ಟೈಮ್ಸ್ ನೌ ವಾಹಿನಿ ಮತ್ತು ವಿಎಂಆರ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆಗಲಿದೆ…! ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಜೆಡಿಎಸ್ ಮೈತ್ರಿ ಅನಿವಾರ್ಯವಾಗಲಿದೆ.
ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ ಶೇ 91, ಬಿಜೆಪಿಗೆ ಶೇ 89, ಜೆಡಿಎಸ್ ಮತ್ತು ಬಿಎಸ್ 40 ಹಾಗೂ ಇತರರಿಗೆ 4 ಸ್ಥಾನಗಳು ಬರಲಿವೆ.
ವಿಭಾಗವಾರು ಸಮೀಕ್ಷೆಯನ್ನು ಸಹ ನೀಡಿದೆ.
ಮುಂಬೈ ಕರ್ನಾಟಕದಲ್ಲಿ 2013 ರಲ್ಲಿ 50ಕ್ಷೇತ್ರಗಳಲ್ಲಿ 31 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 21 ಸ್ಥಾನಗಳನ್ನು , ಕಳೆದ ಬಾರಿ 13 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 23 ಸ್ಥಾನಗಳನ್ನು ಗೆಲ್ಲಲಿದೆ. 1ಸ್ಥಾನ ಗೆದ್ದಿದ್ದ ಜೆಡಿಎಸ್ ಮತ್ತು ಬಿಎಸ್ ಪಿ ಈ ಬಾರಿ 5 ಸ್ಥಾನ ತನ್ನದಾಗಿಸಿಕೊಳ್ಳಲಿದೆ.
ಕರಾವಳಿ ಕರ್ನಾಟಕದಲ್ಲಿ 5 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 8 ಸ್ಥಾನ ಗೆಲ್ಲಲಿದೆ. 13 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 11ರಲ್ಲಿ ಗೆದ್ದು 2 ಸ್ಥಾನ ಕಳೆದುಕೊಳ್ಳಲಿದೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಸೀಟ್ ಹೆಚ್ಚಾಗಲಿದೆ. ಬಿಜೆಪಿ 13 ಸ್ಥಾನ ಪಡೆದರೆ, ಕಾಂಗ್ರೆಸ್ 17 ಸ್ಥಾನ ಗೆಲ್ಲಲಿದೆ. ಜೆಡಿಎಸ್ ಕೇವಲ 2 ಸ್ಥಾನ ಮಾತ್ರ ತನ್ನದಾಗಿಸಿಕೊಳ್ಳುತ್ತದೆ ಎಂದು ಸಮೀಕ್ಷೆ ಹೇಳಿದೆ.
ಮಧ್ಯ ಕರ್ನಾಟಕದಲ್ಲಿ ಕಳೆದ ಬಾರಿ 4 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 22ಕ್ಷೇತ್ರಗಳಿಗೆ ಏರಿಕೆ ಆಗಲಿದೆ. ಕಾಂಗ್ರೆಸ್ ಸೀಟು 19 ರಿಂದ 10ಕ್ಕೆ ಇಳಿಯುತ್ತದೆ.
ಹೈದರಾಬಾದ್ ಕರ್ನಾಟಕದಲ್ಲಿ ಕಳೆದ ಬಾರಿ 4 ಸ್ಥಾನ ಪಡೆದಿದ್ದ ಬಿಜೆಪಿ 15 ಸ್ಥಾನ ಪಡೆಯಲಿದ್ದು , ಕಳೆದ ಬಾರಿ 19 ಸ್ಥಾನ ಪಡೆದಿದ್ದ ಕಾಂಗ್ರೆಸ್ 12 ಸ್ಥಾನ ಪಡೆಯಲಿದೆ. 4 ಸ್ಥಾನ ಪಡೆದಿದ್ದ ಜೆಡಿಎಸ್ , ಬಿಎಸ್ ಪಿ ಈ ಬಾರಿ 3 ಸ್ಥಾನ ಪಡೆಯಲಿವೆ.
ಹಳೆ ಮೈಸೂರು ಭಾಗದಲ್ಲಿ ಕಳೆದ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 20ಸ್ಥಾನ ಮಾತ್ರ ಪಡೆಯಲಿದೆ.
2 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲ್ಲಲಿದೆ. 23 ಸ್ಥಾನ ಗೆದ್ದಿದ್ದ ಜೆಡಿಎಸ್ 25 ಸ್ಥಾನ ಪಡೆಯಲಿದೆ.