ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಅವಕಾಶ

Date:

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ . ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್ ನಲ್ಲೇ ಮಾಡುವ ಅವಾಕಶವನ್ನು ಮದ್ರಾಸ್ ಹೈಕೋರ್ಟ್ ಕಲ್ಪಿಸಿ ತೀರ್ಪು ನೀಡಿದೆ.
ಕರುಣಾನಿಧಿ ಸಮಾಧಿಗೆ ಚೆನ್ನೈನ ಮರೀನಾ ಬೀಚ್ ನಲ್ಲಿ ಜಾಗ ನೀಡಲು ಅಲ್ಲಿ ಆಡಳಿತದಲ್ಲಿರುವ ಎಐಡಿಎಂಕೆ ಸರ್ಕಾರ ನಿರಾಕರಿಸಿತ್ತು. ಮರೀನಾ ಬೀಚ್ ನಲ್ಲೇ ಜಾಗ ನೀಡಬೇಕು ಎಂದು ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಡಿಎಂಕೆಗೆ ದುಃಖದಲ್ಲಿಯೂ ಜಯ ಸಿಕ್ಕ ಖುಷಿಗೆ ಕಾರಣವಾಗಿದೆ. ಆಡಳಿತ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಗುರು ಅಣ್ಣಾದೊರೈ ಅವರ ಸಮಾಧಿಯ ಪಕ್ಕದಲ್ಲೇ ಶಿಷ್ಯ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸರ್ಕಾರ ಸಾವಿನ ಮನೆಯಲ್ಲಿ ರಾಜಕೀಯ ಮಾಡಿರುವುದಕ್ಕೆ ಸರಿಯಾದ ಪಾಠ ಕೋರ್ಟ್ ನಿಂದಾಗಿದೆ.‌ ಸರ್ಕಾರದ ವಿವೇಚನೆ ಬಿಟ್ಟ ವಿಚಾರ ಇದಾಗಿತ್ತು. ಸರ್ಕಾರ ಜನರ ಆಸೆಯಂತೆ ಮೊದಲೇ ಮರೀನಾ ಬೀಚ್ ನಲ್ಲಿ ಅವಕಾಶ ನೀಡಿದ್ದರೆ ಈ ಮುಖಭಂಗ ಅನುಭವಿಸುವ ಅಗತ್ಯ ಇರಲಿಲ್ಲ.

Share post:

Subscribe

spot_imgspot_img

Popular

More like this
Related

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...