ಪಾಕಿಸ್ತಾನದ ಸೆನೆಟ್ ಗೆ ಸ್ಪರ್ಧಿಸಲು ಹಿಂದೂ ಮಹಿಳೆ ಗೆ ಅವಕಾಶ ಸಿಕ್ಕಿದೆ.
ಕೃಷ್ಣ ಕುಮಾರಿ ಸೆನೆಟ್ ಗೆ ಸ್ಪರ್ಧಿಸಲು ಅವಕಾಶ ಪಡೆದ ಹಿಂದೂ ಮಹಿಳೆ. ಇವರು ಸಿಂಧ್ ಪ್ರಾಂತ್ಯದ ನಾಗರ್ ಪರ್ಕರ್ ಜಿಲ್ಲೆಯ ಒಂದು ಹಳ್ಳಿಯವರು. ಕೋಲ್ಹಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಚುನಾವಣಾ ಕಣಕ್ಕೆಇಳಿಯಲು ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್ ನೀಡಿದೆ.
ಮಾರ್ಚ್ 3ರಂದು ಚುನಾವಣೆ ನಡೆಯಲಿದೆ. 1979ರಲ್ಲಿ ಜನಿಸಿದ ಕೃಷ್ಣ ಕುಮಾರಿಯವರಿಗೆ 16ನೇ ವಯಸ್ಸಲ್ಲಿ ಮದುವೆ ಆಗಿತ್ತು. ಮದುವೆ ನಂತರ ಪತಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕೃಷ್ಣ ಕುಮಾರಿ ಅವರು ಸಿಂಧ್ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.