ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ …..ಕನ್ನಡದ ಈ ಹೆಮ್ಮೆಯ ಮನೆಮಗ , ಸ್ಯಾಂಡಲ್ ವುಡ್ ಮಾತ್ರವಲ್ಲದೆ , ತೆಲುಗು, ಹಿಂದಿ ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿರೋ ಬಹುಭಾಷಾ ತಾರೆ. ಹಾಲಿವುಡ್ ನಲ್ಲೂ ಛಾಪು ಮೂಡಿಸಲಿದ್ದಾರೆ ನಮ್ಮ ಈ ಸುದೀಪ್.
ಸುದೀಪ್ ಅಂದ್ರೆ ಕೇವಲ ಸಿನಿಶಕ್ತಿ ಮಾತ್ರವಲ್ಲ…ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿರೋ ಸಕಲಕಲಾವಲ್ಲಭ…! ಸಿನಿಮಾದಿಂದಾಚೆಗೆ ಕಿರುತೆರೆಯಲ್ಲಿಯೂ ಸುದೀಪ್ ಬ್ಯುಸಿ. ಅಷ್ಟೇ ಅಲ್ಲದೆ ಕ್ರಿಕೆಟ್ ನಲ್ಲೂ ಇದ್ದಾರೆ ಕಿಚ್ಚ.
ಸಿಸಿಎಲ್ ನಲ್ಲಿ ಕಿಚ್ಚ ಆಡ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಲನಚಿತ್ರ ಕಪ್ ಆರಂಭಿಸಿದ್ದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪ್ರೇಮ್ ಹೀಗೆ ಸ್ಯಾಂಡಲ್ ವುಡ್ ನ ಅನೇಕ ನಟರು, ಜೊತೆಗೆ ನಿರ್ದೇಶಕರು, ನಿರ್ಮಾಪಕರು ಒಂದೆಡೆ ಸೇರಿದ್ದರು.
ಕೆಸಿಸಿ ಸೀಝನ್ 1ರ ಅಭೂತಪೂರ್ವ ಯಶಸ್ಸಿನ ಬಳಿಕ ಈಗ ಕಿಚ್ಚ ಸೀಝನ್ 2 ಅನ್ನ ಇನ್ನೂ ದೊಡ್ಡಮಟ್ಟಿನ ನಲ್ಲಿ ನಡೆಸಲು ಮುಂದಾಗಿದ್ದಾರೆ.
ಕೆಸಿಸಿ ಸೀಜನ್ 2ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗರು ಸಹ ಕಣಕ್ಕಿಳಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನರ್, ಶ್ರೀಲಂಕಾದ ತಿಲಕರತ್ನೆ ದಿಲ್ಶ್ಯಾನ್, ಇಂಗ್ಲೆಂಡ್ ನ ಓವೈಸ್ ಶಾ, ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ಮತ್ತಿತರರು ಭಾಗಿಯಾಗಲಿದ್ದಾರೆ. ಜೊತೆಗೆ ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಕೂಡ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಲು ಕಿಚ್ಚ ಕರೆದ ಸುದ್ದಿಗೋಷ್ಠಿಯಲ್ಲಿ ಸೆಹ್ವಾಗ್, ದಿಲ್ಶಾನ್, ಓವೈಸ್ ಶಾ , ಗಿಬ್ಸ್ ಪಾಲ್ಗೊಂಡಿದ್ದು ಸಹ ವಿಶೇಷವಾಗಿತ್ತು.