ವಿಶ್ವ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ t20 ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್, ಪಂದ್ಯ ಆರಂಭ ಮುನ್ನ ರಾಷ್ಟ್ರಗೀತೆ ಗೌರವ ಸಲ್ಲಿಸುವ ಕಾರ್ಯಕ್ರಮದ ವೇಳೆ ಬಾಲಕಿಯನ್ನು ಹೊತ್ತು ಸಾಗಿದ್ದು , ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ಮುನ್ನ ರಾಷ್ಟ್ರಗೀತೆ ಹಾಡುವಾಗ ಆಟಗಾರ್ತಿಯರಿಗೆ ಸ್ವಾಗತ ಕೋರಲು ಆಗಮಿಸಿದ್ದ ಪುಟ್ಟ ಬಾಲಕಿ ಬಿಸಿಲಿನ ತಾಪಕ್ಕೆ ಬಳಲಿದ್ದಳು.
ತಮ್ಮ ಎದುರು ನಿಂತಿದ್ದ ಬಾಲಕಿ ಬಿಸಿಲಿನ ತಾಪಕ್ಕೆ ಸುಸ್ತಾಗಿರೋದನ್ನು ಗಮನಿಸಿದ ಕೌರ್ ತಕ್ಷಣ ಆಕೆಯನ್ನು ಹೊತ್ತು ಸಾಗಿದ್ದಾರೆ. ಬಳಿಕ ಮೈದಾನದ ಸಿಬ್ಬಂದಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ.
— Mushfiqur Fan (@NaaginDance) November 11, 2018