ಇನ್ನು ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್…!

Date:

ಇನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಲ್ಲಿ ವಿಮಾನ ಹತ್ತುವರಿಗೆ ಅವರ ಮುಖವೇ ಬೋರ್ಡಿಂಗ್ ಪಾಸ್ ಆಗಲಿದ್ದು, ವಿಮಾನ ಏರುವವರು ಬೋರ್ಡಿಂಗ್ ಪಾಸ್ , ಪಾಸ್ ಪೋರ್ಟ್ ಅಥವಾ ಇತರೆ ವೈಯಕ್ತಿಕ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ.

ಹೌದು, ಕೆಐಎನಲ್ಲಿ ಬಯೋ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಿಕೊಂಡು ಸ್ಕ್ಯಾನ್ ಮಾಡಲಾದ ನಿಮ್ಮ ಮುಖವನ್ನೇ ನಿಮ್ಮ ಬೋರ್ಡಿಂಗ್ ಪಾಸ್ ಆಗಿ ಮಾಡೋ ಯೋಜನೆ ಪರಿಚಯಿಸಲಾಗುತ್ತದೆ.
ತಡೆರಹಿತ ಸುಲಭ ಪ್ರಯಾಣಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ.

ಸ್ಪೈಸ್ ಜೆಟ್, ಜೆಟ್ ಏರ್ವೇಸ್ ಮತ್ತು ಏರ್ ಏಷ್ಯಾ ವಿಮಾನದ ದೇಶೀಯ ಪ್ರಯಾಣಿಕರು ಪ್ರಾರಂಭದಲ್ಲಿ ಇದರ ಪ್ರಯೋಜನ ಪಡೆಯುತ್ತಾರೆ.

ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ಸಿಇಒ ಹರಿ ಮರಾರ್ ಹಾಗು ಕೆಐಎಕಾರ್ಯನಿರ್ವಾಹಕ ಸಿಇಒ, ವಿಷನ್ ಬಾಕ್ಸ್ ನ ಸಿಇಒ ಮಿಗುಯೆಲ್ ಲಿಟ್ಮನ್ ನಡುವೆ ಗುರುವಾರ ಏರ್ಪಟ್ಟ ಒಪ್ಪಂದದಂತೆ ಎಲೆಕ್ಟ್ರಾನಿಕ್ ಐಡೆಂಟಿಟಿ ಸಿಸ್ಟಮ್ ಜಾರಿಗೆ ಬರಲಿದೆ. ಪೋರ್ಚುಗೀಸ್ ಪ್ರಧಾನಿ ಆಂಟೋನಿಯೋ ಕೋಸ್ಟಾ ಮತ್ತು ಪೋರ್ಚುಗಲ್ ನ ಭಾರತೀಯ ರಾಯಭಾರಿ ನಂದಿನಿ ಸಿಂಘಲಾ ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಉಪಸ್ಥಿತರಿದ್ದರು.

“ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿ;ಲ್ದಾಣವು ಕಾಗದ ರಹಿತ ವಿಮಾನ ಯಾನ ಸೇವೆ ಹೊಂದುವ ದೇಶದ ಮೊದಲ ನಿಲ್ದಾಣವಾಗಲಿದೆ” ಪ್ರಕಟಣೆಯಲ್ಲಿ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...