ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯ ವಿಶಿಷ್ಟ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ.
ಕುಬ್ಜ ಜೋಡಿಯೊಂದು ಈ ದೇವಾಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ.
ಕೋಲಾರದ ಮಾಲೂರು ತಾಲೂಕಿನ ಯಶವಂತಪುರದ ಅನಿಲ್ ಕುಮಾರ್ (26), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ವರಲಕ್ಷ್ಮಿ (22) ನವಜೀವನ ಆರಂಭಿಸಿದ ಜೋಡಿ.
ವರ ಅನಿಲ್ ಕುಮಾರ್ 2.5 ಅಡಿ ಹಾಗೂ ವಧು ವರಲಕ್ಷ್ಮಿ 2 ಅಡಿ ಎತ್ತರವಿದ್ದಾರೆ. ಈ ಜೋಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.