ಇಂದಿನ ಟಾಪ್ 10 ಸುದ್ದಿಗಳು..! 25.01.2016

Date:

1. ಮಲಯಾಳಂ ನಟಿ ಕಲ್ಪನಾ ವಿಧಿವಿಶ

ದಕ್ಷಿಣ ಭಾರತದ ಖ್ಯಾತ ನಟಿ ಕಲ್ಪನಾ ರಂಜನಿಯವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಹೈದರಾಬಾದಿನ ಖಾಸಗಿ ಹೊಟೆಲ್ ನಲ್ಲಿ ನಟಿ ಕಲ್ಪನಾ ಅವರು ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದಾಗ ಕಲ್ಪನಾ ಅವರು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಾಬರಿಯಾದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ವಿಧಿವಶರಾಗಿದ್ದರೆಂದು ವೈದ್ಯರು ತಿಳಿಸಿದ್ದಾರೆ.

2. ಪಠಾಣ್ಕೋಟ್ ದಾಳಿ; ಭಾರತದ ಸಾಕ್ಷ್ಯ ಕೈ ಸೇರಿದೆ: ಷರೀಫ್

ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಭಾರತ ಪಾಕಿಸ್ತಾನಕ್ಕೆ ಹೊಸ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ. ಪಠಾಣ್ ಕೋಟ್ ಉಗ್ರ ದಾಳಿಗೆ ಸಂಬಂಧಿಸಿದ ಹೊಸ ಸಾಕ್ಷ್ಯಗಳು ಭಾನುವಾರ ನಮ್ಮ ಕೈ ಸೇರಿದೆ ಎಂದ ಷರೀಫ್

3. ಜಾವೇದ್ ರಫೀಕ್ 2008ರ ಸರಣಿ ಸ್ಫೋಟದ ರೂವಾರಿ..!

ಪರಪ್ಪನ ಅಗ್ರಹಾರ ಜೈಲಿನ ಬಳಿ ಸೆರೆ ಸಿಕ್ಕ ಶಂಕಿತ ಭಯೋತ್ಪಾದಕ ಜಾವೇದ್ ರಫೀಕ್ 2008ರಲ್ಲಿ ದೇಶವನ್ನೇ ನಡುಗಿಸಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೆಹಲಿಯವನಾದ ರಫೀಕ್ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯ. ಈತ ಐಎಂ 2008ರಲ್ಲಿ ಬ್ಯಾಡ್ ಆಪರೇಷನ್ ಹೆಸರಿನಲ್ಲಿ ಬೆಂಗಳೂರು, ದೆಹಲಿ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧೆಡೆ ನಡೆಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ. ಅಂದು ತಪ್ಪಿಸಿಕೊಂಡಿದ್ದ ಈತನ ವಿರುದ್ಧ ಎನ್ಐಎ ಮತ್ತು ತೆಲಂಗಾಣ ಎಟಿಎಸ್ ಮತ್ತು ಸಿಐಎಯಲ್ಲಿ ಪ್ರಕರಣ ದಾಖಲಾಗಿದ್ದವು.

4. ಈ ವರ್ಷ ಒಟ್ಟು ಐದು ಗ್ರಹಣ ಗೋಚರ

ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು. ಮಾಚರ್್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ ಭಾರತದಲ್ಲಿ ಮಾತ್ರ. ಅದೂ ಭಾಗಶಃ ಎಂದು ಜೀವಾಜಿ ಅಬ್ಸರ್ ವೇಟರಿ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಂದ್ರ ಪ್ರಕಾಶ್ ಗುಪ್ತ ಹೇಳಿದ್ದಾರೆ

5. ವಿಯಟ್ನಾಂನಲ್ಲಿ ಸ್ಯಾಟಲೈಟ್ ಟ್ರಾಕಿಂಗ್ ಸಿಸ್ಟಂ..!

ಇಂಡೋ-ಚೀನಾ ಗಡಿ ಭಾಗದ ಮೇಲಿನ ಕಣ್ಗಾವಲಿಗಾಗಿ ವಿಯೆಟ್ನಾಂ ನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಅನ್ನು ಸ್ಥಾಪಿಸಲು ಭಾರತ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ತನ್ನ ಜಲಾಂತಗರ್ಾಮಿಗಳನ್ನು ರವಾನಿಸುವ ಮೂಲಕ ಪ್ರಚೋದಿಸುತ್ತಿರುವ ಚೀನಾದ ಸೇನೆಗೆ ಭಾರತ ದಿಟ್ಟ ಉತ್ತರ ನೀಡಿದ್ದು, ಇಂಡೋ-ಚೀನಾ ಗಡಿ ಮತ್ತು ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಕಣ್ಗಾವಲು ಮಾಡುವ ಸಲುವಾಗಿ ವಿಯೆಟ್ನಾಂ ನಲ್ಲಿ ಸ್ಯಾಟಲೈಟ್ ಟ್ರಾಕಿಂಗ್ ಸಿಸ್ಟಂ ಅಳವಡಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಈ ಯೋಜನೆಗೆ ಈಗಾಗಲೇ ಕೇಂದ್ರ ಸಕರ್ಾರ ಅನುಮೋದನೆ ನೀಡಿದ್ದು, ವಿಯೆಟ್ನಾಂ ಸಕರ್ಾರ ಕೂಡ ತನ್ನ ನೆಲದಲ್ಲಿ ಭಾರತ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಕೇಂದ್ರ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.

6. ಆರು ಶಂಕಿತ ಉಗ್ರರು ದೆಹಲಿಗೆ

ರಾಜ್ಯದ ವಿವಿಧೆಡೆ ಸೆರೆ ಸಿಕ್ಕ ಆರು ಮಂದಿ ಶಂಕಿತರನ್ನು ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ದೆಹಲಿಗೆ ಕರೆದೊಯ್ದಿದ್ದಾರೆ. `ಮಡಿವಾಳದ ವಿಶೇಷ ವಿಚಾರಣಾ ಘಟಕದಲ್ಲಿದ್ದ ಶಂಕಿತರನ್ನು, ಬಿಗಿ ಪೊಲೀಸ್ ಭದ್ರತೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. 22 ಅಧಿಕಾರಿಗಳ ಎನ್ಐಎ ತಂಡ ಕೂಡ ಅವರ ಜೊತೆ ಇತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

7. ರೂರ್ಖೀ ಮದರಾಸದಲ್ಲಿ ಮೊಬೈಲ್ ಫೋನ್, ಸೋಶಿಯಲ್ ನೆಟ್ ವರ್ಕ್ ಬಳಕೆ ನಿಷೇಧ..!
ಹರಿದ್ವಾರದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರೂರ್ಖೀ ಯಲ್ಲಿರುವ ಮದರಾಸವೊಂದು ಸೋಶಿಯಲ್ ನೆಟ್ ವರ್ಕ್ ಹಾಗೂ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದೆ.
ಇಮಾಮ್ದುಲ್ ಇಸ್ಲಾಂ ಎನ್ನುವ ಮದರಾಸ, ತಮ್ಮ ಆವರಣದಲ್ಲಿ ಇಂಟರ್ನೆಟ್ ಬಳಸಬಾರದೆಂದು ಆಜ್ಞೆ ಹೊರಡಿಸಿ ಮದರಾಸದ ಗೋಡೆಯಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದೆ.

8. ಭಾರತದಲ್ಲಿ 80% ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು..!
ಭಾರತದಲ್ಲಿ ಶೇಕಡಾ 80ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ, ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ವರದಿಯೊಂದು ಹೇಳಿದೆ.
ಒಟ್ಟಾರೆ ದೇಶದ ಅಷ್ಟೂ ಎಂಜಿನಿಯರಿಂಗ್ ಪದವಿ ಸಂಸ್ಥೆಗಳಿಂದ ಲಕ್ಷಗಟ್ಟಲೆ ಯುವಜನರು ಪದವಿ ಮುಗಿಸಿ ಹೊರಬರುತ್ತಾರಾದರೂ ಅವರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಇರಲ್ಲ ಎಂದು ಕಾರ್ಪೋ ರೇಟ್ ಕಂಪನಿಗಳು ಹೇಳುತ್ತಿವೆ. ಒಟ್ಟಾರೆ 650 ಕಾಲೇಜುಗಳಿಂದ ಹೊರ ಬರುವ ಒಂದುವರೆ ಲಕ್ಷ ಪದವೀಧರರಲ್ಲಿ 80% ನಿರುದ್ಯೋಗಿಗಳಿದ್ದಾರೆಂದು ವರದಿ ವಿವರಿಸಿದೆ.

9. ಪದ್ಮ ಪ್ರಶಸ್ತಿ ಪ್ರಕಟ :
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೇಶಧ ಅತ್ಯಂತ ಉನ್ನತ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ನಾಡು ಸಮೂಹ ಸಂಸ್ಥೆ ಸಂಸ್ಥಾಪಕ ರಾಮೋಜಿರಾವ್, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ರವಿಶಂಕರ್ ಗುರೂಜಿ, ಜಮ್ಮು ಕಾಶ್ಮೀರ ರಾಜ್ಯಪಾಲ ಜಗಮೋಹನ್ ಅವರನ್ನು ಪದ್ಮವಿಭೂಷಣ ಪ್ರಶಸ್ತಿಗೆ, ಸಾನಿಯಾ ಮಿರ್ಜಾ, ಸಿಎಜಿ ವಿನೋದ್ ರಾಯ್, ಸೈನಾ ನೆಹ್ವಾಲ್, ಸ್ವಾಮಿ ತೇಜಮಯಾನಂದ, ಗಿರಿಜಾ ರೆಡ್ಡಿ, ಇಂದು ಜೈನ್ ನಾಗೇಶ್ವರ ರೆಡ್ಡಿ, ಬರ್ಜಿಂದರ್ ಸಿಂಗ್ ಹಮ್ ದರ್ಮ್, ರಾಮಾನುಜಾ ತಾತಾಚಾರ್ಯರಿಗೆ ಪದ್ಮ ಭೂಷಣ, ನಟ ಅನುಪಮ್ ಕೇರ್, ಅಜಯ್ ದೇವಗನ್, ಪ್ರೀಯಾಂಕ ಚೋಪ್ರಾಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.

10 13 ಒಪ್ಪಂದಗಳಿಗೆ ಭಾರತ-ಫ್ರಾನ್ಸ್ ಸಹಿ
ಅಂದಾಜು 60,000 ಕೋಟಿ ರೂಪಾಯಿ ಮೌಲ್ಯದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನೊಳಗೊಂಡಂತೆ 13 ಒಪ್ಪಂದಗಳಿಗೆ ಭಾರತ-ಫ್ರಾನ್ಸ್ ಸಹಿ ಹಾಕಿವೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...