ಮಳೆಯ ಆರ್ಭಟಕ್ಕೆ ಇಡೀ ರಾಜ್ಯ ತತ್ತರಿಸಿದೆ. ಅದರಲ್ಲೂ ಕೊಡಗು ಭಾರಿ ಸಂಕಷ್ಟಕ್ಕೆ ಸಿಲುಕಿದೆ.
ಡೊನೆಟ್ ಕೊಡಗು ಹೆಸರಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ . ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ನೀವು ನೀಡಬಹುದು.
ಬೆಂಗಳೂರಿನ ವಸಂತ ನಗರ ಹಾಗೂ ಮೈಸೂರಿನ ವಿಜಯ ನಗರದ ಕೊಡವ ಸಮುದಾಯ ಕೇಂದ್ರಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಆಗಸ್ಟ್ 18 ಅಂದರೆ ನಾಳೆ ಒಳಗಾಗಿಯೇ ಕೈಲಾದ ಸಹಾಯ ಮಾಡಬಹುದು. ಬಳಕೆಗೆ ಯೋಗ್ಯವಲ್ಲದ ವಸ್ತುಗಳನ್ನು ನೀಡಬೇಡಿ ಎಂದು ಕೊಡವ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಹಾಲಿನ ಪುಡಿ, ಗುಡ್ ಲೈಫ್ ಮಿಲ್ಕ್ ಪ್ಯಾಕ್, ಬ್ರೆಡ್, ಮ್ಯಾಗಿ, ಬಿಸ್ಕಟ್, ರಸ್ಕ್, ನೀರಿನ ಬಾಟಲ್ ಹಾಗೂ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಬಟ್ಟೆ, ವಸ್ತ್ರ, ಬೆಡ್‍ಶೀಟ್, ಹಾಸಿಗೆ ನೀಡಬಹುದು. ಔಷಧೋಪಚಾರಕ್ಕೆ ಪ್ರಥಮ ಚಿಕಿತ್ಸೆ ಕಿಟ್, ಪ್ಯಾರಸಿಟಮೋಲ್ ಮಾತ್ರೆ, ಕೆಮ್ಮಿನ ಔಷಧಿ, ಓಆರ್‍ಎಸ್, ಡೈಜೆನ್, ರ್‍ಯಾಂಟ್ಯಾಕ್ ಮಾತ್ರೆ ಹಾಗೂ ಸಾನಿಟರಿ ವಸ್ತುಗಳಾದ ಶೌಚಾಲಯ ಕಿಟ್, ಸೋಪ್, ಟೂತ್ ಪೇಸ್ಟ್, ಬ್ರಶ್ ಮತ್ತು ಸಾನಿಟರಿ ನ್ಯಾಪ್ಕಿನ್ ಕೊಡಬಹುದು.
ಮಾಹಿತಿಗಾಗಿ ಬೆಂಗಳೂರಿನಲ್ಲಿ ರೋಶನ್ ಸೋಮಣ್ಣ (98452 43561) ಕಿಶೋರ್ ಉತ್ತಪ್ಪ (98453 90522) ನಿರನ್ ಸೋಮಣ್ಣ (9980 990599) ಹಾಗೂ ಮೈಸೂರಿನಲ್ಲಿ ಮಲ್ಚಿರಾ ಪೊನ್ನಪ್ಪ (98441 38873), ಚಿಂದಾನಂದ ಶಮಿ (99459 99366), ಡಾ. ಅಯ್ಯಪ್ಪ (94831 10841) ಅವರನ್ನು ಸಂಪರ್ಕಿಸಬಹುದು.
ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ
Date:






