ಇವತ್ತು ಸಿ.ಎಂ.ಸಿದ್ದರಾಮಯ್ಯ ಪುಲ್ ಮೂಡ್‌ನಲ್ಲಿದ್ರು ಅಂತಾ ಅನ್ಸುತ್ತೆ. ನೋಟ್ ಬ್ಯಾನ್ ವಿರುದ್ಧ ಕಾಂಗ್ರೆಸ್ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡ ಸಿ.ಎಂ. ಇವತ್ತು ಗಮನ ಸೆಳೆದಿದ್ದು ವಿಭಿನ್ನ ಶೈಲಿಯ ಭಾಷಣದ ಮೂಲಕ. ಮೊದಲೆ ಸಿದ್ದರಾಮಯ್ಯ ಹಳೆ ಮೈಸೂರು ಪ್ರಾಂತ್ಯದವರು. ಅವರ ಭಾಷಣಗಳಲ್ಲಿ ಮತ್ತು ಮಾತಿನಲ್ಲಿ ಆ ಗ್ರಾಮಿಣ ಸೊಗಡು ಇದ್ದೆ ಇರುತ್ತೆ. ಇನ್ನು ಮಾತಿಗೆ ನಿಂತ್ರೆ ಅವರದ್ದು ಡಿಫರೆಂಟ್ ಮ್ಯಾನರಿಸಂ. ಅದು ಸದನದಲ್ಲೆ ಆಗ್ಲಿ ಸಾರ್ವಜನಿಕ ವೇದಿಕೆಯೇ ಆಗ್ಲಿ ಭಾಷಣಕ್ಕೆ ನಿಂತ್ರೆ ಸಿದ್ದು ಮಾತು ರಂಗೇರುತ್ತೆ. ಆದ್ರೆ ಇವತ್ತು ಡಿಫರೆಂಟ್ ಅನ್ನಿಸಿದ್ದು ಸಿದ್ದು ಮೋದಿ ಜೊತೆ ಜೊತೆಗೆ ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದ್ದು. ನಿಮಗೆ ಸಿದ್ದರಾಮಯ್ಯ ಮಾತಿನ ಮಧ್ಯೆ ಇಂಗ್ಲೀಷ್ ಡೈಲಾಗ್ ಹೊಡೆಯೋದು ಗೊತ್ತು. ಆದ್ರೆ ಅವರ್ಯಾವತ್ತಾದ್ರು ಹಿಂದಿ ಮತ್ತು ಉರ್ದು ಮಾತಾಡಿದ್ದು ಕೇಳಿದ್ರಾ ? ಹಾಗಿದ್ರೆ ಇವತ್ತಿನ ಸಿದ್ದು ಭಾಷಣ ಮಿಸ್ ಮಾಡ್ಕೋಬೇಡಿ. ಅದ್ಯಾವ ದೇವರು ಇವತ್ತು ಸಿದ್ದು ಮೈಮೇಲೆ ಬಂದಿತ್ತೋ ಗೊತ್ತಿಲ್ಲ…! ಸಿದ್ದು ಗುದ್ದು ಬೇರೆಯೆ ಇತ್ತು…!
ಹಾಗಾದ್ರೆ ಮೈಕ್ ಸಿಕ್ಕಿದ್ದೆ ತಡ ಕ್ಯಾ ಜಿ ? ಕೈ ಸಾ ಜಿ ? ಅಂತಾ ಸಿ.ಎಂ. ಮಾತಾಡಿದ್ರಾ ಅಂತಾ ನಿಮ್ಮ ಡೌಟ್ ತಾನೆ.? ಅದ್ಯಾವುದು ಅಲ್ಲ ಮುಂದೆ ಓದಿ..!
ಸಿದ್ದು ಕೋಭಿ ಹಿಂದಿ ಆತ ಹೈ…!
ಮೋದಿ ಭಾಷಣ ನೀವು ಕೇಳೆ ಇರ್ತೀರಾ. ಅವರ ಡೈಲಾಗ್ ಡೆಲಿವರಿ, ಟೈಮಿಂಗ್‌ಗೆ ಎದುರಾಳಿಗಳು ತಲೆಬಾಗಿ ಅಹುದುಹುದು ಎನ್ನಬೇಕು. ಆ ರೀತಿ ಇರುತ್ತೆ ಮೋದಿ ಭಾಷಣ. ಮೋದಿ ಶೈಲಿಯನ್ನೆ ಸಿದ್ದು ಅನುಕರಣೆ ಮಾಡಿದ್ರೆ ಹೇಗಿರುತ್ತೆ..? ಅನ್ನೋದಕ್ಕೆ ಸಾಕ್ಷಿಯಾಗಿದ್ದು ಇವತ್ತಿನ ಭಾಷಣ.
ಬಾಯಿಯೋ ಔರ್ ಬೆಹನೋ ಅಚ್ಛೆ ದಿನ್ ಆಯೆಗಾ…! ಇದು ಮೋದಿಯವರ ಸ್ಲೋಗನ್. ಈ ಸ್ಲೋಗನ್ ನೀವು ಕೇಳಿರ್ತೀರಾ. ಆದ್ರೆ ಸಿದ್ದರಾಮಯ್ಯ ಈ ಸ್ಲೋಗನ್‌ನ ಮುಂದುವರೆದ ಭಾಗವನ್ನು ಜನರ ಮುಂದೆ ತರೆದಿಟ್ರು. ಅದೂ ಥೇಟ್ ಮೋದಿ ಸ್ಟೈಲ್‌ನಲ್ಲೆ..!
ಬಾಯಿಯೋ ಔರ್ ಬೆಹನೋ ಅಚ್ಛೆ ದಿನ್ ಆಯೆಗಾ..! ಅಂತಾ ಮೋದಿ ಹೇಳಿಕೆಯನ್ನು ಕೋಟ್ ಮಾಡಿದ ಸಿದ್ದು, ನಂತರ, ಕಬ್ ಆಯೇಗಾ ಅಚ್ಛೆ ದಿನ್..? ಮಾಲೂಮ್ ನಹಿ ? ಕ್ಯಾ ಮಾ ? ಅಂತ ಭಾಷಣ ಕೇಳಲು ಕುಳಿತಿದ್ದ ಮುಸ್ಲೀಂ ಮಹಿಳೆಯನ್ನು ಪ್ರಶ್ನಿಸಿದ್ರು…!
ಸಬ್ ಕಾ ಸಾಥ್, ಸಬ್ ಕಾ ವಿಕಾಸ್..ಈ ಮಾತನ್ನು ನೀವೆಲ್ಲಾ ಕೇಳೆ ಇರ್ತೀರಾ. ಇದು ಮೋದಿಯ ಪ್ರಚಲಿತದಲ್ಲಿರುವ ಬಹುಮುಖ್ಯವಾದ ಘೋಷಣೆ. ಮೋದಿಯ ಈ ಘೋಷಣೆಗೆ ಸಿದ್ದು ಬಾಯಲ್ಲಿ ಆಹುತಿಯಾಗಿದ್ದು ಈಶ್ವರಪ್ಪ. ಅಲ್ರೀ.., ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾ ಹೇಳ್ತಾರೆ, ಆದ್ರೆ ನಮ್ಮ ರಾಜ್ಯದಲ್ಲಿ ಒಂದು ‘ ಮೆಂಟಲ್ ಗಿರಾಕಿ’ ಯಿದೆ, ಅದರ ಹೆಸರು ಈಶ್ವರಪ್ಪ. ಅದು ಹೇಳುತ್ತೆ ಹಿಂದೂ ಧರ್ಮದವರನ್ನು ಬಿಟ್ರೆ ನಾವು ಬೇರೆ ಯಾವ ಧರ್ಮದವರಿಗೂ ಬಿಜೆಪಿ ಟಿಕೆಟ್ ಕೊಡಲ್ಲ ಅಂತಾ. ಹಾಗಾದ್ರೆ ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ , ಮಾತಿನ ಅರ್ಥವೇನು ? ಅಂತಾ ಟಾಂಗ್ ಕೊಟ್ರು. ಆದ್ರೆ ಇಲ್ಲಿ ಹೇಳುತ್ತೆ, ಮಾಡುತ್ತೆ ಅಂತಾ ಹೇಳಿದ್ದು ಈಶ್ವರಪ್ಪನವರಿಗೆ. ಹಾಗಾದ್ರೆ ಈಶ್ವರಪ್ಪ ಯಾವ ಲಿಂಗಕ್ಕೆ ಸೇರಿದವರು ಅನ್ನೋ ಪ್ರಶ್ನೆಯನ್ನು ಎಲ್ಲರ ತಲೆಗೆ ಹುಳು ಬಿಟ್ರು ಸಿದ್ದು.
ನಿಮಗೆ ಶೋಲೆಯ ಗಬ್ಬರ್ ಸಿಂಗ್‌ನ ಡೈಲಾಗ್ ಗೊತ್ತೆ ಇರುತ್ತೆ. ’ ಕಿತ್‌ನೆ ಆದ್ಮಿ ತೆ ..? ‘ ಇದು ಶೋಲೆ ಫಿಲ್ಮ್‌ನ ಫೇಮಸ್ ಡೈಲಾಗ್. ಅದು ಇವತ್ತು ಸಿದ್ದು ಬಾಯಲ್ಲಿ ‘ ಕಿತ್‌ನೆ ಜೂಟ್ ಬೋಲ್ ತಿ ಹೈ’ ಅಂತಾ ಮೋದಿಗೆ ಟಾಂಗ್ ನೀಡುವ ಪರಿಯಾಗಿತ್ತು.
ನೋಟ್ ಬ್ಯಾನ್ ಮಾಡಿದ್ಮೇಲೆ ನಿಮಗ್ಯಾರಿಗಾದ್ರೂ ಒಳ್ಳೆಯದಾಗಿದ್ಯಾ ? ಇದು ಸಿದ್ದರಾಮಯ್ಯ ಪ್ರಶ್ನೆ. ಈ ಪ್ರಶ್ನೆಗೆ ಅಲ್ಲಿ ನೆರೆದಿದ್ದವರು ಒಕ್ಕೊರಲಿನಿಂದ ಇಲ್ಲ ಅಂದ್ರು. ಆಗ ಸಿದ್ದರಾಮಯ್ಯ ಅದ್ಹೇಗ್ರಿ ಸಾಧ್ಯ ಇವತ್ತು ನೋಟ್ ಬ್ಯಾನ್ ಮಾಡಿ ಅಂಬಾನಿ,ಅದಾನಿ,ರಾಮ್‌ದೇವ್ ಮತ್ತು ಅಮಿತ್ ಶಾ ಮಗ ಜಯ್ ಶಾ ಉದ್ದಾರವಾಗಿದ್ದಾರೆ. ನೀವು ಆಗಿಲ್ವಾ ? ಅಂತಾ ಮರುಪ್ರಶ್ನೆ ಹಾಕಿದ್ರು.
ಇನ್ನು ರಾಜ್ಯದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಗಿರಾಕಿ, ಅಲ್ಲಿ ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದವರು. ಇವರು ನಮ್ಮ ಸರ್ಕಾರದ ಬಗ್ಗೆ ಮಾತಾಡ್ತಾರೆ. ಇವರಿಗೇನಾದ್ರು ನಾಚಿಕೆಯಿದ್ಯಾ ಅಂದ್ರು
ಒಟ್ಟಾರೆ ಸಿದ್ದು ಇವತ್ತು ಬೇರೆಯದೆ ವರಸೆ ತೋರಿಸಿ ಬಿಜೆಪಿ ನಾಯಕರನ್ನು ಕಿಚಾಯಿಸಿದ್ದು ಹೈಲೈಟ್. ಇದಿಷ್ಟು ಸಿದ್ದು ಮತ್ತೊಮ್ಮೆ ಗದ್ದುಗೆಗೇರಲು ಸಹಾಯ ಮಾಡುತ್ತಾ..? ಸದ್ಯಕ್ಕೆ ನೋ ಐಡಿಯಾ…!
-ಭವಿತ್ ದೋಣಗುಡಿಗೆ