ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ .
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಡಾ.ಮಹದೇವಪ್ಪ, ಎನ್.ಎಸ್.ರಾಮಚಂದ್ರ, ಮಹದೇವಪ್ಪ, ಪ್ರದೀಪ್ ಆರ್ಯ, ಟಿ.ಎನ್.ಸೀತಾರಾಂ, ಅನುಶ್ರೀ, ಕೂಡ್ಲು ರಾಮಕೃಷ್ಣ, ಬೆಂಗಳೂರು ನಾಗೇಶ್, ತಿಮ್ಮೇಗೌಡ, ಡಾ.ಕಾಮಿನಿ ರಾವ್, ಡಾ.ರವೀಂದ್ರ, ಅರುಳಾಲನ್, ಪಿ.ಧನಂಜಯ, ಡಾ.ಸಚ್ಚಿದಾನಂದ್, ಡಾ.ಎಂ.ವಿ.ಶ್ರೀನಿವಾಸ್, ತಲಕಾಡು ಚಿಕ್ಕರಂಗೇಗೌಡ, ಶ್ರೀನಿವಾಸ್ ಜಿ.ಕಪ್ಪಣ್ಣ, ಚೇತನ್, ಮಾಧ್ಯಮ ಕ್ಷೇತ್ರದಿಂದ ಎಂ.ನಾಗರಾಜ್, ರವಿಶಂಕರ್ ಭಟ್, ಬಿ.ಪಿ.ಮಲ್ಲಪ್ಪ, ಈ ಸಂಜೆ ಛಾಯಾಗ್ರಾಹಕ ಕ್ಯಾತನಹಳ್ಳಿ ಚಂದ್ರಶೇಖರ್, ಸುದರ್ಶನ್ ಚನ್ನಂಗಿಹಾಳ್, ಶಿವರಾಮ್, ರಾಘವೇಂದ್ರ ಗಣಪತಿ, ಧ್ಯಾನ್ ಪೂಣಚ್ಚ, ಬಿ.ಎನ್.ರಮೇಶ್, ಹೊನ್ನಾಚಾರ್, ಆಲ್‍ಫ್ರೆಡ್, ಸಿದ್ದರಾಜು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿ ಕೆಂಪೇಗೌಡ ಪ್ರಶಸ್ತಿ ಪಡೆಯುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ, ಪ್ರಶಸ್ತಿ ಪತ್ರ ಹಾಗೂ 15 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ.