ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ ಎಂಬ ಸುದ್ದಿಯನ್ನು ನಂಬಲಾಗುತ್ತಿಲ್ಲ. 2 ದಿನಗಳ ಹಿಂದಷ್ಟೇ ಸಿನಿಮಾ ಡಬ್ಬಿಂಗ್ ಕೂಡ ಮಾಡಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಚೇತರಿಸಿಕೊಳ್ಳುತ್ತಿದ್ದರು ಎರಡು ದಿನಗಳ ಹಿಂದೆ ಡಬ್ಬಿಂಗ್ ಕೂಡ ಮಾಡಿದ್ರು.
ಉಸಿರಾಟದ ಸಮಸ್ಯೆಯಿಂದ 2 ದಿನದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಸಹೋದರಿ ಗಾಯತ್ರಿ ಅವರು ತಿಳಿಸಿದ್ದಾರೆ.