ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಸದ್ಯಕ್ಕೆ ಗುನುಗುತ್ತಿರುವ ಹೆಸರು ವಿರಾಟ್ ಕೊಹ್ಲಿ. ಕುಂತರೂ.. ನಿಂತರೂ.. ಮಲಗಿದರೂ ವಿರಾಟ್ ಕೊಹ್ಲಿಯದ್ದೇ ಧ್ಯಾನ. ಅಷ್ಟಕ್ಕೂ ಕೊಹ್ಲಿ ಆಡುತ್ತಿರುವುದು ಸಾಮಾನ್ಯ ಕ್ರಿಕೆಟ್ ಅಲ್ಲ. ಅವನ ಆಟಕ್ಕೆ ಅವನು ಮಾತ್ರ ಸರಿಸಾಟಿ. ಈ ಮಧ್ಯೆ ಆಗಾಗ್ಗೆ ಸಚಿನ್ಗೂ ಕೊಹ್ಲಿ ಆಟಕ್ಕೂ ಸಾಮ್ಯತೆ ಕಲ್ಪಿಸಲಾಗುತ್ತದೆ. ಆದರೆ ಕೊಹ್ಲಿ ಮೊದಲಿನಿಂದಲೂ ನನ್ನನ್ನು ಸಚಿನ್ ಜೊತೆ ಹೋಲಿಸಬೇಡಿ, ನನಗೆ ಮುಜುಗರವಾಗುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಸುತಾರಂ ಒಪ್ಪಿಕೊಳ್ಳಲು ತಯಾರಿಲ್ಲ. ಸಚಿನ್ ಆಟಕ್ಕೂ, ಕೊಹ್ಲಿ ಆಟಕ್ಕೂ ಒಂದುವೇಳೆ ಕಾಂಪ್ಲಿಮೆಂಟ್ ಕೊಡುವುದಾದರೇ, ಅಥವಾ ಹೋಲಿಕೆ ಮಾಡುವುದಾದರೇ ಹೀಗೆನ್ನಬಹುದು, ಸಚಿನ್ ಕ್ರಿಕೆಟ್ ದೇವರು. ದೇವರು ವರ ಕೊಡುವುದು ನಿಧಾನ. ಆದರೆ ಅದು ನಿರಂತರವಾಗಿರುತ್ತದೆ. ಆದರೆ ಕೋಹ್ಲಿ ಡೆವಿಲ್. ಡೆವಿಲ್ ಅಬ್ಬರ ಜಾಸ್ತಿ. ಆದರೆ ಅದೇ ಅಬ್ಬರವನ್ನು ಕೊನೆಯವರೆಗೂ ಕಾಯ್ದುಕೊಳ್ಳುವುದು ಕಷ್ಟ. ಆದರೆ ಈಗಿನ ಡೆವಿಲ್ ಹಲವು ವರ್ಷಗಳು ಕ್ರಿಕೆಟ್ ಆಡಿ ಗಾಡ್ ಎನಿಸಿಕೊಳ್ಳಲಿ ಎಂಬುದೇ ಎಲ್ಲರ ಆಶಯ.
- ರಾ ಚಿಂತನ್
POPULAR STORIES :
ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..