ಬೆಂಗಳೂರು: ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ. KMF ಅವರ ಜೊತೆ ಮಾತಾಡ್ತೀನಿ. ಹಾಲಿನ ದರ ಹೆಚ್ಚಳ ಮಾಡೋದು ಸರ್ಕಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣದಲ್ಲಿ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, KMF ನಿಂದ ಹಾಲಿನ ದರ ಏರಿಕೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ,
ಕೆಎಂಎಫ್‌ನವರು ಬೇರೆ ರಾಜ್ಯದ ದರ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ. ಬೇರೆ ರಾಜ್ಯದ ದರಕ್ಕೆ ಹೋಲಿಗೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. ಆದರೂ ದರ ಏರಿಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನಾನು KMF ಅಧ್ಯಕ್ಷರ ಜೊತೆ ಮಾತಾಡ್ತೀನಿ ಎಂದು ಮಾಹಿತಿ ನೀಡಿದರು.
KMF ನಿಂದ ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ
Date: