ಟ್ಯಾಟೂ… ಇಂದಿನ ಯುವಪೀಳಿಗೆಯನ್ನ ಬಹುವಾಗಿ ಸೆಳೆದಿರೋ ಟ್ಯಾಟೂ ಸದ್ಯದ ಟ್ರೆಂಡ್…ಒಂದಷ್ಟು ಜನ ಪ್ರೀತಿ ಪಾತ್ರರ ಹೆಸರಿನ ಟ್ಯಾಟೂ ಹಾಕಿಸಿಕೊಂಡ್ರೆ, ಇನ್ನೊಂದಷ್ಟು ಜನ ವೆರೈಟಿ ಡಿಸೈನ್ಸ್ ಟ್ಯಾಟೂ ಮೊರೆಹೋಗ್ತಾರೆ. ಇನ್ನೂ ಒಂದಷ್ಟು ಜನ ದೈವಿಕ ಆಕಾರಗಳನ್ನು ಟ್ಯಾಟೂ ಹಾಕಿಸಿಕೊಂಡು ಟ್ಯಾಟೂನಲ್ಲೂ ದೇವರನ್ನ ಕಾಣ್ತಾರೆ. ಹೀಗೆ ಈ ಟ್ಯಾಟೂವಿನಲ್ಲಿ ಸಾಕಷ್ಟು ಕ್ರಿಯೇಟಿವಿಟಿ ಇದೆ….
ಒಟ್ಟಾರೆ ಈ ಟ್ಯಾಟೂ ಕ್ರೇಜ್ ದಿನೇ ದಿನೇ ಹೆಚ್ತಾ ಇದ್ದು. ದಿನಕ್ಕೊಂದು ಟ್ರೆಂಡ್ ಸೃಷ್ಠಿ ಮಾಡ್ತಿದೆ. ಈ ಟ್ಯಾಟೂ ಮೋಡಿ ಸೆಲೆಬ್ರಿಟಿಗಳನ್ನೂ ಆವರಿಸಿಬಿಟ್ಟಿದೆ. ನಿಜ ಹೇಳಬೇಕಂದ್ರೆ ಈ ಟ್ಯಾಟೂ ಹುಚ್ಚು ಸೆಲೆಬ್ರಿಟಿಗಳಿಗೆ ಸ್ವಲ್ಪ ಹೆಚ್ಚೇ. ಟ್ಯಾಟೂ ಹಾಕಿಸಿಕೊಂಡು ಸಾಕಷ್ಟು ಸೆಲೆಬ್ರಿಟಿಗಳು ಟ್ರೆಂಡ್ ಕ್ರಿಯೇಟ್ ಮಾಡಿದ್ದೂ ಹೌದು…
ಈಗ ಈ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ.
ಬ್ಯಾಟ್ ಬೀಸಿ, ರನ್ ಹೊಳೆ ಹರಿಸಿ, ಎದುರಾಳಿ ತಂಡವನ್ನ ಉಡೀಸ್ ಮಾಡಿ, ಬ್ರೇಕ್ಅಪ್ ಆದಮೇಲೂ ಗೆಳತಿ ಅನುಷ್ಕಾ ಪರ ಬ್ಯಾಟಿಂಗ್ ಮಾಡಿ ಸುದ್ದಿಯಾಗಿದ್ದ ಕೊಹ್ಲಿ ಈಗ ಟ್ಯಾಟೂ ವಿಚಾರದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇಷ್ಟಕ್ಕೂ ಕೊಹ್ಲಿ ಹಾಕಿಸಿಕೊಂಡಿರೋ ಈ ಟ್ಯಾಟೂ ಸ್ಟೈಲ್ ಗಾಗಿಯೋ ಅಥವಾ ಕ್ರೇಝ್ ಗಾಗಿಯೋ ಅಲ್ಲ.
ಕೊಹ್ಲಿ ಹಾಕಿಸಿಕೊಂಡಿರೋ ಟ್ಯಾಟೂಗಳ ಹಿಂದೆ ರೋಚಕ ಕಹಾನಿಯೇ ಇದೆ. ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ತಮ್ಮ ತೋಳಿನ ತುಂಬ ಹಚ್ಚೆ ಹಾಕಿಸಿಕೊಂಡಿರೋದು ಗೊತ್ತಿರೋ ಸಂಗತಿ. ಮೈದಾನದಲ್ಲಿ ಸದಾ ಹೊಡಿ ಬಡಿ ಆಟದ ಮೊರೆ ಹೋಗುವ ವಿರಾಟ ಕೊಹ್ಲಿ ತೋಳಿನ ಮೇಲೆ ಇರೋ ಟ್ಯಾಟೂ ಶಾಂತಿ ಹಾಗೂ ಶಕ್ತಿಯ ಸಂಕೇತ. ಜೊತೆಗೆ ಶಿವ ಮತ್ತು ಧ್ಯಾನವನ್ನು ಪ್ರತಿಬಿಂಬಿಸುವ ಟಾಟ್ಯೂಗಳು ತೋಳ್ಬಲದ ಮೇಲಿವೆ. ಇನ್ನು ಹಿಂದಿಯಲ್ಲಿ ತಮ್ಮ ತಂದೆ-ತಾಯಿಯ ಹೆಸರನ್ನು ಹಾಕಿಸಿಕೊಂಡಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಏಕದಿನ ಕ್ಯಾಪ್ ನಂಬರ್ ಕೊಹ್ಲಿ ಟ್ಯಾಟೂನಲ್ಲಿದೆ
ಒಟ್ಟನಲ್ಲಿ ಸೆಲೆಬ್ರಿಟಿಗಳು ಏನ್ ಮಾಡದ್ರೂ ಅದು ಟ್ರೆಂಡ್. ಕೊಹ್ಲಿಯನ್ನು ಆರಾಧಿಸೋ ಕೂಟ್ಯಾಂತರ ಅಭಿಮಾನಿಗಳು ಈ ಟ್ಯಾಟೂ ಟ್ರೆಂಡ್ ಅನ್ನು ಫಾಲೋ ಮಾಡಿದ್ರು ಅಚ್ಚರಿಯಿಲ್ಲ.
- “ಶ್ರೀ”
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ