ಅವನು ಇವತ್ತು ಹುಚ್ಚ..! ಅದಕ್ಕೆ ಕಾರಣ ಪ್ರೀತಿ-ಜಾತಿ

Date:

ಸಾಮಾನ್ಯದಂತೆ ಶಹಾಪುರ (ಯಾದಗಿರಿ ಜಿಲ್ಲೆ) ದಿಂದ ಸಾದ್ಯಾಪುರಕ್ಕೆ ಹೊರಡುವ ಬಸ್ಸು ಭರ್ತಿಯಾಗಿತ್ತು. ಜನರು ಸೀಟಿಲ್ಲದೇ ಪರದಾಡುತ್ತಿದ್ದರು. ಆದರೆ ಅವರ ಮಧ್ಯೆ ಇಬ್ಬರು ಮಾತ್ರ ಜಗತ್ತಿನ ಪರಿವೇ ಇಲ್ಲದೇ ಕಣ್ಣಲ್ಲೇ ಪ್ರೇಮ ತರಂಗಗಳನ್ನು ರವಾನಿಸುತ್ತಿದ್ದರು. ಅವರನ್ನು ಕಂಡವರೆಲ್ಲಾ ಇವರದ್ದು ದಿನಾ ಇದೇ ಕಥೆಯಾಯ್ತು ಅಂತ ಸುಮ್ಮನಿದ್ದರು. ಇನ್ನುಳಿದವರು ಇವರನ್ನು ಕಂಡು ಅಚ್ಚರಿಯ ಅಲೆಯಲ್ಲಿ ತೇಲುತ್ತಿದ್ದರು. ಇಷ್ಟಕ್ಕೂ ಅವರಿಬ್ಬರ ಹೆಸರು ಬಸವ ಮತ್ತು ಭಾಗ್ಯ.
ಪಿಯುಸಿಯಿಂದ ಆರಂಭವಾಗಿದ್ದ ಅವರ ಕಣ್ಣಂಚಿನ ಪ್ರೇಮ ಡಿಗ್ರೀ ಫೈನಲ್ ಇಯರ್ ಗೆ ಬಂದರೂ ನಾಲಿಗೆಯಿಂದ ಹೊರಬಂದಿರಲಿಲ್ಲ. ಅವರ ಹುಚ್ಚು ಪ್ರೇಮ ಕಂಡು ಸ್ನೇಹಿತರೇ ದಂಗಾಗಿ ಹೋಗಿದ್ದರು. ಆದರೂ ಅವರಿಬ್ಬರು ಪ್ರೀತಿಯನ್ನು ಹೇಳಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಕಣ್ಣಂಚಲ್ಲೇ ಪ್ರೀತಿ ಮಾಡುತ್ತಾ ಬಂದಿದ್ದರು. ಆದರೆ ಸ್ನೇಹಿತನ ಒತ್ತಡಕ್ಕೋ ಮುಂದೆ ಸಿಗ್ತಾಳೋ, ಇಲ್ವೋ ಎಂಬ ಭಯಕ್ಕೋ ಕೊನೆಗೂ ಬಸವ ಪ್ರೀತಿಯನ್ನು ಹೇಳಿಕೊಂಡ. ನಿರೀಕ್ಷೆಯಂತೆ ಭಾಗ್ಯ ತಲೆಯಲ್ಲಾಡಿಸಿದ್ದಳು.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ದಿನಗಳೆದಂತೆ ಪ್ರೀತಿ ಘಾಢವಾಗತೊಡಗಿತು. ರಾತ್ರಿ 12 ಆದರೂ ಫೋನ್ ಬ್ಯುಸಿ ಇರತೊಡಗಿತು. ಕ್ಲಾಸ್ ಬಂಕ್ ಆದವು. ಎಂದೂ ಕಾಣದ ಸಿನಿಮಾ ಥಿಯೇಟರ್ ದರ್ಶನವಾಯಿತು. ಆದರೂ ಅದೃಷ್ಟವೆಂಬಂತೆ ಕನಿಷ್ಟ ಮಾರ್ಕ್ಸ್ ಪಡೆದು ಇಬ್ಬರೂ ಮೊದಲ ಸೆಮ್ ಪಾಸಾದ್ರು. ಆದರೆ ಆಗಲೇ ಶುರುವಾಗಿತ್ತು ಸಣ್ಣ ನಡುಕ.
ಓದು ಮುಗಿದ ಮೇಲೆ ಭಾಗ್ಯಳಿಗೆ ಮದುವೆ ಮಾಡಬೇಕು ಎಂಬ ಅಪ್ಪನ ಮಾತು, ಮೆಟ್ಟಿಲ ಪಕ್ಕದಲ್ಲಿ ಕುಳಿತಿದ್ದವಳಿಗೆ ಕೇಳಿಸಿತು. ತಡಮಾಡದೇ ಬಸವನಿಗೆ ಆ ಸುದ್ದಿಯೇನೋ ಮುಟ್ಟಿತು. ಆದರೆ ಅವನು ಕೀಳು ಜಾತಿಯವ. ನೇರವಾಗಿ ಬಂದು ಮಾತನಾಡುವ ಧೈರ್ಯ ಇರಲಿಲ್ಲ. ಹಾಗೊಮ್ಮೆ ಮಾತಾಡಿದರೂ ಭಾಗ್ಯಾಳ ಅಪ್ಪ ಸುಮ್ಮನೇ ಬಿಡುವವನಲ್ಲ. ಇದರ ಮಧ್ಯೆ ಪ್ರೀತಿಯನ್ನೂ ಮರೆತು ಬದುಕುವ ಧೈರ್ಯ ಇಬ್ಬರಿಗೂ ಇರಲಿಲ್ಲ.
ಡಿಗ್ರಿಯ ಕೊನೆಯ ಸೆಮ್ ಎಕ್ಸಾಂ ನಡೆದಿತ್ತು. ಭಾಗ್ಯ, ಬಸವನ ಮನದಲ್ಲಿ ಭಯ ಮನೆಮಾಡಿತ್ತು. ಅದೇ ತಾನೆ ಕೆಲವು ದಿನಗಳ ಹಿಂದೆ ಯಾವುದೋ ಸಿನಿಮಾದಲ್ಲಿ ಹೀರೋ ಹೀರೋಯಿನ್ ಓಡಿಹೋಗಿದ್ದನ್ನು ಕಂಡಿದ್ದ ಭಾಗ್ಯ ಓಡಿ ಹೋಗುವ ನಿರ್ಧಾರಕ್ಕೆ ಬಂದಿದ್ದಳು. ಅದಕ್ಕೆ ಬಸವ ಕೂಡಾ ತಲೆಯಾಡಿಸಿದ.
ಮನೆಯಲ್ಲಿ ಅಪ್ಪ ಕೂಡಿಟ್ಟಿದ್ದ ಹಣವನ್ನು ಎತ್ತಿಕೊಂಡು ಓಡಿಹೋಗಲು ನಿರ್ಧರಿಸಿದರು. ಅಂದೇ ಕರವೇ ಕಾರ್ಯಕರ್ತ ಹಾಗೂ ಸಂಗು ಇರುವ ಬೆಂಗಳೂರಿಗೆ ಹೋಗಿ ಎರಡ್ಮೂರು ದಿನ ಅಲ್ಲಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಬೇಕು ಎಂದು ಮೊದಲೇ ನಿರ್ಧಾರವಾಗಿತ್ತು. ಅದರಂತೆ ಬಸ್ ಹತ್ತಿ ನೇರ ಸಂಗುನ ರೂಮಿಗೆ ಹೋದರು. ಮೊದಲೇ ನಿರ್ಧರಿಸಿದಂತೆ ಮದುವೆಯೂ ಆಯಿತು. ಸಂಗು ಮುಂದಾಳತ್ವದಲ್ಲಿ ಮನೆಯನ್ನೂ ಸೇರಿದರು. ಎರಡೂ ಕುಟುಂಬಗಳು ತೆಪ್ಪಗೆ ಒಪ್ಪಿಕೊಂಡವು.
ಆದರೆ ಒಂದು ದಿನ ಊರ ಜಾತ್ರೆಗೆಂದು ಭಾಗ್ಯಳನ್ನು ಕರೆದೊಯ್ದ ಅವರ ಅಪ್ಪ. ಮತ್ತೇ ಆಕೆಯನ್ನು ಕಳಿಸಲೇ ಇಲ್ಲ. ಸೋಮವಾರ ಬರ್ತೀನಿ ಎಂದವಳು ವಾರವಾದರೂ ಬರಲಿಲ್ಲ. ಬಸವ ಹೋಗಿ ವಿಚಾರಿಸಿದರೂ ಭಾಗ್ಯಳ ಮನೆಯಲ್ಲಿ ಸೂಕ್ತ ಉತ್ತರ ಸಿಗಲಿಲ್ಲ. ಆದರೆ ಕೆಲವರನ್ನು ವಿಚಾರಿಸಿದಾಗ `ಭಾಗ್ಯಳ ಹೊಟ್ಟೆಯಲ್ಲಿದ್ದ ಮಗುವನ್ನು ತೆಗೆಸಿ, ಮತ್ತೊಂದು ಮದುವೆಯಾಯ್ತು ಎಂದಾಗ ಬಸವನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು. ಮತ್ತೇ ಭಾಗ್ಯಳ ಮನೆಗೆ ಹೋಗಿ ಜಗಳ ಮಾಡಿದರೂ ಉಪಯೋಗವಾಗಲಿಲ್ಲ. ಅದೇ ಚಿಂತೆಯಲ್ಲಿ ಇಂದು ಬಸವ ಮಾನಸಿಕ ಅಸ್ವಸ್ಥನಂತೆ ಮನೆ ಹಾಗೂ ಹೆತ್ತವರಿಗೆ ಭಾರವಾಗಿ ಬದುಕುತ್ತಿದ್ದಾನೆ. ಅಲ್ಲೆಲ್ಲೋ ಭಾಗ್ಯ ಕೂಡಾ ಮನಸ್ಸಿಲ್ಲದ ಮನಸ್ಸಿಂದಲೇ ಜೀವನ ದೂಡುತ್ತಿದ್ದಾಳೆ.
ಬಸವ ಮತ್ತು ಭಾಗ್ಯರ ಪ್ರೀತಿ ದುರಂತವಾಗಿದ್ದಕ್ಕೆ ಕಾರಣ ಯಾರು..? ಅದೇ ಜಾತಿ. ಅದೆಷ್ಟೋ ಪ್ರೀತಿಯನ್ನು ಕೊಂದ ಅಪಕೀರ್ತಿ ಈ ಜಾತಿಗೆ ಸಲ್ಲುತ್ತದೆ. ಇಷ್ಟಕ್ಕೂ ನಾವೆಷ್ಟೇ ಸುಶೀಕ್ಷತರಾದರೂ ಸಮಾಜದಲ್ಲಿ ಜಾತಿ ಎನ್ನುವ ವೈರಸ್ ಮಾತ್ರ ಅಳಿಯುತ್ತಿಲ್ಲ. ಇಷ್ಟಕ್ಕೂ ನಮ್ಮ ಜಾತಿ ವ್ಯವಸ್ಥೆಗೆ ಅಂತ್ಯ ಯಾವಾಗ..? ಅದಕ್ಕೆ ಕಾಲವೇ ಉತ್ತರಿಸಬೇಕು.

ರಾಜಶೇಖರ ಜೆ.

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...