ಕರ್ನಾಟಕದ ವಿರೋಧ ಮತ್ತು ಆತಂಕವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ. ಕರ್ನಾಟಕದ ಆಕ್ಷೇಪವನ್ನು ಲೆಕ್ಕಿಸದೇ ಈ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಇದುವರೆಗೆ ತನ್ನ ಪ್ರತಿನಿಧಿಯ ಹೆಸರನ್ನು ಕಳುಹಿಸಿಲ್ಲ ಎಂಬ ನೆಪವೊಡ್ಡಿ ತಾನೇ 8 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಕೇಂದ್ರೀಯ ಜಲ ಆಯೋಗದ ಮುಖ್ಯ ಇಂಜಿನಿಯರ್ ನವೀನ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಕೇರಳ , ತಮಿಳುನಾಡು ,ಪುದುಚರಿಯ ನೀರಾವರಿ ಮುಖ್ಯ ಇಂಜಿನಿಯರ್ ಗಳು, ಹವಮಾನ ಇಲಾಖೆಯ ವಿಜ್ಞಾನಿ ಡಾ. ಎ ಮಹಾಪಾತ್ರ ,ಕೇಂದ್ರಿಯ ಜಲ ಆಯೋಗದ ಕೊಯಮತ್ತೂರು ಸಿ. ಅಂಡ್ ಎಸ್ ಆರ್ ಓ ಮುಖ್ಯ ಇಂಜಿನಿಯರ್ ಎನ್ ಎಂ ಕೃಷ್ಣನುಣ್ಣಿ ,ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತ ಹಾಗೂ ಕೇಂದ್ರಿಯ ಜಲ ಆಯೋಗದ ಮುಖ್ಯ ಇಂಜಿನಿಯರ್ ಎ.ಎಸ್ ಗೋಯಲ್ ನಿಯಂತ್ರಣ ಸಮಿತಿ ಸದಸ್ಯರಾಗಿದ್ದಾರೆ.