ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!

Date:

ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದ ಕಳೆದೊಂದುವಾರಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಬಂದ್ ಹಾಗೂ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ಥಿಗಳು ಹಾನಿಗೊಳಗಾಗಿದೆಯಲ್ಲದೇ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿರೋದಂತು ನಿಜ. ವಾಣಿಜ್ಯ ಸಂಘಟನೆಗಳು ಲೆಕ್ಕ ಹಾಕಿರೋ ಪ್ರಕಾರವಾಗಿ ಬೆಂಗಳೂರು ನಗರದಲ್ಲಿ ಅಂದಾಜು 25 ಸಾವಿರ ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಇಂಡಸ್ಟ್ರಿಯಲ್ ಏರಿಯಾ, ಐಟಿ ಬಿಟಿ ಕಂಪನಿಗಳು, ಜೈವಿಕ ತಂತ್ರಜ್ಞಾನ ಕಂಪನಿಗಳಲ್ಲದೇ, ಸಣ್ಣ ಪುಟ್ಟ ಬಿಡಿ ಭಾಗಗಳನ್ನು ಉತ್ಪಾಧಿಸುವ ಕಾರ್ಖಾನೆಗಳ ಮೇಲೂ ಬಂದ್‍ನ ಎಫೆಕ್ಟ್ ಜೋರಾಗಿ ತಟ್ಟಿದೆ. ಅಷ್ಟೇ ಅಲ್ಲದೇ ಸಾರಿಗೆ ಉದ್ಯಮ, ಮನರಂಜನಾ ಕ್ಷೇತ್ರ, ಪ್ರವಾಸೋದ್ಯಮ ವಲಯದ ಮೇಲೂ ಕಾವೇರಿ ವಿವಾದದ ಗಲಭೆ ತೀವ್ರ ತರವಾದ ಪರಿಣಾಮ ಉಂಟಾಗಿದೆ. ಕೃಷಿ ಉತ್ಪನ್ನ, ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದ ಪರಿಣಾಮವಾಗಿ ಭಾರೀ ನಷ್ಟವನ್ನ ಈ ವಲಯ ಅನುಭವಿಸಿದೆ.
ಇನ್ನು ರಾಜ್ಯದಲ್ಲಿ ಕಳೆದೊಂದುವಾರದಿಂದ ಸರಿಯಾದ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆದಿರದ ಕಾರಣದಿಂದಾಗಿ ಈ ವಲಯಗಳಿಂದ ರಾಜ್ಯಕ್ಕೆ ಬರಬೇಕಿದ್ದ ಸುಮಾರು 500 ಕೋಟಿ ತೆರಿಗೆ ಬಂದ್ ಆಗಿದೆ. ಬೆಂಗಳೂರು ಮಹಾ ನಗರಗಳಲ್ಲಿ ನಡೆಯುವ ವಾಣಿಜ್ಯ ವಹಿವಾಟಿನಿಂದ ದಿನವೊಂದಕ್ಕೆ ಸರ್ಕಾರಕ್ಕೆ ಬರೋಬ್ಬರಿ 150 ಕೋಟಿ ರೂ. ತೆರಿಗೆ ಸಂಗ್ರಹವಾಗ್ತಾ ಇತ್ತು. ಕಳೆದ ಶುಕ್ರವಾರದಿಂದ ಮಂಗಳವಾರದವರೆಗೆ ನಡೆದ ಬಂದ್‍ನಿಂದ ಕನಿಷ್ಠ 500 ಕೋಟಿ ತೆರಿಗೆ ನಷ್ಟವಾಗಿದೆ ಎನ್ನಲಾಗಿದೆ.
ಅಲ್ಲದೇ ದಿಢೀರನೆ ಬಂದ್‍ಗಳು ನಡೆಯುತ್ತಿರುವುದರಿಂದ ರಾಜ್ಯದ ಇಡೀ ಆರ್ಥಿಕ ವಲಯವೇ ಅಲ್ಲೋಲ ಕಲ್ಲೋಲವಾಗ್ತಾ ಇದೆ. ಒಂದು ದಿನದ ವ್ಯಾಪಾರ ವಹಿವಾಟು ನಿಂತರೆ ಅದು ಸುಧಾರಿಸಿಕೊಳ್ಳಲು ಹಲವು ದಿನಗಳೇ ಇಡಿಯುತ್ತವೆ. ಇದರಿಂದ ನಷ್ಟದ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತದೆ.
ನಿರಂತರವಾಗಿ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೀತಾ ಇರೋ ಗಲಭೆಯಿಂದಾಗಿ ನಗರಗಳಲ್ಲಿ ಮೂಲಸೌಕರ್ಯದ ಕೊರತೆಯುಂಟಾಗಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಹೋರಾಟದಿಂದ ರಾಜ್ಯಕ್ಕೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ 22 ರಿಂದ 25 ಸಾವಿರ ರೂ ನಷ್ಟವಾಗಿದೆ ಎಂದು ಅಸೋಚಾಂನ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರವತ್ ತಿಳಿಸಿದ್ದಾರೆ.
ಬಂದ್ ಬಿಸಿಯಿಂದ ಬೆಂಗ್ಳೂರಲ್ಲಿ ನಷ್ಟದ ಪ್ರಮಾಣವೆಷ್ಟು..?
500 ಕೋಟಿ ರೂ. ವಾಣಿಜ್ಯ ವಹಿವಾಟಿನಿಂದಾದ ನಷ್ಟ,,!
30 ಲಕ್ಷ. ಒಂದು ದಿನ ಮೆಟ್ರೋ ಸ್ಥಗಿತಗೊಂಡ ಪರಿಣಾಮ ಉಂಟಾದ ನಷ್ಟ.
7 ಕೋಟಿ. ಮೂರು ದಿನಗಳ ಕಾಲ ಸಾರಿಗೆ ಸಂಚಾರ ನಿಂತಿದ್ದಕ್ಕಾಗಿ ಆದ ನಷ್ಟ.
2.96 ಕೋಟಿ. ಸೋಮವಾರ, ಮಂಗಳವಾರ ಕೆಎಸ್‍ಆರ್‍ಟಿಸಿಗೆ ಆದ ನಷ್ಟ.

POPULAR  STORIES :

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...