ರಾಯಚೂರು:- ತಡರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಗೆ KSRTC ಬಸ್ನಲ್ಲಿ ಕಂಡಕ್ಟರ್ನಿಂದ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಕಂಡಕ್ಟರ್ ವಿರುದ್ಧ ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಕಂಡಕ್ಟರ್ ಆರೋಪವನ್ನು ತಳ್ಳಿ ಹಾಕಿದ್ದಾನೆ.
ಫೆಬ್ರವರಿ 18ರ ರಾತ್ರಿ ಕೆಎ-36,ಎಫ್-1532 ನಂಬರ್ನ ಬಸ್ನಲ್ಲಿ ಮಹಿಳೆಯೋರ್ವರು ರಾಯಚೂರು ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತಡ ರಾತ್ರಿ ಬಸ್ ಒಳಗಿನ ಲೈಟ್ ಆಫ್ ಆದಾಗ ರಾಯಚೂರು ನಗರ ಘಟಕದ ಕಂಡಕ್ಟರ್ ಲಕ್ಷ್ಮಿಕಾಂತ್ ರೆಡ್ಡಿ ಮಹಿಳೆಯ ಖಾಸಗಿ ಅಂಗಾಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತ ಮಹಿಳೆ ಡ್ರೈವರ್ ಸೀಟ್ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡ್ತಿದ್ದರು. ಡ್ರೈವರ್ ಮಲಗೋಕೆ ಇರುವ ಸೀಟ್ನಲ್ಲಿ ಕಂಡಕ್ಟರ್ ಮಲಗಿದ್ದ. ಪಕ್ಕದಲ್ಲಿದ್ದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದ. ಫ್ರೀ ಟಿಕೆಟ್ ಹರಿದು ತನ್ನ ಜೇಬ್ನಲ್ಲಿ ಇಟ್ಟುಕೊಂಡು ಟಿಕೆಟ್ ಬೇಕಾದ್ರೆ ಲೈಂಗಿಕವಾಗಿ ಸಹಕರಿಸು, ಇಲ್ಲ ಫೈನ್ ಬೀಳುತ್ತೆ ಎಂದು ಹೇಳಿ ಪಟ್ಟು ಹಿಡಿದಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ನನ್ನ ಕಡೆ ತಿರುಗಿ ಮಲಕೊಂಡು ನನ್ನ ಸೊಂಟಕ್ಕೆ ಕೈಹಾಕಿದ್ದ. ನಾನು ಹಾರ್ಟ್ ಪೇಶೆಂಟ್, ಹುಷಾರ್ ಇಲ್ಲ ಕಿರುಕುಳ ಕೊಡಬೇಡಿ ಅಂದ್ರು ಬಿಡಲಿಲ್ಲ. ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ ವರೆಗೂ ಕಿರುಕುಳ ಕೊಟ್ಟ. ಕೂಡಲೇ ಕಂಡಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಟಿವಿ9 ಎದುರು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.






