KKR ವಿರುದ್ಧ RCB ಗೆ ಭರ್ಜರಿ ಗೆಲುವು
ಶಾರ್ಜಾ : ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಇದು ಆರ್ ಸಿಬಿ ಸಂಘಟಿತ ಹೋರಾಟಕ್ಕೆ ಸಂದ ಅರ್ಹ ಜಯ ಇದಾಗಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿ ಕೇವಲ 2 ವಿಕೆಟ್ ಗೆ 194 ರನ್ ಗಳಿಸಿತು.
ಕನ್ನಡಿಗ ದೇವದತ್ ಪಡ್ಡಿಕಲ್ ( 32) ಆ್ಯರೋನ್ ಫಿಂಚ್ ( 47) ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಔಟಾದ ಬಳಿಕ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ 33 ಹಾಗೂ ಎಬಿಡಿವಿಲಿಯರ್ಸ್ ಅಜೇಯ 73 ರನ್ ಸಿಡಿಸಿ 194 ಬೃಹತ್ ಮೊತ್ತಕ್ಕೆ ಕಾರಣರಾದರು.
ಗುರಿ ಬೆನ್ನತ್ತಿದ ಕೆಕೆಆರ್ ಆರ್ ಸಿಬಿ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಕೆಕೆಆರ್ ಪರ ಶುಭ್ ಮನ್ ಗಿಲ್ ( 34) ಮಾತ್ರ ತಕ್ಕಮಟ್ಟಿನ ಹೋರಾಟ ತೋರಿದರು. ಅಂತಿಮವಾಗಿ ಕೆಕೆ ಆರ್ ತನ್ನ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 112 ರನ್ ಮಾಡಿತು. ಆರ್ ಸಿ ಬಿ 82 ರನ್ ಗಳಿಂದ ಗೆದ್ದು ಬೀಗಿತು.
ಒತ್ತಡದಲ್ಲಿಯೂ ಕ್ರಿಯೇಟಿವ್ ಆಗಿ ಕೆಲಸ ಮಾಡೋದು ಹೇಗೆ?
ಆಫೀಸ್ನಲ್ಲಿ ಯಾವುದೇ ಕೆಲಸ ಮಾಡಲು ಮನಸ್ಸಿಲ್ಲ. ಕೆಲಸದ ಮೇಲೆ ಫೋಕಸ್ ಮಾಡಲು ಸಾಧ್ಯವಾಗ್ತಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಪ್ರತಿ ಸಲ ಆಯಾಸ, ಸುಸ್ತು. ತಲೆನೋವು, ಕಾನ್ಸ್ಟ್ರೆಟ್ ಸಮಸ್ಯೆ ಹೆಚ್ಚು ಎದುರಿಸುತ್ತೇವೆ ಎಂಬುದು ಬಹುತೇಕ ಉದ್ಯೋಗಿಗಳ ಗೋಳು..! ಕೆಲವೊಂದು ಸಲ ಕೆಲಸದ ಒತ್ತಡ ಬರ್ನ್ ಔಟ್ ಮಾಡಿ ಬೀಡುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಇಂಥ ಸಂದರ್ಭ ಎದುರಾಗುವ ಸಾಧ್ಯತೆ ಹೆಚ್ಚು. ಆಗ ವಿಶ್ರಾಂತಿ ಪಡೆಯಲು, ಸ್ವಲ್ಪ ಹೊತ್ತು ಚೇತರಿಸಿಕೊಳ್ಳಲು ಉದ್ಯೋಗಿಗಳು ಬಯಸುತ್ತಾರೆ. ಆದ್ರೆ ಅದು ಸಾಧ್ಯವಾಗಲ್ಲ. ಯಾಕಂದ್ರೆ ಕೆಲಸ ಅರ್ಧಕ್ಕೆ ಬಿಟ್ಟು ಸಂಪೂರ್ಣ ವಿರಾಮ ತೆಗೆದುಕೊಳ್ಳಲು ಆಗದೇ ಇರಬಹುದು. ಆದ್ರೆ ಯೋಚನೆ ಮಾಡಬೇಕಿಲ್ಲ. ಕೆಲಸದ ಒತ್ತಡ ಎಷ್ಟೇ ಇದ್ರೂ, ಬರ್ನ್ ಔಟ್ ಸಮಸ್ಯೆಯಿಂದ ಹೊರ ಬರಬಹುದು.
ಹೌದು……….ಕೆಲಸ ಒತ್ತಡದ ಮಧ್ಯೆ ಆ್ಯಕ್ಟಿವ್ ಆಗಿ ಕೆಲಸ ಮಾಡಬೇಕಂದ್ರೆ ಒಂದು ಸರ್ಕಸ್ ಇದ್ದಂತೆ. ಆದ್ರೆ ಕೆಲಸ ಮಾಡುವ ಸ್ಥಳದಲ್ಲಿ ಸುಲಭ ಹಾಗೂ ತ್ವರಿತ ಟ್ರಿಕ್ಸ್ ಫಾಲೋ ಮಾಡಿದ್ರೆ ಆರೋಗ್ಯದಿಂದ ಇರಬಹುದು ಗೊತ್ತಾ?. ಕೆಲಸ ಮಾಡುವ ಸ್ಥಳದಲ್ಲಿ ಉದ್ಯೋಗಿಗಳಿಗೆ ಬೇಗ, ಸುಲಭವಾಗಿ ಕೆಲಸ ಮಾಡಲು ಕಷ್ಟವಾಗಬಹುದು. ಆಗ ಯೋಚಿಸಬೇಕಾಗಿಲ್ಲ. ಬಾಕಿ ಉಳಿದಿರುವ ಹಾಗೂ ಮಾಡಬೇಕೆಂದಿರುವ ಕೆಲಸದ ಬಗ್ಗೆ ಪಟ್ಟಿ ಮಾಡಿ. ಸಣ್ಣ ಅಥವಾ ದೊಡ್ಡ ಲಿಸ್ಟ್ ಇದ್ದರೂ ಪರವಾಗಿಲ್ಲ. ಮಾಡಬೇಕಾಗಿರುವ ಕೆಲಸದ ಬಗ್ಗೆ ಲಿಸ್ಟ್ ಮಾಡಿದ್ರೆ ಅರ್ಧ ಕೆಲಸ ಮುಗಿದಂತೆ. ಈ ರೀತಿ ಮಾಡುವುದರಿಂದ ಉತ್ಪಾದನಾ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಮಿದುಳಿಗೂ ಹೆಚ್ಚು ಕೆಲಸ ಕೊಡುವ ಅಗತ್ಯವಿರುವುದಿಲ್ಲ.
ಆರೋಗ್ಯಕರ ತಿಂಡಿ ಸೇವನೆ
ಕೆಲಸ ಮಾಡುವ ಸ್ಥಳದಲ್ಲಿ ಆ್ಯಕ್ಟಿವ್ ಆಗಿ ಇರಲು ಆರೋಗ್ಯಕರ ತಿಂಡಿ, ಸ್ನ್ಯಾಕ್ಸ್ ಕೂಡಾ ಅಷ್ಟೇ ಮುಖ್ಯವಾಗಿರುತ್ತೆ.. ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನವರು ಫ್ಯಾಟಿ ಫುಡ್ ಸೇವಿಸುತ್ತಾರೆ. ಆದ್ರೆ ಇದು ಅನಾರೋಗ್ಯ ತಂದೊಡ್ಡುತ್ತವೆ. ಕೆಲಸದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಫ್ಯಾಟಿ, ಜಿಡ್ಡಿನಂಶ ಹೆಚ್ಚಿರುವ ಆಹಾರದ ಬದಲು, ಬಾದಾಮಿ, ಕ್ಯಾರೆಟ್, ಸೇಬು ಹಣ್ಣು ತಿಂದರೆ ರಿಫ್ರೆಶ್ ಆಗಿರಬಹುದು. ಅಲ್ಲದೇ ಮತ್ತಷ್ಟು ಕೆಲಸ ಮಾಡಲು ನೀವು ಉತ್ತೇಜಿತರಾಗಬಹುದು.
ವಾಕ್:
ಆಫೀಸ್ನಲ್ಲಿ ಒಂದೇ ಸ್ಥಳದಲ್ಲಿ, ಕೂತು ಕೆಲಸ ಮಾಡುತ್ತಿದ್ದರೆ, ಸುಸ್ತು, ಫೀವರ್ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಕೂತಲ್ಲೇ ಕೂತು ಮೈ ಜಡವಾಗಿರುತ್ತದೆ. ಕೆಲಸದ ಮಧ್ಯೆ 10 ನಿಮಿಷಗಳ ಕಾಲ ಹೊರಗೆ ತೆರಳಿ, ವಾಕ್ ಮಾಡಿ. ಇದ್ರಿಂದ ಸ್ವಲ್ಪ ತಾಜಾ ಗಾಳಿ ಪಡೆಯಬಹುದು. ಇದು ನಿಮ್ಮ ಮೂಡ್ನ್ನು ಫ್ರೆಶ್ ಆಗಿರಿಸುತ್ತದೆ.
ಪಾಸಿಟಿವ್ ಥಿಂಕಿಂಗ್
ಪ್ರತಿ ಕೆಲಸದ ಕೊನೆಯಲ್ಲೂ ಪಾಸಿಟಿವ್ ದೃಷ್ಠಿಕೋನ ಉಳಿಸಿಕೊಳ್ಳಲು ಪ್ರಯತ್ನಿಸಿ. ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ ಇರಬೇಕು. ಬಹಳಷ್ಟು ಜನ ಉದ್ಯೋಗಿಗಳು ತಾವು ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ ಇರುವುದಿಲ್ಲ. ಇದ್ರಿಂದ ಜಾಬ್ ಬರ್ನ್ ಔಟ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು. ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ, ಆಸಕ್ತಿ ಇದ್ದರೆ ಒತ್ತಡವನ್ನು ನಿರ್ವಹಿಸುವುದು ಸುಲಭವಾಗುತ್ತೆ.