಸಾಯಿಸಿ ಮಗುವಿಗಾಗಿ ಬದುಕುವ ಸಾಹಸ ಆಕೆ ಮಾಡಲೆ ಬೇಕಿತ್ತು… ಮಗು ಮೂರು ವರ್ಷ ದಾಟುವ ಸಮಯಕ್ಕೆ ಕಲ್ಪನಾ ಬಹುದೊಡ್ಡ ನಿರ್ಧಾರವನ್ನ ತೆಗೆದುಕೊಂಡಾಗಿತ್ತು.. ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಯಾವ ರೀತಿಯಿಂದಲೂ ಜೊತೆಗಿರದ ಗಂಡ ಬೇಡ ಅನ್ನೋ ನಿರ್ಧಾರವನ್ನು ಆಕೆ ಮಾಡಿಯೇ ಬಿಟ್ಟಳು.. ತನ್ನವರು ಏನೇ ಹೇಳಲಿ ನನಗೆ ನಾನು ನನ್ನ ಮಗು ಮುಖ್ಯ ಅನ್ನೋದನ್ನ ತೀರ್ಮಾನಿಸಿಬಿಟ್ಟಳು. ಹಳೆಯ ಪರಿಚಯಸ್ಥರು ಆಕೆಗೆ ಚಿಕ್ಕ ಸರಕಾರಿ ನೌಕರಿಯನ್ನು ಕೊಡಿಸಿಯೇ ಬಿಟ್ಟರು.. ನಗರದ ಬದುಕು ಬದುಕನ್ನ ಕಲಿಸಿದ್ದರಿಂದ ಆಕೆ ಬಡ್ತಿ ಪಡೆದು ದೆಹಲಿಯೆಂಬ ಮತ್ತೊಂದು ಮಹಾನಗರದಲ್ಲಿ ಬದುಕ ಕಟ್ಟಲು ಹೊರಟೇ ಬಿಟ್ಟಳು.. ಅಂದಿನ ಹಠ ದಿಟ್ಟ ನಿರ್ಧಾರ ಇಂದು ದೆಹಲಿಯಲ್ಲಿ ಸುಂದರವಾದ ಬದುಕನ್ನು ಆಕೆ ನಡೆಸುತ್ತಿದ್ದಾಳೆ.. ಚಿಕ್ಕ ವಯಸ್ಸಿನಿಂದ. ಬಯಸಿದ್ದೆಲ್ಲ ಪಡೆಯಲಾಗದೆ ನೋವನ್ನು ಅನುಭವಿಸಿ, ಇಂದು ದಿಟ್ಟವಾಗಿ ಬಂದಿದ್ದೆಲ್ಲವನ್ನ ಒಂಟಿಯಾಗಿ ಎದುರಿಸುತ್ತಿದ್ದಾಳೆ.. ಅಂದು ಭಾವನೆಗಳೊಂದಿಗೆ ಬಳಲಿ ನೊಂದವಳು ಇಂದು ಭಾವನೆಗಳಿಲ್ಲದೇ ವಾಸ್ತವವಾಗಿ ಬದುಕುತ್ತಿದ್ದಾಳೆ.ಬದುಕುವ ಛಲ ಆತ್ಮವಿಶ್ವಾಸ, ಒಮ್ಮೆ ಬದುಕನ್ನಾವಿರಿಸಿದರೆ, ಹತಾಷೆಗಳನ್ನ ಮೆಟ್ಟಿ ನಿಂತರೆ, ಭಾವನೆಗಳನ್ನ ಬಂಧಿಸಿಟ್ಟರೆ ಯಾವ ಬದುಕು ಕಷ್ಟವಲ್ಲ. ಯಾವ ಗುರಿಯೂ ದೂರವಿಲ್ಲ ಅನ್ನೋದಕ್ಕೆ ಸ್ನೇಹಿತೆ ಕಲ್ಪನಾ ಸಾಕ್ಷಿ. ಇಂತಹ ಅದೆಷ್ಟೊ ಮಹಿಳೆಯರು ಇಂತಹ ನೂರಾರು ಸಮಸ್ಯೆಗಳನ್ನ ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿರುತ್ತಾರೆ.. ಹೇಳಲಾಗದ ಅನುಭವಿಸಲಾಗದ ನೋವು ಕಾಡುತ್ತಲೇ ಇರತ್ತೆ.. ಅಂತಹ ಮಹಿಳೆಯರಿಗೆ ಕಲ್ಪನಾ ಮಾದರಿ ಹೆಣ್ಣು..
- ಶ್ವೇತಾ ಭಟ್
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!