ದುಬೈ : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕೆಕೆಆರ್ : : ಶುಭಮನ್ ಗಿಲ್, ನಿತೀಶ್ ರಾಣಾ, ಸುನಿಲ್ ನರೈನ್, ಐಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಆಂಡ್ರೆ ರಸೆಲ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವರುಣ್ ಚಕ್ರವರ್ತಿ.
ಆರ್ ಆರ್ : : ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ವರುಣ್ ಆರೊನ್, ಕಾರ್ತಿಕ್ ತ್ಯಾಗಿ.
CSK VS KXIP : ಟಾಸ್ ಗೆದ್ದ CSK ಬೌಲಿಂಗ್ ಆಯ್ಕೆ
ಅಬುಧಾಬಿಯಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕನ್ನಡಿಗರಿಂದ ಕೂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿ ಆಗುತ್ತಿವೆ. ಟಾಸ್ ಗೆದ್ದ ಸಿ ಎಸ್ ಕೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸಿಎಸ್‌ಕೆ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್, ಋತುರಾಜ್ ಗೈಕ್ವಾಡ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ವಿಕೆ / ಸಿ), ಎನ್ ಜಗದೀಸನ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಜಿಡಿ, ಇಮ್ರಾನ್ ತಾಹಿರ್.
ಕೆ11ಪಿ ಪ್ಲೇಯಿಂಗ್ XI: ಕೆ.ಎಲ್. ರಾಹುಲ್ (ವಿಕೆ/ ಸಿ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಜೇಮ್ಸ್ ನೀಶಮ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ.
ಕಣ್ಣಿನ ಒತ್ತಡ ನಿವಾರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್..!
ಪಂಚೇಂದ್ರಿಯಗಳಲ್ಲಿ ಅತೀ ಸೂಕ್ಷ್ಮವಾದ ಇಂದ್ರಿಯ ಕಣ್ಣು. ದೇಹಕ್ಕೆ ಆಯಾಸವಾಗಿರುವುದು ಬೇಗ ಗೊತ್ತಾಗುತ್ತೆ. ಆದರೆ ದಿನಂಪ್ರತಿ , ಪ್ರತಿಕ್ಷಣ ಕಣ್ಣು ಬಳಲುತ್ತಿರುವುದು ತಕ್ಕಮಟ್ಟಿಗೆ ಗೊತ್ತೇ ಆಗಲ್ಲ…ಕಣ್ಣಿನ ಒತ್ತಡ ನಿವಾರಣೆ ಅತ್ಯಂತ ಅಗತ್ಯ.
ಈಗಂತೂ ನಾವು – ನೀವು ದಿನದ ಬಹುತೇಕ ಸಮಯ ಮೊಬೈಲ್, ಲ್ಯಾಪ್ ಟಾಪ್ , ಟಿವಿ ಅಂತನೇ ಕಾಲ ಕಳೆಯುತ್ತೇವೆ. ಹೀಗಾಗಿ ಕಣ್ಣು ಬಹಳಷ್ಟು ದಣಿಯುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
ಕಣ್ಣಿನ ಒತ್ತಡ ನಿವಾರಣೆಗೆ ಕಣ್ಣನ್ನು ದಿನದಲ್ಲಿ ಕನಿಷ್ಠ 7 – 10 ಬಾರಿಯಾದರೂ ಗಡಿಯಾರದಂತೆ ತಿರುಗಿಸುವುದು, ಐ ಡ್ರಾಪ್ ಬಳಕೆ ಸೇರಿದಂತೆ ಅನೇಕ ವಿಧಾನಗಳಿವೆ.
ಎಲ್ಲಕ್ಕಿಂತ ಮುಖ್ಯವಾಗಿ ನಾವು ಕಣ್ಣನ್ನು ತೊಳೆಯಬೇಕು. ಹೇಗೆ ಕಣ್ಣನ್ನು ತೊಳೆಯಬೇಕು? ಈ ವಿಡಿಯೋ ನೋಡಿ
Vanhi crezy world ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಸಾತ್ವಿಕ್ ಎಂಬ ಹುಡುಗ ಬೇರೆ ಬೇರೆ ವಿಷಯಗಳ ಬಗ್ಗೆ ಇಂಥಾ ಸಿಂಪಲ್ ಟಿಪ್ಸ್ ಕೊಡುತ್ತಿರುತ್ತಾನೆ. ಚಾನಲ್ Subscribe ಮಾಡಿ. ಉತ್ಸಾಹಿ ಬಾಲಕನನ್ನು ಪ್ರೋತ್ಸಾಹಿಸಿ.
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರ..? ಮಲಗಿದ ಕೂಡಲೇ ಸರಿಯಾಗಿ ನಿದ್ರೆ ಬರುತ್ತಿಲ್ಲವೇ. ಇದನ್ನು ದಯವಿಟ್ಟು ನಿರ್ಲಕ್ಷಿಸಬೇಡಿ. ನಿದ್ರೆ ಸಮಸ್ಯೆಯು ಮಾನಸಿಕ ಒತ್ತಡ, ಖಿನ್ನತೆಗೆ ಕಾರಣವಾಗುತ್ತಿದೆ. ನೆನಪಿನ ಶಕ್ತಿ ಕಡಿಮೆ ಮಾಡುತ್ತೆ.ಕನಿಷ್ಟ 6-7 ಗಂಟೆ ನಿದ್ರೆ ಬೇಕು. ನಿಮಗೆ ನಿದ್ರೆ ಬರುತ್ತಿಲ್ಲ ಅಂತಾದ್ರೆ ಹೀಗೆ ಮಾಡಿ. ನಿದ್ರೆಯನ್ನು ಪ್ರೀತಿಸಿ…!
*ನಿದ್ರೆಯೂ ಸಹ ದಿನ ನಿತ್ಯದ ಚಟುವಟಿಕೆಯೇ. ಹಾಗಾಗಿ ನಿದ್ರಾ ಮಾಡೋ ವಿಷಯದಲ್ಲೂ ಶಿಸ್ತು ಮುಖ್ಯ. ಪ್ರತಿದಿನ ಒಂದೇ ಟೈಮ್ ಗೆ ಹಾಸಿಗೆ ಕಡೆಗೆ ಹೋಗಿ.
*ಕಾಫಿ, ಟೀ , ಲಘುಪಾನೀಯದಂತಹ ಪಾನೀಯಗಳ ಸೇವೆಯನ್ನು ಆದಷ್ಟು ಕಡಿಮೆ ಮಾಡಿ. ಮಲಗುವ ವೇಳೆ ಲಘು ಆಹಾರ, ಖಾರ ಪದಾರ್ಥ ಬೇಡ.
*ಕತ್ತಲೆ ಕೋಣೆಯಲ್ಲಿ ಮಲಗಿ ನಿದ್ರೆಗೆ ಜಾರಿ. ಸಣ್ಣ ಬೆಳಕು ನಿಮ್ಮನ್ನು ಪದೇ ಪದೇ ಎಚ್ಚರ ಮಾಡಬಹುದು.
*ಮಲಗುವ ಮುನ್ನ ಸಾಧ್ಯವಾದ್ರೆ ಬಿಸಿ ನೀರಿನ ಸ್ನಾನ ಮಾಡಿ. ಅದು ದೇಹದ ಉಷ್ಣತೆ ಹೆಚ್ಚಿಸಿ, ಕೂಡಲೇ ತಂಪು ಮಾಡುತ್ತೆ. ಆಗ ನೀವು ನಿರಾಳರಾಗಬಹುದು. ಆಗ ಒಳ್ಳೆಯ ನಿದ್ರೆ ಬರುತ್ತೆ.
*ನಿದ್ರೆಯನ್ನು ಪ್ರೇರೇಪಿಸೋ ಗುಣ ಹಾಲಿನಲ್ಲಿದ್ದು, ಮಲಗುವ ಮುನ್ನ ಬಿಸಿ ಹಾಲು ಕುಡಿಯಿರಿ.
*ಸಾಕುಪ್ರಾಣಿಗಳನ್ನು ಹಾಸಿಗೆಯಿಂದ ದೂರವಿಡಿ.
*ಅಲರಾಂ ಅಭ್ಯಾಸಬೇಡ.
* ಮೊಬೈಲ್ ಸ್ವಿಚ್ ಆಫ್ ಮಾಡಿರಿ.
*ಧೂಮಪಾನ ಮಾಡ್ಬೇಡಿ.
22 ವರ್ಷದ ತಾರಿಕಾ ಬಾನು. ಇವರೊಬ್ಬ ಮಂಗಳಮುಖಿ. ತಮಿಳುನಾಡಿನ ಈಕೆ 12ನೇ ತರಗತಿ ಪಾಸು ಮಾಡಿದ ಭಾರತ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ತಾರಿಕಾ ಪಾತ್ರಳಾಗಿರುವವರು.
ತಾರಿಕಾ ಬಾನು ಅವರು ಆ ಕುಟುಂಬದ ನಾಲ್ಕನೇ ಮಗುವಾಗಿ ಜನಿಸಿದ್ರು. ತೂತುಕುಡಿ ಜಿಲ್ಲೆಯಲ್ಲಿ ಅವಳ ಮನೆಯಿದೆ. 18 ವರ್ಷವಾಗುವವರೆಗೂ ತಾರಿಕಾ ಮನೆಯಲ್ಲೇ ಇದ್ಲು. ಆದ್ರೆ ತನ್ನದಲ್ಲದ ತಪ್ಪಿಗೆ ಮನೆಯವರಿಂದ ತಿರಸ್ಕರಿಸಲ್ಪಟ್ಟ ತಾರಿಕಾ ಬದುಕು ಅರಸಿ ಅಲ್ಲಿಂದ ಹೊರನಡೆದ್ರು. ಮನೆ ಬಿಟ್ಟು ಓಡಿ ಬಂದ ತಾರಿಕಾ ಚೆನ್ನೈ ಸೇರಿಕೊಂಡ್ರು.
ಇನ್ನು ಮನೆ ಬಿಟ್ಟು ಚೆನ್ನೈಗೆ ಓಡಿ ಬಂದಾಗ ತಾರಿಕಾ ಬದುಕು ಈ ರೀತಿಯ ತಿರುವು ಪಡೆಯಬಹುದೆಂದು ಊಹಿಸಿಕೊಂಡಿರಲಿಲ್ಲವಂತೆ. ತಮ್ಮ ತಾಯಿಯ ಆಶೀರ್ವಾದದಿಂದ್ಲೇ ಇದೆಲ್ಲವೂ ಸಾಧ್ಯವಾಗಿದೆ ಎನ್ನುತ್ತಾರೆ ತಾರಿಕಾ. ಆದರೆ, ತಾಯಿ ಅಂದಾಕ್ಷಣ ತಾರಿಕಾ ತನ್ನ ಹೆತ್ತಮ್ಮನನ್ನು ನೆನೆದಿದ್ದಾಳೆ ಎಂದುಕೊಳ್ಳಬೇಡಿ. ಆಕೆ ಕೃತಜ್ಞತೆ ಅರ್ಪಿಸಿರುವುದು ಮಂಗಳಮುಖಿಯರ ಕಾರ್ಯಕರ್ತೆ ಗ್ರೇಸ್ ಬಾನು ಅವರಿಗೆ.
29 ವರ್ಷದ ಗ್ರೇಸ್ ಬಾನು ಕೂಡ ಒಬ್ಬ ಮಂಗಳಮುಖಿ. ಆಕೆ ಬದುಕಿನಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ತನ್ನಂತೆ ಇತರ ಮಂಗಳಮುಖಿಯರು ಕೂಡ ಜೀವನದಲ್ಲಿ ನೋವು ಅನುಭವಿಸಬಾರದು ಅನ್ನೋದು ಅವಳ ಉದ್ದೇಶ.ತಾರಿಕಾ ಸೇರಿದಂತೆ ಇತರ ಕೆಲವು ಮಂಗಳಮುಖಿಯರನ್ನು ಗ್ರೇಸ್ ಬಾನು ದತ್ತು ಪಡೆದಿದ್ದಾರೆ. ಅವರಿಗೆ ಆಸರೆ ನೀಡಿ, ಆರೈಕೆ ಮಾಡುತ್ತಿದ್ದಾರೆ.
ಮಂಗಳಮುಖಿಯರಿಗೆ ಸಾಮಾಜಿಕ ಭದ್ರತೆಯನ್ನೂ ಕೊಡಿಸುವ ಪ್ರಯತ್ನ ಗ್ರೇಸ್ ಬಾನು ಅವರದ್ದು. ಅಂಬತ್ತೂರ್ ನಲ್ಲಿರುವ ಪೆರುಂಥ ಲೈವರ್ ಕಾಮರಾಜರ್ ಸರ್ಕಾರಿ ಹೆಣ್ಣುಮಕ್ಕಳ ಹೈಸ್ಕೂಲ್ ನಲ್ಲಿ ತಾರಿಕಾ ಶಿಕ್ಷಣ ಪಡೆದಿದ್ದಾರೆ.
12ನೇ ತರಗತಿಯಲ್ಲಿ ಉತ್ತೀರ್ಣಳಾಗಿರುವ ತಾರಿಕಾ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ. ತಾರಿಕಾ ಮುಂದೊಂದು ದಿನ ಡಾಕ್ಟರ್ ಆಗ್ತಾರೆ ಅನ್ನೋ ವಿಶ್ವಾಸ ಗ್ರೇಸ್ ಬಾನುಗಿದೆ. ತಮಿಳುನಾಡು ಸರ್ಕಾರ ಕೂಡ ಇಂತಹ ಪ್ರತಿಭಾವಂತ ಮಂಗಳಮುಖಿಯರಿಗೆ ಪ್ರೋತ್ಸಾಹ ನೀಡಿದೆ.
ಒಟ್ಟಿನಲ್ಲಿ, ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ ತಾರಿಕಾ ಅವರು, ಈಗ ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ. ಇವರು ಇತರೆ ಮಂಗಳಮುಖಿಯರಿಗೂ ಸ್ಫೂರ್ತಿಯಾಗಿದ್ದಾರೆ.
ಕೊರೋನಾ 2 ನೇ ಅಲೆ – ಈ ದೇಶಗಳಲ್ಲಿ ಮತ್ತೆ ಲಾಕ್ಡೌನ್..!
ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಸ್ ಎರಡನೇ ಅಲೆ ಆರಂಭವಾಗಿದೆ. ಮತ್ತೆ ಕೆಲವು ದೇಶಗಳಲ್ಲಿ ಲಾಕ್ಡೌನ್ ಮತ್ತು ಜನತಾ ಕರ್ಫ್ಯೂ ಮೊರೆ ಹೋಗಲಾಗುತ್ತಿದೆ.
ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್ಡೌನ್ ಘೋಷಣೆಯಾಗಿದೆ. 4 ವಾರಗಳ ಕಾಲ ಲಾಕ್ಡೌನ್ ಆಗಲಿದೆ. ಫ್ರಾನ್ಸಿನಲ್ಲಿ 12.35 ಲಕ್ಷ ಮಂದಿಗೆ ಸೋಂಕು ತಗುಲಿದ್ದು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಕೊರೋನಾದಿಂದ ಇದುವರೆಗೆ 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
ಜರ್ಮನಿಯಲ್ಲಿ ಕೂಡ 2ನೇ ಹಂತದ ಲಾಕ್ಡೌನ್ ನವೆಂಬರ್ 2 ರಿಂದ 30ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. 4.81 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ವಿಶ್ವದಲ್ಲಿ 16ನೇ ಸ್ಥಾನ ಪಡೆದಿವೆ. ಒಟ್ಟು 10,359 ಮಂದಿ ಮೃತಪಟ್ಟಿದ್ದಾರೆ.
ಇಸ್ರೇಲ್ನಲ್ಲಿ 3 ವಾರಗಳ ಕಾಲ ಎರಡನೇ ಹಂತದ ಲಾಕ್ಡೌನ್ ಇರಲಿದೆ. 3.12 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 2,494 ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲಿ 2 ನೇ ಸ್ಥಾನದಲ್ಲಿದೆ.
ಸ್ಪೇನ್ನಲ್ಲಿ ಒಟ್ಟು 11.91 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 6ನೇ ಸ್ಥಾನದಲ್ಲಿದೆ. ಕೊರೋನಾಗೆ 35, 785 ಮಂದಿ ಬಲಿಯಾಗಿದ್ದಾರೆ.
ನೆದರ್ಲ್ಯಾಂಡ್ನಲ್ಲಿ ಜನತಾ ಕರ್ಫ್ಯೂ ಹೇರಲಾಗಿದ್ದು, 3.19 ಲಕ್ಷ ಮಂದಿಗೆ ಸೋಂಕು ತಗುಲಿದೆ. ವಿಶ್ವದಲ್ಲಿದಲ್ಲಿ ನೆದರ್ ಲ್ಯಾಂಡ್ನದ್ದು 26ನೇ ಸ್ಥಾನ. 7,202 ಮಂದಿ ಬಲಿಯಾಗಿದ್ದಾರೆ.
ಇಟಲಿಯಲ್ಲಿ 5.89 ಲಕ್ಷ ಮಂದಿಗೆ ಸೋಂಕು ತಗುಲಿದೆ. 13ನೇ ಸ್ಥಾನದಲ್ಲಿರುವ ಇಟಲಿಯಲ್ಲಿ ಇದುವರೆಗೆ 37,905 ಮಂದಿ ಮೃತಪಟ್ಟಿದ್ದಾರೆ. ಸದ್ಯ ನೈಟ್ ಕ್ಲಬ್ಗಳನ್ನು ಮುಚ್ಚಲಾಗಿದೆ.
ಅಮೆರಿಕಾದಲ್ಲಿ ಲಾಕ್ಡೌನ್ ಮಾಡಿಲ್ಲ. ಆದರೆ, ತೆರೆದಿದ್ದ ಶಾಲಾ – ಕಾಲೇಜುಗಳನ್ನು ಮತ್ತೆ ಬಂದ್ ಮಾಡಲಾಗಿದೆ. 9.21 ಲಕ್ಷ ಮಂದಿಗೆ ಸೋಂಕು ತಗುಲಿದೆ. ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 2.33 ಮಂದಿ ಸಾವನ್ನಪ್ಪಿದ್ದಾರೆ.
ಯೋಗದಿಂದ ಅಂಗವಿಕಲತೆಗೆ ಸೆಡ್ಡು ಹೊಡೆದ ಸಾಧಕ..!
ಅಂಗವಿಕಲ ಎಂಬುದು ಮನುಷ್ಯನನ್ನು ಎಷ್ಟೊಂದು ಕಾಡುತ್ತದೆ ಎಂದರೆ ಆತನ ಜೀವನದಲ್ಲಿ ಯಾವುದೇ ಸಾಧನೆ ಮಾಡಲಾಗುವುದಿಲ್ಲ ಎಂಬ ಭಾವನೆ ಮೂಡಿಸಿ ಮನೆಯ ಮೂಲೆಯಲ್ಲಿ ಕೂರುವಂತೆ ಮಾಡುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ. ಆತನಿಗೆ ಕೇವಲ 21 ವರ್ಷ ವಯಸ್ಸು..! ಅಂಗವಿಕಲತೆಯೂ ಇದೆ. ಆದರೆ ಅದನ್ನು ಮೆಟ್ಟಿ ನಿಂತು ಮಹಾನ್ ಸಾಧನೆ ಮಾಡಿದ್ದಾರೆ. ಅಂಗವಿಕಲತೆಗೆ ಸವಾಲು ಹಾಕಿ ಗೆಲುವು ಸಾಧಿಸಿದ್ದಾರೆ.
ಯೆಸ್.. ದೆಹಲಿಯ ನಿವಾಸಿ 21 ವರ್ಷದ ತೇಜಸ್ವಿ ಶರ್ಮಾ ವ್ಯಕ್ತಿತ್ವ ಎಂಥವರನ್ನೂ ಬೆರಗುಗೊಳಿಸುತ್ತದೆ. ಏಕೆಂದರೆ ತೇಜಸ್ವಿ ಶರ್ಮಾ, ಪುರಾತನ ಯೋಗದಲ್ಲಿ ಪರಿಣಿತಿ ಹೊಂದಿದ್ದಾರೆ. 9 ತಿಂಗಳಿರುವಾಗಲೇ ಪೋಲಿಯೋದಿಂದಾಗಿ ಎರಡೂ ಕಾಲುಗಳು ಶಕ್ತಿ ಕಳೆದುಕೊಂಡಿದ್ದರು. ಆದರೆ ಅವರ ಪೋಷಕರು ಮಾತ್ರ ಧೈರ್ಯಗೆಡಲಿಲ್ಲ. ಸೋಲನ್ನು ಸ್ವೀಕರಿಸಲಿಲ್ಲ. ಒಂದು ವರ್ಷ ವಯಸ್ಸಿನಲ್ಲೇ ಯೋಗ ಕಲಿಸಲು ಆರಂಭಿಸಿದರು. ಆದ್ದರಿಂದ ಶೇಕಡಾ 69ರಷ್ಟು ಅಂಗವೈಕಲ್ಯವಿದ್ದರೂ, ಯೋಗ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ.
2011ರಲ್ಲಿ ದೆಹಲಿಯ ತಲಕಟೋರಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 2012 ರಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸೆಪ್ಟೆಂಬರ್ 2014ರಲ್ಲಿ ಚೀನಾದ ಶಾಂಘೈನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಂತಿಮ 6 ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದ ಅವರು, ತಮ್ಮ ಸಾಮಥ್ರ್ಯ ಪ್ರದರ್ಶಿಸಿ ಬೆಳ್ಳಿ ಪದಕ ಗಿಟ್ಟಿಸಿಕೊಂಡರು.
`ಮೋಸ್ಟ್ ಪ್ಲೆಕ್ಸಿಬಲ್ ಹ್ಯಾಡಿಕ್ಯಾಪ್ಟ್ ಯೋಗಾ ಚಾಂಪಿಯನ್ -2015′ ಎಂಬ ವರ್ಲ್ಡ್ ರೇಕಾರ್ಡ್ ನಲ್ಲಿ ತೇಜಸ್ವಿ ಹೆಸರು ಸೇರ್ಪಡೆಯಾಗಿದೆ. 2011ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2012ರಲ್ಲಿ ಹಾಂಕಾಂಗ್ ನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 2014ರಲ್ಲಿ ಚೀನಾದಲ್ಲಿ ಆಯೋಜಿಸಿದ್ದ ನಾಲ್ಕನೇ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ತೇಜಸ್ವಿಯತ್ತ ಸರ್ಕಾರ ಗಮನ ಹರಿಸಬೇಕಿದೆ. ಅವರಿಗೆ ಪ್ರೋತ್ಸಾಹ ನೀಡಿ, ಅವರ ಸಾಧನೆಗೆ ಸಹಾಯ ಮಾಡಬೇಕು. ಇಲ್ಲದೇ ಹೋದಲ್ಲಿ ತೇಜಸ್ವಿಯವರು ಹತ್ತರಲ್ಲೊಬ್ಬರಾದರೂ ಅಚ್ಚರಿ ಇಲ್ಲ.
CSK VS KKR : ಟಾಸ್ ಗೆದ್ದ CSK ಬೌಲಿಂಗ್ ಆಯ್ಕೆ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
CSK : : ಋತುರಾಜ್ ಗಾಯಕ್ವಾಡ್, ಶೇನ್ ವಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್ ಧೋನಿ (ನಾಯಕ / ವಿಕೆಟ್‌ಕೀಪರ್), ಎನ್ ಜಗದೀಶನ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಕರಣ್ ಶರ್ಮಾ, ದೀಪಕ್ ಚಹರ್, ಲುಂಗಿ ಎನ್ಗಿಡಿ.
KKR : : ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಐಯಾನ್ ಮಾರ್ಗನ್ (ನಾಯಕ), ರಿಂಕು ಸಿಂಗ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯೂಸನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ.
ಹೀಗಿದ್ದರೆ ನಿಮ್ಮ ಲವ್ ಲೈಫ್ ಬಿಂದಾಸ್…!
ಪ್ರೀತಿ ಇದ್ದಲ್ಲಿ ಜಗಳ, ಹುಸಿ ಕೋಪ ಎಲ್ಲವೂ ಸರ್ವೇಸಾಮಾನ್ಯ. ನಿಮ್ಮ ಲವ್ ಲೈಫ್ ಬಿಂದಾಸ್ ಆಗಿರಬೇಕೆಂದರೆ ಇದನ್ನು ಅನುಸರಿಸಿ.
ಹೆಣ್ಣು ಮಕ್ಕಳ ಮೂಡ್ ಬದಲಾಗುತ್ತಿರುತ್ತವೆ. ಆಗ ಸಾಮಾನ್ಯವಾಗಿ ಜೋಡಿಗಳಲ್ಲಿ ಮನಸ್ತಾಪ ಉಂಟಾಗುತ್ತದೆ. ಹುಡುಗಿ/ ಪತ್ನಿ ನಿಮ್ಮನ್ನು ಒಮ್ಮೆ ಡಾಮಿನೇಟ್ ಮಾಡಿದರೆ, ಇನ್ನೊಮ್ಮೆ ನೀವು ಅವರನ್ನು ಡಾಮಿನೇಟ್ ಮಾಡಿದಂತೆ ಇರುತ್ತದೆ. ಇದು ಜಗಳಕ್ಕೆ ತಿರುಗುವುದು ಬೇಡ. ಪ್ರೀತಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಇದ್ದೇ ಇರುತ್ತದೆ.
ಯಾರೇ ಆಗಲಿ ಪ್ರೀತಿ ಬಯಸುವುದು ಪಾಸಿಟಿವ್ ಎನರ್ಜಿಗಾಗಿ. ಪ್ರೀತಿಸುವವರಿಂದ ಪಾಸಿಟಿವ್ ಎನರ್ಜಿ ಬರುತ್ತದೆ. ನೀವು ಪ್ರೀತಿಸುವವರಿಂದ ಬರೀ ನೆಗಿಟೀವ್ ಎನರ್ಜಿ ಬರುತ್ತಿದ್ದರೆ ಅವರಿಂದ ದೂರವಾಗುವುದೇ ಒಳ್ಳೆಯದು. ಯಾಕಂದರೆ ಅವರೊಡನೆ ಇದ್ದರೆ ನಿಮ್ಮ ಲವ್ ಲೈಫ್ ಹೇಗೆ ತಾನೆ ಬಿಂದಾಸ್ ಆಗಿರುತ್ತದೆ?
ಕಳೆದು ಹೋದ ದಿನಗಳು ಕಳೆದು ಬಿಟ್ಟಿವೆ. ಆ ದಿನಗಳು ಬರಲ್ಲ. ತಪ್ಪಿನಿಂದ ಕಲಿತ ಪಾಠ ಎಂದು ಹೊಸ ದಾರಿಯಲ್ಲಿ ಮುಂದೆ ಮುಂದೆ ಸಾಗಿ. ನಿಮ್ಮ ಬಾಳಸಂಗಾತಿಗೆ ನೀವು ಹಿಂದೆ ಮಾಡಿರುವ ತಪ್ಪುಗಳು ಗೊತ್ತಿರಲಿ. ಆಗ ನಿಮ್ಮಪ್ರೀತಿ ಜೀವನ ಸಖತ್ ಆಗಿರುತ್ತದೆ.
100ರ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?
ಮಸ್ತನಮ್ಮ . ಮೂಲತಃ ಆಂಧ್ರ ಪ್ರದೇಶದವರು. ಇವರು ದೇಶಿಯ ಅಡುಗೆ ಶೈಲಿಯಲ್ಲಿ ಅಡುಗೆಗಳನ್ನು ಮಾಡಿ ಯುಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕುತ್ತ ಬಹಳ ಖ್ಯಾತರಾದವರು. ಇವರು ಮಾಡುವ ಸ್ವಾದಿಷ್ಟಕರ ಆಹಾರ ತಯಾರಿಸುವ ವಿಧಾನ ವಿಶಿಷ್ಟವಾಗಿದ್ದು, ಇದನ್ನು ಭಾರತೀಯರು ಅಲ್ಲದೆ, ದೇಶ-ವಿದೇಶದವರು ಇವರ ವಿಡಿಯೋ ಹಾಗೂ ಇವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
106 ವರ್ಷಗಳ ಗಟ್ಟಿಗಿತ್ತಿ ಮಸ್ತನಮ್ಮ ಅವರು ತಯಾರಿಸಿದ ದೇಶಿ ಸಸ್ಯಹಾರ ಹಾಗೂ ಮಾಂಸಹಾರ ರೆಸಿಪಿಗಳನ್ನು ಯುಟ್ಯೂಬ್ ಚಾನಲ್ Country Food ಹೆಸರಿನಲ್ಲಿ ಅಪ್ಲೋಡ್ ಮಾಡಲಾಗಿತ್ತು. ವಿಶೇಷತೆ ಏನೆಂದರೆ ಅತಿ ಹಿರಿಯ ವಯಸ್ಸಿನವರು ಇಂತಹ ಕೆಲಸಕ್ಕೆ ಮುಂದಾಗಿರೋದು ನಿಜಕ್ಕೂ ಬೇರೆ ವಯಸ್ಸಿನವರಿಗೂ ಇವರು ಮಾದರಿ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ಮಸ್ತನಮ್ಮಳ ಯುಟ್ಯೂಬ್ ಚಾನಲ್ ಗೆ 14 ಲಕ್ಷದ 10 ಸಾವಿರ ಚಂದಾರಾರಿದ್ದು, ಸಾಂಪ್ರದಾಯಿಕ ಅಡುಗೆ ಸಿದ್ದಪಡಿಸುವ ತನ್ನ ನೈಪುಣ್ಯತೆಯಿಂದ ಈ ಅಜ್ಜಿ ಎಲ್ಲರ ಮನಗೆದ್ದಿದ್ದಾರೆ. ಸ್ವಾದಿಷ್ಟ ಎಗ್ ದೋಸೆಯಿಂದ ಹಿಡಿದು ಫಿಶ್ ಪ್ರೈ, ಬಾಂಬೂ ಚಿಕನ್ ಬಿರಿಯಾನಿ ಮಾಡುವ ಬಗೆಯನ್ನು ಅವರ ವಿಡಿಯೋಗಳು ಕಲಿಸುತ್ತವೆ. ಅಜ್ಜಿಯ ಯುಟ್ಯೂಬ್ ಚಾನೆಲ್ ನ್ನು ಅವರ ಮರಿ ಮೊಮ್ಮಗ ಕೆ. ಲಕ್ಷ್ಮಣ್ ಅವರು ನಡೆಸುತ್ತಿದ್ದಾರೆ.
ಮೊಮ್ಮಗ ಲಕ್ಷ್ಮಣ್ ಅಜ್ಜಿಯ ಕೈ ರುಚಿಯ ನೋಡಿದ್ದರಿಂದ ಅಜ್ಜಿ ಮಾಡಿದ ಸ್ವಾದಿಷ್ಟಕರವಾಗಿ ಮಾಡುವ ಅಡುಗೆಯ ಪರಿಯನ್ನ ಯುಟ್ಯೂಬ್ ಚಾನಲ್ ನಲ್ಲಿ ಹಾಕಿದರು. ಮೊದಲ ವಿಡಿಯೋ ಎಲ್ಲೆಡೆ ವೈರಲ್ ಆಯಿತು. ಆಗ ಸ್ವಂತ ಯುಟ್ಯೂಬ್ ಚಾನಲ್ ನಡೆಸಲು ತೀರ್ಮಾನಿಸಿ ಅಜ್ಜಿಯ ಸಹಾಯದಿಂದ ತಾಜಾ ವಸ್ತುಗಳನ್ನು ಉಪಯೋಗಿಸಿ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸುವ ವೀಡಿಯೋ ಸಿದ್ಧಪಡಿಸಲು ನಿರ್ಧರಿಸಿದವು. ಆಗ ಅಜ್ಜಿಗೆ ಸಂತೋಷವಾಯಿತು ಎನ್ನುತ್ತಾರೆ ಅವರ ಮರಿಮೊಮ್ಮಗ ಲಕ್ಷ್ಮಣ್.
107 ವರ್ಷದ ಮಸ್ತನಮ್ಮನವರು ಸೀಪುಡ್ ಹಾಗೂ ದೋಸೆ ತಯಾರಿಸುವುದರಲ್ಲಿ ಸಿದ್ಧ ಹಸ್ತರಂತೆ. ಗ್ರಾಮೀಣ ಸೊಗಡಿನ ರುಚಿಕಟ್ಟಾದ ಅಡುಗೆ ಮಾಡುವ ಈ ಅಜ್ಜಿಯ ವಿಶೇಷ ಎಂದರೆ 21ನೇ ಶತಮಾನದಲ್ಲಿದ್ದರೂ ಅವರು ಗ್ಯಾಸ್ ನಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಕೃಷಿ ಜಮೀನಿನ ಹತ್ತಿರ ತೆರೆದ ಬಯಲಿನಲ್ಲಿ ರುಚಿಕಟ್ಟಾದ ಸಸ್ಯಹಾರಿ ಅದರಲ್ಲೂ ವಿಶೇಷವಾಗಿ ಮಾಂಸಹಾರಿ ಅಡುಗೆ ಮಾಡುತ್ತಿದ್ದ ಇವರ ಶೈಲಿಗೆ ಹಲವರ ಬಾಯಲ್ಲಿ ನೀರೂರಲು ಕಾರಣವಾಗಿತ್ತು.
ಕುತೂಹಲ ಎಂದರೆ ಮಸ್ತನಮ್ಮನವರ ಬದುಕಿನ ಬಗ್ಗೆ ಹೇಳಬೇಕೆಂದರೆ, ಮಸ್ತನಮ್ಮನವರ ಜೀವನದಲ್ಲಿ ಸಂಕಷ್ಟವನ್ನು ನೋಡಿ ಬೆಳೆದವರು. ಇನ್ನು 22 ವರ್ಷಕ್ಕೆ ಗಂಡನ್ನು ಕಳೆದುಕೊಂಡರಲ್ಲದೆ, ಕೊನೆಗೆ ಹುಟ್ಟಿದ ಐದು ಮಕ್ಕಳಲ್ಲಿ ಒಬ್ಬರು ಬದುಕಿಕೊಂಡರು. ಕೃಷಿ ಜಮೀನನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದ ಈ ಅಜ್ಜಿಯ ಕೈ ರುಚಿ ಅವರ ಬದುಕನ್ನೇ ಬದಲಾಯಿಸಿತು. ವಿಶಿಷ್ಟ ರೀತಿಯ ಅಡುಗೆ ಮಾಡುತ್ತಿದ್ದ ಅವರನ್ನು ಗುಂಟೂರಿನ ರೆಸ್ಟೊರೆಂಟ್ ಮಾಲೀಕರ ಸೇರಿದಂತೆ ಅನೇಕರು ಬಂದುಕೈ ರುಚಿ ಸವಿದು ಖುಷಿಪಟ್ಟಿದ್ದು ಉಂಟು.
107 ವರ್ಷದ ಮಸ್ತನಮ್ಮನವರು ತಮ್ಮ ಕೈ ರುಚಿ ಮೂಲಕ ಯು ಟ್ಯೂಬ್ ಸ್ಟಾರ್ ಮಾತ್ರವಲ್ಲದೇ, ಭಾರತದ ಪಾರಂಪರಿಕ ಪದ್ದತಿಯನ್ನು ವಿಶ್ವಕ್ಕೆ ಪರಿಚಯಿಸಿದ ಈ ಮಣ್ಣಿನ ಹೆಮ್ಮಯ ನಾರಿ ಎಂದೇ ಹೇಳಬಹುದು. ಇವರು ಡಿಸೆಂಬರ್ 3, 2018ರಲ್ಲಿ ತೀರಿಕೊಂಡರು.
ತಮ್ಮಿಂದ ಇನ್ನೇನು ಸಾಧ್ಯವಿಲ್ಲ ಎಂದು ಜೀವನದಲ್ಲಿ ಹತಾಶರಾಗಿರುವ ಪ್ರತಿಯೊಬ್ಬರಿಗೂ ತಾವು ಸಾಧಿಸಬಲ್ಲೆವು ಎಂದು ವಿಶ್ವಾಸ ತುಂಬುವ ಸ್ಫೂರ್ತಿ ಇವರಿಂದ ಸಿಕ್ಕೇ ಸಿಗುತ್ತದೆ.