ಪ್ರತಿದಿನ ಮಣ್ಣು ತಿನ್ನೋ ಅಜ್ಜನ ಕಥೆಯಿದು…! ಅಚ್ಚರಿ ಎನಿಸಿದ್ರು ಇದು ಸತ್ಯ.
ಜಾರ್ಖಂಡ್ ನ 99 ವರ್ಷದ ಕಾರು ಪಾಸ್ವಾನ್ ಎಂಬ ವ್ಯಕ್ತಿ ಪ್ರತಿದಿನ 1 ಕೆ.ಜಿ ಮಣ್ಣು ತಿನ್ತಾರೆ…! ಇವರು ಹೀಗೆ ಮಣ್ಣು ತಿನ್ನುವುದನ್ನು ರೂಢಿಸಿಕೊಂಡಿರುವುದರ ಹಿಂದೆ ನೋವಿದೆ, ಬಡತನದ ಕ್ರೌರ್ಯವಿದೆ. ಇವರು ಚಿಕ್ಕವರಿದ್ದಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. 11 ವರ್ಷದ ಬಾಲಕನಿರುವಾಗ ಇವರು ಹೊಟ್ಟೆ ಹಸಿವು ತಾಳಲಾಗದೆ ಮೊದಲ ಬಾರಿಗೆ ಮಣ್ಣನ್ನು ತಿಂದರು. ಹೊಟ್ಟೆ ಹಸಿವು ನೀಗಿಸಿದ ಮಣ್ಣಿನ ರುಚಿ ಇವರಿಗೆ ಹಿಡಿಸಿತು. ಆದ್ದರಿಂದ ನಿತ್ಯ ಮಣ್ಣು ತಿನ್ನಲಾರಂಭಿಸಿದ್ರು. ಇವತ್ತಿಗೂ ನಿತ್ಯ 1 ಕೆ.ಜೆ ಮಣ್ಣು ತಿನ್ತಾರೆ. ಯಾರು ಎಷ್ಟು ಹೇಳಿದ್ರು ಮಣ್ಣು ತಿನ್ನೋದನ್ನು ಇವರು ಬಿಟ್ಟಿಲ್ಲ. 99ರ ವಯಸ್ಸಲ್ಲೂ ಗಟ್ಟಿಮುಟ್ಟಾಗಿದ್ದಾರೆ.
ಮಣ್ಣು ತಿನ್ನೋ 99ರ ಅಜ್ಜ…!
Date: