ಈ ಬಾರಿಯ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಾನ ಕಾಪಾಡಿದ್ದು ನಮ್ಮ ದೇಶದ ವನಿತೆಯರು.. ಭಾರತದ ಪಿವಿ ಸಿಂಧು ಹಾಗೂ ಸಾಕ್ಷಿ ಮಲ್ಲಿಕ್ ಈ ಬಾರಿ ಕೋಟ್ಯಾಂತರ ಭಾರತೀಯರಿಗೆ ರಿಯೋ ಸ್ಟಾರ್ ಪ್ಲೇಯರ್ ಆಗಿ ಗುರುತಿಸಿಕೊಂಡರು. ಇವರಿಬ್ಬರು ಒಂದೇ ದಿನದಲ್ಲಿ ಕೋಟ್ಯಾಧೀಶರಾಗಿದ್ದು ನಮಗೆಲ್ಲಾ ತಿಲಿದಿರೋ ವಿಷಯ. ಕೋಟಿಗಟ್ಟಲೇ ಹಣ ಹಾಗೂ ಐಶಾರಾಮಿ ಕಾರುಗಳು ಇನ್ನಿತ್ಯಾದಿ ಉಡುಗೊರೆಗಳು ಇವರಿಗೆ ದಕ್ಕಿದೆ. ಅವರು ಆ ಉಡುಗೊರೆಗಳಿಗೆ ಅರ್ಹರೂ ಕೂಡ..
ಆದರೆ ಕೀನ್ಯಾ ದೇಶದ ಓರ್ವ ಯುವತಿ ತಮ್ಮ ದೇಶಕ್ಕೆ ಚಿನ್ನವನ್ನು ತಂದುಕೊಟ್ಟು ಮತ್ತೆ ತವರಿಗೆ ಮರಳುವಾಗ ಆ ದೇಶ ಆಕೆಗಾಗಿ ನೀಡಿದ್ದ ಬಹುದೊಡ್ಡ ಉಡುಗೊರೆ ಅಲ್ಲಿನ ವಾಸ್ತವದ ಬಗ್ಗೆ ಕಣ್ಣಿಗೆ ಕಟ್ಟಿಕೊಡುತ್ತದೆ…!
ಕೀನ್ಯಾ ದೆಶದ ‘ಫೇತ್ ಕಿಪ್ಯೆ ಜೋನ್’ ರಿಯೋ ಒಲಿಂಪಿಕ್ಸ್ ನ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಳು.
ಆದ್ರೆ ಈ ವಿಶೇಷವಾದ ಸನ್ನಿವೇಶವನ್ನು ಇಡೀ ದೇಶ ಕಣ್ತುಂಬಿಸಿಕೊಂಡರೆ.. ಅವಳ ಹುಟ್ಟೂರಾದ ದಬೀಬಿತ್ ನಗರದ ಜನರು ಮಾತ್ರ ತನ್ನ ಮಗಳ ಸಾಧನೆಯನ್ನು ನೋಡಲು ಅಕ್ಷರಶಃ ವಿಫಲರಾಗಿದ್ದರು…! ಯಾಕಂದ್ರೆ ಆಕೆಯ ಊರಿನಲ್ಲಿ ಈವರೆಗೂ ವಿದ್ಯತ್ ಸಂಪರ್ಕವೇ ಇರಲಿಲ್ಲ…!
ಚಿನ್ನ ಪಡೆದು ತನ್ನ ದೇಶಕ್ಕೆ ಮರಳಿದಾಗ ಅವರ ತಂದೆ ಕೀನ್ಯಾದ ಅಧ್ಯಕ್ಷರಿಗೆ ಒಂದು ಮನವಿ ಮಾಡಿಕೊಂಡಿದ್ದರು.. ನಮ್ಮ ಗ್ರಾಮಕ್ಕೆ ಇನ್ನಾದರೂ ವಿದ್ಯುತ್ ಸಂಪರ್ಕ ತಂದು ಕೊಡಿ.. ಇನ್ನಾದರೂ ತನ್ನ ಮಗಳು ಸ್ಪರ್ಧಿಸುವ ಕ್ರೀಡೆಯನ್ನು ನೋಡುವ ಭಾಗ್ಯ ನಮಗೆ ಕಲ್ಪಿಸಿಕೊಡಿ ಎಂದು ಹೇಳಿಕೊಂಡರು. ಅವರ ಮನವಿಯನ್ನು ಕೂಡಲೇ ಪುರಸ್ಕರಿಸಿದ ಅಧ್ಯಕ್ಷರು ಆ ಗ್ರಾಮಕ್ಕೆ ಕೇವಲ 9 ದಿನಗಳಲ್ಲಿ ವಿದ್ಯುತ್ ತಂತಿ ಹಾಕಿಸಿ ಸಂಪರ್ಕ ಕೊಟ್ಟಿದ್ದಾರೆ.. ಬಳಿಕ ಒಲಂಪಿಕ್ ಚಾಂಪಿಯನ್ ಫೇತ್‍ಗೆ ಫ್ಲಾಟ್ ಸ್ಕ್ರೀನ್ ಟಿವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
POPULAR STORIES :
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.