ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಮತದಾನದ ಹಕ್ಕಿನ ಬಗ್ಗೆ ಮಾತಾಡಿದ್ದಾರೆ.
ಲಂಡನ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಮಲ್ಯ, ಕರ್ನಾಟಕ ವಿಧಾನಸಭಾ ಚುನಾವಣೆಯ ಕುರಿತು ಮಾತಾಡಿರುವ ಬಗ್ಗೆ ಎಎನ್ ಐ ವರದಿ ಮಾಡಿದೆ.
ಕರ್ನಾಟಕದಲ್ಲಿ ಮತ ಚಲಾಯಿಸುವುದು ತನ್ನ ಪ್ರಜಾಪ್ರಭುತ್ವ ಹಕ್ಕು ಎಂದಿರುವ ಮಲ್ಯ, ತಾನು ಇಲ್ಲಿರುವುದರಿಂದ (ಲಂಡನ್) ಪ್ರಯಾಣ ಬೆಳೆಸುವುದು ಸಾಧ್ಯವಿಲ್ಲ. ರಾಜಕೀಯ ಬೆಳವಣಿಗೆಗಳನ್ನು ಹತ್ತಿರದಿಂದ ಫಾಲೋ ಮಾಡ್ತಿಲ್ಲ ಅಂದಿದ್ದಾರೆ.