Kedarnath: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ತಪ್ಪಿದ ಭಾರೀ ಅನಾಹುತ
ಡೆಹ್ರಾಡೂನ್: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಲ್ಯಾಂಡಿಂಗ್ ಮಾಡುವಾಗ ತಾಂತ್ರಿಕ ದೋಷ ಕಂಡುಬಂದಿದೆ. ಈ ಹೆಲಿಕಾಪ್ಟರ್ ಏಮ್ಸ್ ರಿಷಿಕೇಶದ ಏರ್ ಆಂಬ್ಯುಲೆನ್ಸ್ ಸೇವೆಗೆ ಸೇರಿದ್ದು,
ರೋಗಿಯನ್ನು ಕರೆದೊಯ್ಯಲು ರಿಷಿಕಲೇಶ್ ನಿಂದ ಕೇದಾರನಾಥಕ್ಕೆ ಹೋಗಿತ್ತು. ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್‌ಗೆ ಇಳಿಸಲಾಗುತ್ತಿತ್ತು, ಆದ್ರೆ ಹೆಲಿಪ್ಯಾಡ್‌ಗೆ ಇನ್ನೂ 20 ಮೀಟರ್ ದೂರದಲ್ಲಿರುವಾಗಲೇ ಹಿಂಭಾಗ ಮುರಿದು ಹೆಲಿಕಾಪ್ಟರ್ ಪತನಗೊಂಡಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಏರ್ ಆಂಬುಲೆನ್ಸ್‌ನಲ್ಲಿದ್ದ ಇಬ್ಬರು ವೈದ್ಯರು ನತ್ತು ಪೈಲಟ್ ಸುರಕ್ಷಿತವಾಗಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದ್ದು, ಇನ್ನಷ್ಟೇ ಪರಿಶೀಲನೆ ನಡೆಯಬೇಕಿದೆ.