ಇದು ಚಿಕ್ಕಮಗಳೂರಿನ ತರೀಕೆರೆಯ ಹುಡುಗಿಯ ಕಥೆ.. ಅವಳು ಸುಂದರಿ, ಕಾಲೇಜಲ್ಲಿ ಕನಿಷ್ಟ 15-20 ಜನ ಅವಳ ಹಿಂದೆ ಬಿದ್ದಿದ್ರು..! ಶ್ರೀಮಂತರ ಮನೆಯ ಹುಡುಗಿ ಬೇರೆ.. ಕೇಳಬೇಕಾ..? ಹುಡುಗರು ನಾ ಮುಂದು, ತಾ ಮುಂದು ಅಂತ ಅವಳನ್ನು ಇಂಪ್ರೆಸ್ ಮಾಡೋಕೆ ಟ್ರೈ ಮಾಡ್ತಿದ್ರು..! ಆದ್ರೆ ಇವಳು ಮಾತ್ರ ಅವಳಾಯ್ತು, ಅವಳ ಕ್ಲಾಸ್ ಆಯ್ತು ಅಂತ ಬರ್ತಿದ್ಳು, ಹೋಗ್ತಿದ್ಳು..! ಹೀಗೇ ಅವಳ ಮೊದಲ ವರ್ಷದ ಡಿಗ್ರಿ ಮುಗಿದೇ ಹೋಯ್ತು..! ಅವಳಿಗೆ ಹುಡುಗರು ಕೊಟ್ಟ ನೂರಾರು ಲವ್ ಲೆಟರ್ ಗಳು ಓಪನ್ ಸಹ ಆಗದೇ ಹರಿದುಹೋದ್ವು..! ವ್ಯಾಲೆಂಟೈನ್ಸ್ ಡೇ ದಿನ ಅವಳಿಗೆ ಪ್ರಪೋಸ್ ಮಾಡೋಕೆ ಕಾದು ನಿಂತ ಹುಡುಗರಿಗೆ ಅವತ್ತವಳ ದರ್ಶನ ಭಾಗ್ಯವೇ ಇಲ್ಲ..! ಅವತ್ತು ಅವಳು ಕಾಲೇಜಿಗೇ ಬರ್ತಿರಲಿಲ್ಲ..! ಅವಳು ಡೀಸೆಂಟ್, ಇಂಟಲಿಜೆಂಟ್, ಅಂಡ್ ಬ್ಯೂಟಿಫುಲ್ ಲೇಡಿ..!
ಅವತ್ತು ಅವಳು ಬೆಳಗ್ಗೆ ಕಾಲೇಜಿಗೆ ಹೋಗುವ ರೋಡಲ್ಲಿ ಬರ್ತಾ ಇರುವಾಗ ಒಬ್ಬ ಹುಡುಗ ಬೈಕ್ ವೀಲಿಂಗ್ ಮಾಡಿಕೊಂಡು ಹೋದ..! ಅವನ ಬೈಕ್ ಹೋದ ಸೌಂಡಿಗೆ ಅವಳು ಅವನತ್ತ ನೋಡಿದ್ಲು. ಅವನು ಹಾಗೇ ವ್ಹೀಲಿಂಗ್ ಮಾಡ್ಕೊಂಡು ತುಂಬಾ ದೂರ ಹೋದ..! ಇವಳ ಪಕ್ಕದಲ್ಲಿದ್ದ ಹುಡುಗೀರು ಅವನನ್ನ ನೋಡಿ ವಾವ್ ಅಂದ್ರು..! ನೋಡೇ ಪ್ರಿಯಾ ಅವನು ಎಷ್ಟ್ ಸೂಪರ್ರಾಗ್ ಹೋದ ಅಂತ..! ಅವಳು ಏನೂ ಮಾತಾಡಲಿಲ್ಲ. ಸುಮ್ಮನೆ ಕಾಲೇಜಿನ ಕಡೆ ಹೊರಟ್ಲು..! ಕಾಲೇಜಿನ ಗ್ರೌಂಡಲ್ಲಿ ಮತ್ತೆ ಅವನ ವ್ಹೀಲಿಂಗ್ ಮುಂದುವರೆದಿತ್ತು..! ಅವನ ಸುತ್ತ ನೂರಾರು ಹುಡುಗರು-ಹುಡುಗೀರು ನಿಂತ್ಕೊಂಡು ಬಿಟ್ಟಕಣ್ಣು ಬಿಟ್ಟ ಹಾಗೇ ನೋಡ್ತಿದ್ರು..! ಅವನು ಸೆಕೆಂಡ್ ಇಯರ್ ಬಿಕಾಂಗೆ ಸೇರಿರೋ ಹೊಸ ಹುಡುಗ. ಅವರಪ್ಪನಿಗೆ ಬೆಂಗಳೂರಿಂದ ತರೀಕೆರೆಗೆ ಟ್ರಾನ್ಸ್ಫರ್ ಆಗಿದೆ. ಅದಕ್ಕೆ ಅವನು ಇನ್ನು ಮುಂದೆ ಇದೇ ಕಾಲೇಜಲ್ಲಿರ್ತಾನೆ..! ಅವನು ಪವನ್..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಕ್ಲಾಸ್ ಶುರುವಾಗಿತ್ತು. ಎಲ್ಲರು ಸೀರಿಯಸ್ ಆಗಿ ಪಾಠ ಕೇಳ್ತಾ ಕೂತಿದ್ದಾಗ ಒಬ್ಬ ಹುಡುಗ `ಮೇ ಐ ಕಮ್ ಇನ್ ಸಾರ್’ ಅಂದ. ಅವನು ಫುಲ್ ಸಿಟಿ ಸ್ಟೈಲ್ ಹುಡುಗ..! ಸ್ಪೈಕ್ ಮಾಡಿರೋ ಕೂದಲು, ಫಂಕೀ ಜೀನ್ಸ್, ಎಮಿನೆಮ್ ಟೀಶರ್ಟ್, ಅದರ ಮೇಲೊಂದು ಸ್ಟೈಲಿಶ್ ಪುಲ್ ಓವರ್..! ನೋಡೋಕೂ ಸಖತ್ತಾಗಿದ್ದಾನೆ, ಡೈಲಿ ಜಿಮ್ ಗೆ ಹೋಗ್ತಿದ್ದ ಅನ್ಸುತ್ತೆ..! ಒಳಗೆ ಬಂದವನೇ, ಲೆಕ್ಚರರ್ ಗೆ ನಮಸ್ಕಾರ ಮಡಿ, ಅವನನ್ನ ಪರಿಚಯ ಮಾಡ್ಕೊಂಡ, `ನನ್ನ ಹೆಸರು ಪವನ್, ಇಲ್ಲೀ ತನಕ ಬೆಂಗಳೂರಲ್ಲಿ ಓದ್ತಿದ್ದೆ, ನಮ್ಮಪ್ಪಂಗೆ ಟ್ರಾನ್ಸ್ ಫರ್ ಆಗಿದೆ, ಸೋ ಈ ವರ್ಷ ಇಲ್ಲೇ ಜಾಯ್ನ್ ಆಗಿದೀನಿ… ಹಾಯ್ ಆಲ್’ ಅಂದು ಹಿಂದಿನ ಬೆಂಚಲ್ಲಿದ್ದ ಸೀಟಲ್ಲಿ ಹೋಗಿ ಕೂತ..! ಎಲ್ಲರೂ ಅವನನ್ನೇ ನೋಡ್ತಿದ್ರು..! ಹೀ ವಾಸ್ ವೆರಿ ಇಂಪ್ರೆಸಿವ್,..!
ಕ್ಲಾಸ್ ಮುಗಿಸಿ ಪ್ರಿಯ ಮತ್ತೆ ಮನೆ ಕಡೆಗೆ ಹೊರಡ್ತಾ ಇದ್ಲು. ದಾರಿಯಲ್ಲಿ ಮತ್ತದೇ ಬೈಕ್ ಸೌಂಡ್. ಅವನು ಪವನ್..! ಬೈಕ್ ಸ್ಲೋ ಮಾಡಿ, ಹಾಯ್ ಪ್ರಿಯ, ಡ್ರಾಪ್ ಮಾಡ್ಲಾ..? ನಾನೂ ನಿಮ್ಮನೆ ಹತ್ತಿರಾನೇ ಇರೋದು. ನಿಮ್ಮ ಬಗ್ಗೆ ಕಾಲೇಜ್ ಫ್ರೆಂಡ್ಸ್ ಹೇಳಿದ್ರು..! ನಾನು ನಿಮ್ಮ ಫ್ರೆಂಡ್ ಆಗ್ಬೋದಾ..? ಅವಳು ಒಂದೇ ಒಂದು ಮಾತಾಡಲಿಲ್ಲ.. ಸುಮ್ಮನೆ ಅಲ್ಲಿಂದ ಹೊರಟ್ಲು..! ನಿಮಗೆ ಬೇಜಾರಾಗಿದ್ರೆ ಸಾರಿ, ನಿಮಗಿಷ್ಟ ಇಲ್ಲ ಅಂದ್ರೆ ಬೇಡ ಬಿಡಿ, ಬಟ್ ಯೂ ಆರ್ ವೆರಿ ಬ್ಯೂಟಿಫುಲ್ ಅಂತ ಹೇಳಿಯೇಬಿಟ್ಟ..! ಅವಳಿಗೆ ಅವನೊಂತರಾ ವಿಶೇಷ ಅಂತ ಅನ್ನಿಸ್ದ..! ಇದು ನಾರ್ಮಲ್ ಕೇಸಲ್ಲ ಅಂತ ಅನ್ನಿಸ್ತು ಅವಳಿಗೆ..! ಪ್ರತೀ ಸಲ ಎದುರಿಗೆ ಸಿಕ್ಕಾಗ್ಲೂ ಅವನು ಇವಳಿಗೆ `ಗುಡ್ ಮಾರ್ನಿಂಗ್’ ಹೇಳೋದು ಮರೀತಿರಲಿಲ್ಲ..! ಅವನು ಕಾಲೇಜಿನ ಎಲ್ಲ ಹುಡುಗರ ಅಚ್ಚುಮೆಚ್ಚು..! ಒಂದೊಂದ್ ದಿನ ಕಾರಲ್ಲಿ ಕಾಲೇಜಿಗೆ ಬಂದ್ರಂತೂ ಅವನ ಹಿಂದೆ ಹುಡುಗರ ಹಿಂಡು..! ಪ್ರಿಯನ ಜೊತೆಗಿದ್ದ ಹುಡುಗೀರೆಲ್ಲಾ ಅವನು ಅಂದ್ರೆ ಸಾಯೋರು, ಅವನು ಹ್ಞೂಂ ಅಂದ್ರೆ ಈಗಲೇ ಅವನ ಜೊತೆ ಓಡೋಗ್ ಬಿಡ್ತೀನಿ ಅನ್ನೋರು..! ಆದ್ರೆ ಅವನು ತುಂಬಾ ಸೀರಿಯಸ್ ಆಗಿ ಪ್ರಿಯ ಹಿಂದೆ ಬಿದ್ದಿದ್ದ..! ಒಂದಿನ ರಸ್ತೆಯಲ್ಲಿ ಅಡ್ಡ ಹಾಕಿ ಕೇಳೇ ಬಿಟ್ಟ… `ರೀ ಪ್ರಿಯ, ಮದ್ವೆ ಆಗ್ತೀರೇನ್ರೀ ನನ್ನ..?’ ಎಲ್ಲರೂ ಲವ್ ಯೂ, ಐ ನೀಡ್ ಯೂ ಅನ್ನೋರು, ಇವನು ಮಾತ್ರ ಮದ್ವೆ ಆಗ್ತೀರಾ ಅಂತ ಕೇಳಿದ್ದ..! ಇವಳಿಗ್ಯಾಕೋ ಅದು ಇಷ್ಟ ಆಗಿತ್ತು..! ಮೂರ್ನಾಲ್ಕು ದಿನ ಯೊಚನೆ ಮಾಡಿ ಅವನಿಗೆ `ಓಕೆ’ ಹೇಳಿಬಿಟ್ಲು..! ಆಮೇಲೆ ಅವರಿಬ್ರೂ ಕಾಲೇಜಿನ ಲವ್ ಬರ್ಡ್ಸ್.! ಕಾಲೇಜಿನ ಕಲ್ಲು, ಕಂಬ, ಗೋಡೆಗಳೆಲ್ಲಾ ಅವರಿಬ್ಬರ ಲವ್ ಬಗ್ಗೆ ಮಾತಡೋಕೆ ಶುರು ಮಾಡಿತ್ತು..! ಈ ವಿಷಯ ಪ್ರಿಯಾಳ ಅಪ್ಪನ ಕಿವಿಗೆ ಬೀಳೋಕೆ ಜಾಸ್ತಿ ದಿನ ಬೇಕಾಗಲಿಲ್ಲ..! ಕಾಲೇಜಿಗೆ ಬಂದ ಅವಳಪ್ಪ, ಇಡೀ ಕ್ಲಾಸ್ ರೂಮಲ್ಲಿ ಎಲ್ಲರ ಎದುರಲ್ಲೇ ಅವಳ ಕೆನ್ನೆಗೆ ಬಾರಿಸಿ ಎಳ್ಕೊಂಡ್ ಹೋಗ್ಬಿಟ್ರು..!
ಪವನ್ ಎಷ್ಟು ಡ್ರೈ ಮಾಡಿದ್ರೂ ಅವಳ ಯಾವ ಮಾಹಿತೀನೂ ಸಿಗ್ಲಿಲ್ಲ, ಅವಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು..! ಒಂದು ತಿಂಗಳೂ ಕಳೆದ್ರೂ ನೋ ನ್ಯೂಸ್..! ಆದ್ರೆ ಅವತ್ತೊಂದು ದಿನ ಒಬ್ಬ ಹುಡುಗ ಫೋನ್ ಮಾಡಿ, ನಾನು ಪ್ರಿಯ ಚಿಕ್ಕಪ್ಪನ ಮಗ, ಅಕ್ಕ ನಿಂಗೆ ಕೊಡೋಕೆ ಲೆಟರ್ ಕೊಟ್ಟಿದ್ದಾಳೆ ಅಂದ..! ಹೋಗಿ ಕಲೆಕ್ಟ್ ಮಾಡ್ಕೊಂಡ. `ನಾನು ಒಂದು ತಿಂಗಳಿಂದ ನಿನ್ನ ನೆನಪಲ್ಲೇ ಇದೀನಿ, ನಮ್ಮಪ್ಪ ಅಮ್ಮ ಎಷ್ಟು ಹೊಡೆದ್ರೂ ನಂಗೆ ನೀನೇ ಬೇಕು ಅಂತ ಹೇಳಿದೀನಿ, ನಂಗೆ ನಿನ್ನ ಬಿಟ್ಟಿರೋಕಾಗಲ್ಲ, ಪ್ಲೀಸ್ ನಾಳೆ ರಾತ್ರಿ 11 ಗಂಟೆಗೆ ನಮ್ಮನೆ ಹಿಂದಿರೋ ಬೋರ್ ವೆಲ್ ಹತ್ತಿರ ಬಾ. ನಾನು ರೆಡಿಯಾಗಿರ್ತೀನಿ, ನಾವೆಲ್ಲಾದ್ರೂ ದೂರ ಹೋಗಿಬಿಡೋಣ..!’
ಮಾರನೇ ದಿನ ರಾತ್ರಿ 11 ಗಂಟೆಗೆ, ಎಲ್ಲರೂ ಮಲಗಿದ ಮೇಲೆ, ಪ್ರಿಯ ತನ್ನ ಬಟ್ಟೆಬರೆ ತುಂಬಿಕೊಂಡು ಬೋರ್ ವೆಲ್ ಹತ್ತಿರ ಬಂದ್ಲು..! ಸುಮಾರು 1 ಗಂಟೆ ಕಾದರೂ ಅವನು ಬರಲೇ ಇಲ್ಲ..! ಅಷ್ಟೊತ್ತಿಗೆ ಅವರಪ್ಪ ಅವಳನ್ನ ಹುಡುಕಿ ಮನಸ್ಸಿಗೆ ಬಂದ ಹಾಗೆ ಬಡಿದು, `ಊರು ಬಿಟ್ಟು ಓಡೋಗ್ತಿಯೇನೇ..? ಅಪ್ಪ-ಅಮ್ಮನಿಗಿಂತ ಅವನೇ ಮುಖ್ಯ ಆಗ್ಬಿಟ್ನಾ ನಿಂಗೆ’ ಅಂತ ಮೈತುಂಬಾ ಬಾಸುಂಡೆ ಬರೋ ಹಾಗೆ ಹೊಡೆದು ರೂಮೊಂದರಲ್ಲಿ ಕೂಡಿ ಹಾಕ್ತಾರೆ..! ಆದ್ರೆ ಅವಳಿಗೆ ಕಾಡೋಕೆ ಶುರುವಾಗುತ್ತೆ, ಅವನ್ಯಾಕೆ ಬರಲಿಲ್ಲ..! ಅವನಿಗೆ ಲೆಟರ್ ತಲುಪ್ಸಿದೀನಿ ಅಂತ ಅವಳ ತಮ್ಮ ಹೇಳಿದ್ದ, ಆದ್ರೂ ಅವನ್ಯಾಕೆ ಬರಲಿಲ್ಲ..? ಹೀಗೇ ಮತ್ತೊಂದು ತಿಂಗಳೂ ಕಳೆದು ಹೋಗಿಬಿಡುತ್ತೆ..! ಅವಳ ಡಿಗ್ರಿ, ಅವಳ ಪ್ರೀತಿಯ ನಡುವೆ ಸತ್ತುಹೋಗಿತ್ತು..! ಎಷ್ಟೇ ಪ್ರಯತ್ನ ಪಟ್ಟರೂ ಅವನ ಯಾವುದೇ ಮಾಹಿತಿ ಇವಳಿಗೆ ಸಿಗಲೇ ಇಲ್ಲ..!
ಅವತ್ತು ಅವರಪ್ಪ ಅಮ್ಮ ಅವಳನ್ನು ಕಾರಲ್ಲಿ ಕೂರುಕೊಂಡು ದೇವಸ್ಥಾನಕ್ಕೆ ಹೊರಟ್ರು. ದಾರಿಯುದ್ದಕ್ಕೂ ಅವಳಿಗೆ ಬಿಡಿಸಿ ಬಿಡಿಸಿ ಹೇಳಿದ್ರು, `ಮಗಳೇ, ಪ್ರೀತಿಪ್ರೇಮ ಎಲ್ಲಾ ಬೇಡ, ಅವರು ದೊಡ್ಡ ಜನ, ನಮ್ಮನೆ ಹೆಣ್ಣುಮಕ್ಕಳು ಚೆನ್ನಾಗಿರಬೇಕು ಅಂತ ನಮಗೂ ಆಸೆ ಇರುತ್ತೆ. ಅವನನ್ನು ಮರೆತುಬಿಡು.. ಮತ್ತೆ ಕಾಲೇಜಿಗೆ ಹೋಗು’ ಅಂತೆಲ್ಲಾ.. ಅವಳು ಮೌನವಾಗಿ ಕೂತಿದ್ದು ಬಿಟ್ರೆ ಒಂದೇ ಒಂದು ಮಾತಾಡಲಿಲ್ಲ..! ಮಾರ್ಕೇಟ್ ಹತ್ತಿರದ ಅಂಗಡಿ ಹತ್ತಿರ ಇಳಿದು ಹಣ್ಣುಕಾಯಿ ತರೋಕೆ ಅವರಪ್ಪ ಹೋದ್ರು. ಅವಳು ಹೊರಗಿನ ಪ್ರಪಂಚ ನೋಡೋಣ ಅಂತ ತಲೆ ಎತ್ತಿದ್ರೆ ಅಲ್ಲೆಲ್ಲೋ ದೂರದಲ್ಲಿ ಅವಳ ಫ್ರೆಂಡ್ ಕಾಣಿಸಿದ್ಲು..! ಇವಳ ಜೊತೆಗೇ ಇದ್ದ ಫ್ರೆಂಡ್ ಅವಳು.. ಅವಳು ಯಾರದೋ ಬೈಕಲ್ಲಿ ಕೂತಿದ್ದಾಳೆ.. ಅವನು ಅವನೇ.. ಪವನ್..! ಹೌದು ಅವನು ನನ್ನ ಪವನ್..! ಆದ್ರೆ ಅವನ ಹೆಗಲಮೇಲೆ ಕೈಹಾಕಿ ಕೂತಿರೋಳು ಇವಳ ಫ್ರೆಂಡ್..! ಇವಳಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ..! ಅಮ್ಮನನ್ನು ತಳ್ಳಿ ಕಾರಿಂದ ಇಳಿದು ಅವರ ಹತ್ತಿರ ಓಡಿದ್ಲು..! ಇದನ್ನು ನೋಡಿ ಅವರಪ್ಪನೂ ಅವಳ ಹಿಂದೆ ಓಡಿದ್ರು..! ಅಲ್ಲಿ ದೂರದಲ್ಲಿ ಬೈಕಿನ ಮೇಲೆ ಕುತಿದ್ದ ಅವಳನ್ನೂ, ಅವಳ ಎದುರಲ್ಲಿ ನಿಂತಿದ್ದ ಅವನನ್ನೂ ನೋಡಿದ್ಲು..! ಅವಳು ಬೈಕಿನ ಸೀಟಿಂದ ಕೆಳಗಿಳಿದು ತಲೆತಗ್ಗಿಸಿದ್ಲು..! ಅವನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ..! ಅವಳಪ್ಪ ಅವನನ್ನು ಕೈಡಿದು ಎಳೀತಿದ್ದರು..! ಕೈಬಿಡಿಸಿಕೊಂಡು ಅವನ ಎದುರಿಗೆ ಹೋಗಿ ಅವನ ಕೆನ್ನೆಗೆ ಬಾರಿಸಿ ಹೇಳಿದ್ಲು.. `ನಿಂಗೆ ಆಟ ಆಡೊಕೆ ನನ್ನ ಜೀವನಾನೇ ಬೇಕಿತ್ತಾ..? ನಾನು ಯಾವತ್ತೂ ಯಾವ ಹುಡುಗರನ್ನೂ ಕಣ್ಣೆತ್ತಿ ನೋಡಿರಲಿಲ್ಲ, ನಿನ್ನನ್ನ ನಂಬಿ ನನ್ನ ಲೈಫ್ ಹಾಲು ಮಾಡ್ಕೊಂಡೆ..! ಇವತ್ತು ನನ್ನ ಫ್ರೆಂಡ್ ಜೊತೆ ಆರಾಮಾಗಿ ಓಡಾಡ್ಕೊಂಡಿದಿಯ..! ನಾನು ಹೊಟ್ಟೆ ತುಂಬಾ ಊಟ ಮಾಡಿ ಎರಡು ತಿಂಗಳಾಯ್ತು ಕಣೋ..! ನೀನೇ ಬೇಕು, ನಿನ್ನೇ ಮದ್ವೆ ಆಗ್ಬೇಕು ಅಂತ ಮನೇಲಿ ಹಠ ಕಟ್ಟಿ ಕೂತಿದೀನಿ.! ಇಷ್ಟು ವರ್ಷ ಸಾಕಿದ ಅಪ್ಪಮ್ಮನ ಜೊತೆ ಮಾತಾಡ್ತಿಲ್ಲ ನಾನು..! ನೀನ್ ನೊಡಿದ್ರೆ ನನ್ನ ಫ್ರೆಂಡ್ ಜೊತೇನೇ ತಿರುಗಾಡ್ಕೊಂಡು, ಲೈಫಲ್ಲಿ ಏನೂ ಆಗಿಲ್ಲ ಅನ್ನೋ ತರ ಇದಿಯ..! ಥೂ ನಿನ್ನ ಮುಖಕ್ಕೆ..! ನಿನ್ನಂತವರಿಗೆ ಇಂಥಾ ಲವ್ ಯಾಕೆ ಬೇಕೋ..? ಹುಡುಗೀರ ಲೈಫ್ ಅಂದ್ರೆ ಅಟದ ಸಾಮಾನ್ ತರ ಅಲ್ವಾ..? ಅಂತ ಹೇಳಿ ಅಲ್ಲಿಂದ ಕಣ್ಣೀರು ಒರೆಸಿಕೊಂಡು ಹೊರಟುಬಿಟ್ಲು..! ಹೋಗಿ ಕಾರು ಹತ್ತಿದವಳು ಅಪ್ಪಅಮ್ಮನ ಕ್ಷಮೆ ಕೇಳಿದ್ಲು..! ಇನ್ನು ಅವನನ್ನ ಮರೆತು ನೆಮ್ಮದಿಯಾಗಿರ್ತೀನಿ ಅಂತ ಪ್ರಾಮಿಸ್ ಮಾಡಿದ್ಲು..! ಅವಳಿಗೆ ಅವಳು ಮೋಸ ಹೋಗಿರೋದು ಅರ್ಥ ಆಗಿತ್ತು, ಅವನದು ಬರೀ ನಾಟಕದ ಪ್ರೀತಿ ಅನ್ನೋದು ಅರಿವಾಗಿತ್ತು..! ಮತ್ತೆ ಕಾಲೇಜಿಗೆ ಹೊರಟ್ಲು..! ಯಾರಿಗೂ ತಲೆಕೆಡಿಸಿಕೊಳ್ಳದೇ..! ಡಿಗ್ರಿಯಲ್ಲಿ ಯೂನಿವರ್ಸಿಟಿ ಗೋಲ್ಡ್ ಮೆಡಲ್ ತಗೊಂಡ್ಲು..! ಅವನು ಅವಳ ಫ್ರೆಂಡ್ ಜೊತೆ ಮದುವೆ ಆಗ್ತೀನಿ ಅಂತ ನಂಬಿಸಿ ಅವಳನ್ನು ಗರ್ಭಿಣಿ ಮಾಡಿ ಕೈಬಿಟ್ಟ..! ಅವಳು, ಇವನ ಹೆಸರು ಬರೆದಿಟ್ಟು ವಿಷ ಕುಡಿದು ಸತ್ತು ಹೋದ್ಲು..! ಅವನು ಇವತ್ತಿಗೂ ಜೈಲಲ್ಲಿದ್ದಾನೆ..! ಪ್ರಿಯ, ಅಪ್ಪ ಅಮ್ಮ ತೋರಿಸಿದ ಹುಡುಗನನ್ನು ಮದುವೆಯಾಗಿ ನೆಮ್ಮದಿಯ ಜೀವನ ನಡೆಸ್ತಿದ್ದಾಳೆ..!
ಫ್ರೆಂಡ್ಸ್, ಪ್ರತೀ ಕೆಟ್ಟದ್ದು ಒಳ್ಳೇದಕ್ಕೆ ಆಗುತ್ತೆ..! ಅವತ್ತು ಪ್ರಿಯಾಳ ಲೈಫಲ್ಲಿ ನಡೆದ ಘಟನೆ ಅವಳ ಜೀವನ, ಜೀವ ಎರಡನ್ನೂ ಉಳಿಸ್ತು..! ಇಲ್ಲಾಂದ್ರೆ ಅವಳ ಫ್ರೆಂಡ್ ರೀತಿಯಲ್ಲೇ ಇವಳೂ ಹೆಣವಾಗ್ತಿದ್ಲು..! ಪ್ರೀತಿಸೋಕೆ ಮುಂಚೆ ಹತ್ತು ಸಲ ಯೋಚಿಸಿ, ಮರುಳಾಗೋ ಮಾತಿಗೆ ಮರುಳಾಗಬೇಡಿ..! ಜೀವನವೇ ಬೇರೆ, ಪ್ರೀತಿಯೇ ಬೇರೆ..! ಯಾವತ್ತೂ ಪ್ರೀತಿಯಲ್ಲಿ ಕಾಮ ಬೆರೆಸಬೇಡಿ..! ಅದು ಜೀವನಕ್ಕೇ ಮುಳುವಾಗಬಹುದು..! ನಿಮ್ಮ ಆಯ್ಕೆ ಸರಿಯಾಗಿರಲಿ. ಅದು ನಿಮ್ಮಪ್ಪ ಅಮ್ಮನಿಗೆ ಹೆಮ್ಮೆ ತರುವಂತಿರಲಿ..! ಇವತ್ತಲ್ಲದಿದ್ದರೂ ನಾಳೆಯಾದ್ರೂ ಏನಾದ್ರೂ ಸಾಧಿಸ್ತಾನೆ ಅನ್ನೋ ನಂಬಿಕೆ ಇದ್ದವನ ಜೊತೆ ಬದುಕು ಸಾಗಿಸಿ…! ಪ್ರೀತಿ ಮಾಯೆ ಹುಷಾರು… !
- ಕೀರ್ತಿ ಶಂಕರಘಟ್ಟ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!