ತಮಿಳುನಾಡಿನಲ್ಲಿ ತಲಾತಲಾಂತರದಿಂದ ಆಚರಣೆಯಲ್ಲಿದ್ದ ಒಂದು ಸಾಂಪ್ರದಾಯಿಕ ಕ್ರೀಡೆಗೆ ಸುಪ್ರೀಂ ಕೋರ್ಟ್ 2014ರಲ್ಲಿ ಬ್ರೇಕ್ ಹಾಕಿದೆ..! ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ಉತ್ಸವ ನಿಷೇಧದಿಂದ ಪ್ರಾಣಿ ಪ್ರಿಯರಿಗೆ ಇನ್ನಿಲ್ಲದ ಖುಷಿ ತಂದ್ರೆ, ಜನಪ್ರೀಯ ಕ್ರೀಡೆ ನಿಷೇಧದಿಂದ ಕ್ರೀಡಾ ಪ್ರೇಮಿಗಳಿಗೆ ಇನ್ನಿಲ್ಲದ ನಿರಾಸೆ ತಂದಿತ್ತು. ಜಲ್ಲಿ ಕಟ್ಟು ಕ್ರೀಡೆ ನಿಷೇಧಿಸಿದ ಸುಪ್ರೀಂ ಕೋರ್ಟ್ ನೀತಿಯನ್ನು ಖಂಡಿಸಿ ತಮಿಳುನಾಡಿನಲ್ಲಿ ಅನೇಕ ಸಿನಿಮಾ ತಾರೆಯರು ಈ ಕುರಿತು ಮಾತನಾಡಿದ್ರು. ಅದೇ ರೀತಿಯಾಗಿ ಖ್ಯಾತ ನಟ ಕಮಲ್ ಹಾಸನ್ ಜಲ್ಲಿಕಟ್ಟು ನಿಷೇಧದ ವಿರುದ್ದ ಚಾಟಿ ಬೀಸಿದ್ದಾರೆ. ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿ ತಿನ್ನುವುದನ್ನೂ ನಿಷೇಧಿಸಿ ಎಂದು ವಾದಿಸಿದ್ದಾರೆ. ಪ್ರಾಣಿ ಹಿಂಸೆ ಅಪರಾಧ ಎನ್ನುವುದಾದರೆ ಬಿರಿಯಾನಿ ತಿನ್ನೋದು ಅಪರಾದ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ನಾನು ಸಹ ಹಲವಾರು ಬಾರಿ ಭಾಗಿಯಾಗಿದ್ದೇನೆ. ಈ ಕ್ರೀಡೆಯಲ್ಲಿ ಗೂಳಿಗೆ ಯಾವುದೇ ರೀತಿ ಹಿಂಸೆ ನೀಡೋದಿಲ್ಲ. ಇದನ್ನು ಕ್ರೌರ್ಯ ಎಂದು ಭಾವಿಸುವುದಾದ್ರೆ ಬಿರಿಯಾನಿ ತಿನ್ನೋದು ನನ್ನ ಪ್ರಕಾರ ಕ್ರೌರ್ಯ ಅದನ್ನೂ ನಿಷೇಧಿಸಿ ಎಂದು ಖಾರವಾಗಿ ನುಡಿದಿದ್ದಾರೆ..! ಸ್ಪೇನ್‍ನಲ್ಲಿ ನಡೆಯೋ ಗೂಳಿ ಕಾಳಗಕ್ಕೂ ನಮ್ಮ ಜಲ್ಲಿಕಟ್ಟುವಿಗೂ ಭಾರಿ ವ್ಯತ್ಯಾಸವಿದೆ. ಅಲ್ಲಿ ಪ್ರಾಣಿಯನ್ನು ಹಿಂಸೆ ಮಾಡಲಾಗುತ್ತೆ. ಆದ್ರೆ ನಮ್ಮಲ್ಲಿ ಹಾಗಲ್ಲ ಎಂದು ಜಲ್ಲಿಕಟ್ಟು ಕ್ರೀಡೆ ಪರ ಮಾತನಾಡಿದ್ದಾರೆ ಕಮಲ್. ನಮ್ಮಲ್ಲಿ ಗೂಳಿಯನ್ನು ದೇವರಂತೆ ಕಾಣುತ್ತಿರುವಾಗ ಅದನ್ನು ಹಿಂಸೆ ಮಾಡುವುದಾದರೂ ಹೇಗೆ ಎಂದು ಅವರು ಹೇಳಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!