ಈ ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇದೆ. ಆದರೆ ರಾಜಮನೆತನಗಳಿಂದ ನಡೆಯುವ ದೌರ್ಜನ್ಯಕ್ಕೆ ಅಂತಹ ಯಾವುದೇ ಅಂತ್ಯ ಇಲ್ಲ ಎನ್ನಿಸುತ್ತದೆ. ಅದಕ್ಕೆ ಸಾಕ್ಷಿ ಥೈಲ್ಯಾಂಡ್ ನ ರಾಜ..! ಅಲ್ಲ ಬರೀ ತನ್ನ ನಾಯಿಯನ್ನು ಸಾಮಾನ್ಯ ವ್ಯಕ್ತಿಯೊಬ್ಬ ಅಪಮಾನಗೊಳಿಸಿದ ಎನ್ನುವ ಕಾರಣಕ್ಕೆ ಬಡಪಾಯಿ ವ್ಯಕ್ತಿಗೆ ಬರೋಬ್ಬರಿ 37 ವರ್ಷದ ಜೈಲುಶಿಕ್ಷೆ ವಿಧಿಸಿ ಥೈಲ್ಯಾಂಡ್ ರಾಜ ಆದೇಶ ಹೊರಡಿಸಿದ್ದಾನೆ..!
ಹೌದು, ಇದು ವಿಚಿತ್ರವಾದರೂ ಸತ್ಯ. ಥೈಲ್ಯಾಂಡ್ ರಾಜಮನೆತನದ ಸಾಕುನಾಯಿ `ಟ್ರಾಂಗ್ ಡೆಂಗ್’ಗೆ ಅಪಮಾನ ಮಾಡಿದ ಎನ್ನುವ ಕಾರಣಕ್ಕೆ ಥೈಲ್ಯಾಂಡ್ ರಾಜ ಭೂಮಿಭೋಲ್ ಅದುಲ್ಯೋಧೇಜ್ ರವರು ತಾರಾಕೋರನ್ ಎಂಬ ಸಾಮಾನ್ಯ ಪ್ರಜೆಗೆ ಬರೋಬ್ಬರಿ 37 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾನೆ. ಆದರೆ ಇದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ತಾರಾಕೋರನ್ ರಾಜಮನೆತನದ ನಾಯಿ ಟ್ರಾಂಗ್ಡೆಂಗ್ನ ಹೆಸರನ್ನು ಸಾರ್ವಜನಿಕವಾಗಿ ಕೂಗಿದ್ದೇ ಈತನ ಅಪರಾಧ ಎಂದು ಥೈಲ್ಯಾಂಡ್ ಮಿಲಿಟರಿ ನ್ಯಾಯಾಲಯ ಹೇಳಿ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ ಟ್ರಾಂಗ್ಡೆಂಗ್ ನಾಯಿಯ ಕುರಿತ ಆ್ಯನಿಮೆಟೆಡ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂಬ ಆರೋಪವನ್ನೂ ತಾರಾಕೋರನ್ ಮೇಲೆ ಹೊರಿಸಲಾಗಿದೆ.
ಅಷ್ಟೇ ಅಲ್ಲದೇ ಟ್ರಾಂಗ್ಡೆಂಗ್ ಕುರಿತು `ಕುನ್ ಟ್ರಾಂಗ್ ಡೆಂಗ್..ದಿ ಇನ್ಸಿಪೇರಶನ್’ ಎಂಬ ಪುಸ್ತಕ ಬರೆಯಲಾಗಿದ್ದು, ಈ ರಾಜಮನೆತನದ ನಾಯಿಯ ಕುರಿತು ಸಾರ್ವಜನಿಕವಾಗಿ ಮಾತನಾಡುವುದೂ ಥೈಲ್ಯಾಂಡ್ ನಲ್ಲಿ ಅಪರಾಧ ಎಂದು ಪರಿಗಣಿಸಲಾಗಿದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!
ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!
ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!
ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!
ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!