” ಕಿಕ್ ” ಕೊಡಲು ಸಜ್ಜಾದ್ರು ಸ್ಟಾರ್ ಡೈರೆಕ್ಟರ್

Date:

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಸಾರಥಿ ಪ್ರಶಾಂತ್ ರಾಜ್ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ . ಕಾಲಿವುಡ್ ನ ಖ್ಯಾತ ಹಾಸ್ಯನಟ ಕಂ ನಾಯಕ ಸಂತಾನಂ ಜೊತೆಗೂಡಿ ಹೊಸ ಸಿನಿಮಾ ನಿರ್ದೇಶಿಸಿದ್ದಾರೆ . ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ . ಪ್ರತಿ ಸಿನಿಮಾದಲ್ಲೂ ಆಕರ್ಷಕ ಶೀರ್ಷಿಕೆ ಇಡುವ ಪ್ರಶಾಂತ್ ಈ ಬಾರಿ ಕೂಡ ತಮ್ಮ ಚೊಚ್ಚಲ ತಮಿಳು ಚಿತ್ರಕ್ಕೆ ಕಿಕ್ ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ.

ಗಣೇಶ್ ಚತುರ್ಥಿಗೆ ಸಿನಿಮಾದ ಟೈಟಲ್ ಜೊತೆಗೆ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದೆ. ವಿಭಿನ್ನವಾಗಿ ಮೂಡಿಬಂದಿರುವ ಪೋಸ್ಟರ್ ನಲ್ಲಿ ಸಂತಾನಂಗೆ ಎಂಟು ಕೈಗಳಿದ್ದು, ಒಂದೊಂದು ಕೈಯಲ್ಲಿ ಒಂದೊಂದು ವಸ್ತುಗಳನ್ನು ಹಿಡಿದುಕೊಂಡಿದ್ದಾರೆ.

ರೋಮ್ಯಾಂಟಿಕ್ ಕಂ ಕಾಮಿಡಿ ಕಥಾಹಂದರ ಹೊಂದಿರುವ ಕಿಕ್ ಸಿನಿಮಾದಲ್ಲಿ ಸಂತಾನಂಗೆ ಜೋಡಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ನಟಿಸಿದ್ದಾರೆ. ಉಳಿದಂತೆ ರಾಗಿಣಿ, ಸುಧು ಕೋಕಿಲಾ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ.

ಫಾರ್ಚ್ಯೂನ್ ಫಿಲ್ಮಂ ಪ್ರೊಡಕ್ಷನ್ ನಡಿ ನವೀನ್ ರಾಜ್ ಬಹುಕೋಟಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ . ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಿನಿಮಾಕ್ಕಿದೆ.

ಈ ಹಿಂದೆ ಪ್ರಶಾಂತ್ ರಾಜ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್ ಮೂಡಿ ಬಂದಿದ್ದ ಹಾಡುಗಳು ಮೋಡಿ ಮಾಡಿದ್ದವು. ಇದೀಗ ಅದೇ ನಿರೀಕ್ಷೆ ಸಕಲ ಚಿತ್ರರಸಿಕರಲ್ಲಿದೆ.

Share post:

Subscribe

spot_imgspot_img

Popular

More like this
Related

ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು: ದ್ವೇಷ ಭಾಷಣ...

ಊಟ ಮಾಡಿದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

ಊಟ ಮಾಡಿದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? ನಮ್ಮ ದೇಹಕ್ಕೆ ನೀರು...

ಬೆಂಗಳೂರು: ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಸೌಲಭ್ಯ: ಅಪಾರ್ಟ್‌ಮೆಂಟ್‌ಗಳಿಗೆ ಆದ್ಯತೆ

ಬೆಂಗಳೂರು: ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಸೌಲಭ್ಯ: ಅಪಾರ್ಟ್‌ಮೆಂಟ್‌ಗಳಿಗೆ ಆದ್ಯತೆ ಬೆಂಗಳೂರು ನಗರದ ಬಡಾವಣೆಗಳಲ್ಲಿನ...

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ವಿಷಯಗಳು ನೆನಪಿನಲ್ಲಿರಲಿ!

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ವಿಷಯಗಳು ನೆನಪಿನಲ್ಲಿರಲಿ! ಪ್ರಸ್ತುತ ಕರ್ನಾಟಕ ಸೇರಿದಂತೆ ಹಲವಾರು...