ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮಾಜಿಮುಖ್ಯಮಂತ್ರಿ ಎಂ .ಕರುಣಾನಿಧಿ ಅವರ ಅಂತಿಮ ದರ್ಶನ ಮಾಡಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದ ಮೋದಿ,ಅಲ್ಲಿಂದ ಹೆಲಿಕಾಪ್ಟರ್ ಮೂಲಕ ರಾಜಾಜಿ ಹಾಲ್ ಗೆ ತೆರಳಿ ಕರುಣಾನಿಧಿ ಅವರಿಗೆ ಅಂತಿಮ ನಮನಸಲ್ಲಿಸಿದರು.
ರಾಜಾಜಿ ಹಾಲ್ ಗೆ ತಮಿಳುನಾಡಿನಾದ್ಯಂತ ಲಕ್ಷಾಂತರ ಜನ, ರಾಜಕೀಯ ಧುರೀಣರು, ಚಿತ್ರ ನಟರು ಮೊದಲಾದ ಗಣ್ಯಾತೀಗಣ್ಯರು ಆಗಮಿಸಿ, ಕಲೈನಾರ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ.