ಪ್ರತಿವಾರದಂತೆ ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳ ಟಿಆರ್‍ಪಿ ಹೇಗಿದೆ ಗೊತ್ತಾ..? ಟಿವಿ9 ಬಗ್ಗೆ ಹೇಳೋದೇ ಬೇಡ..! ಸದ್ಯ ಈ ವಾಹಿನಿಯನ್ನು ಹಿಂದಿಕ್ಕುವುದಿರಲಿ, ಹತ್ತಿರ ಸುಳಿಯೋದು ಬೇರೆ ವಾಹಿನಿಗಳಿ ಕಷ್ಟ. 116 ಪಾಯಿಂಟ್‍ಗಳಿಕೆಯೊಂದಿಗೆ ಟಿವಿ9 ತನ್ನ ನಂಬರ್ 1 ಪಟ್ಟವನ್ನು ಭದ್ರವಾಗಿ ಕಾಯ್ದಿರಿಸಿಕೊಂಡಿದೆ.
82 ಪಾಯಿಂಟ್‍ಗಳನ್ನು ಹೊಂದಿರೋ ಪಬ್ಲಿಕ್ ಟಿವಿ ಎಂದಿನಂತೆ 2ನೇ ಸ್ಥಾನದಲ್ಲಿ ಮಿಂಚಿದೆ. 47 ಪಾಯಿಂಟ್‍ಗಳಿಸಿರೋ ಸುವರ್ಣ ನ್ಯೂಸ್‍ನದ್ದು 3ನೇ ಸ್ಥಾನ…! ನ್ಯೂಸ್ 18 ಕನ್ನಡದ 31 ಪಾಯಿಂಟ್ ಪಡೆದಿದ್ದು 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
28 ಪಾಯಿಂಟ್ ಪಡೆದಿರೋ ಬಿಟಿವಿ 6ನೇ ಸ್ಥಾನದಲ್ಲಿ, 20 ಪಾಯಿಂಟ್‍ನೊಂದಿಗೆ ದಿಗ್ವಿಜಯ 7ನೇ ಸ್ಥಾನದಲ್ಲಿದ್ದರೆ, ಪ್ರಜಾ18 ಪಾಯಿಂಟ್‍ಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಸರಳ ಜೀವನ್ 15 ಪಾಯಿಂಟ್, ಕಸ್ತೂರಿ ನ್ಯೂಸ್ ಮತ್ತು ಸುದ್ದಿ 9 ಪಾಯಿಂಟ್, ರಾಜ್ ನ್ಯೂಸ್ 7, ಜನಶ್ರೀ ನ್ಯೂಸ್ 5 ಪಾಯಿಂಟ್‍ಗಳನ್ನು ಪಡೆದಿದ್ದು, ಸಮಯ ಕೇವಲ 1 ಪಾಯಿಂಟ್‍ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ..!