ದೂರುದಾರನೊಬ್ಬ ಲೋಕಾಯುಕ್ತ ಕಚೇರಿಯಲ್ಲೇ ಲೋಕಾಯುಕ್ತರಿಗೆ ಚಾಕು ಇರಿದ ಪ್ರಕಣ ಇನ್ನೂ ನೆನಪಿನಿಂದ ಮಾಸಿಲ್ಲ. ಅಷ್ಟರಲ್ಲೇ ಲೋಕಾಯುಕ್ತ ಕಚೇರಿಯಲ್ಲಿ ನಡೆಯಬೇಕಿದ್ದ ಅನಾಹುತವೊಂದು ತಪ್ಪಿದೆ.
ವಿಜಯನಗರ ನಿವಾಸಿ ಸೋನಿಯಾ ರಾಣಿ ಎಂಬ ಮಹಿಳೆ ಬೆಳಗ್ಗೆ 11ಗಂಟೆಗೆ ಲೋಕಾಯುಕ್ತ ಕಚೇರಿಗೆ ಚಾಕು ತಂದಿದ್ದರು. ಮೆಟಲ್ ಡಿಟೆಕ್ಟರ್ ಇದನ್ನು ಗುರುತಿಸಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಈ ಬಾರಿಯೂ ಲೋಕಾಯುಕ್ತರನ್ನೇ ಟಾರ್ಗೆಟ್ ಮಾಡಲಾಗಿತ್ತೇ ಅಥವಾ ಬೇರೆಯವರನ್ನು ಗುರಿಯಾಗಿಸಲಾಗಿತ್ತೇ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮಹಿಳೆಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.