ಯಾರ್ ಏನೇ ಹೇಳಲಿ, ನಮ್ಮನ್ನೆಲ್ಲಾ ನಿಯಂತ್ರಿಸೋ ಒಂದು ಅಗೋಚರ ಶಕ್ತಿ ಇದ್ದೇ ಇದೆ..! ದೇವರು, ದೈವವನ್ನೆಲ್ಲಾ ನಂಬಲ್ಲ ಅಂದವರೂ ಕೂಡ ಒಮ್ಮೆ ಕೈ ಮುಗಿಯ ಬೇಕಾದ ಪ್ರಸಂಗ ಬರುತ್ತೆ…!
ಈಗ ಇದನ್ನು ಹೇಳೋಕೆ ಕಾರಣ, ದೈವಕ್ಕೆ ಬೈದು ಕಾಮೆಂಟ್ ಹಾಕಿದ್ದ ಯುವಕ ಅದೇ ದೈವಕ್ಕೆ ಬಂದು ಕೈ ಮುಗಿದು ಕ್ಷಮೆ ಕೇಳಿದ ಘಟನೆ ನಡೆದಿರೋದು.
ಹೌದು, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಗೆ ಬೈದ ಯುವಕ ಈಗ ಕ್ಷಮೆ ಕೇಳಿದ್ದಾನೆ..! ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಕೊರಗಜ್ಜ ಎಂಬ ನಂಬಿಕೆ ಇದೆ. ಮಂಗಳೂರಿನ ಪದವಿನಂಗಡಿಯ ಬಂಗೇರರು ಆರಾಧಿಸೋ ದೈವ ಕೊರಗಜ್ಜ. ಈ ದೈವದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ್ದ ಶಿರಸಿಯ ಮನೋನ್ ಪಂಡಿತ್ ಈಗ ಕ್ಷಮೆ ಯಾಚಿಸಿದಾತ.
ಈತ ಏಂಜೆಲ್ ನಯನಾ ಪ್ರಜ್ವಲ್ ಎಂಬ ಎಫ್‍ಬಿ ಅಕೌಂಟ್‍ನಲ್ಲಿ ಕೊರಗಜ್ಜ ನನ್ ಎಕ್ಕಡ ಎಂದು ಕೆಟ್ಟದಾಗಿ ಹೇಳಿದ್ದ. ಇದನ್ನು ಅನೇಕರು ವಿರೋಧಿಸಿದ್ದರು. ಮಂಗಳೂರಿನ ಹಿತರಕ್ಷಣಾ ಸಮಿತಿ ಅವರು ಬಂದರು ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದರು. ಆದರೂ ಈತ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕೊರಗಜ್ಜ ಸುಮ್ಮನೆ ಬಿಡಲಿಲ್ಲ..! ಈತನ ಮನೆಯವರೆಲ್ಲಾ ಅನಾರೋಗ್ಯಕ್ಕೆ ತುತ್ತಾದಾಗ ಈತ ಎಚ್ಚೆತ್ತುಕೊಂಡು ಹಿಂದೂ ಸಂಘಟನೆಯವರನ್ನು ಸಂಪರ್ಕಿಸಿ ಮಂಗಳೂರಿಗೆ ಆಗಮಿಸಿ ಕೊರಗಜ್ಜನಿಗೆ ಕ್ಷಮೆ ಯಾಚಿಸಿ ಹೋಗಿದ್ದಾನೆ…!