ಅಪಘಾತದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳುಗಳು ಸಾಯುವುದು ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರೋ ಕೆಎಸ್ ಆರ್ ಟಿಸಿ ಬಸ್ ಆ್ಯಂಬುಲೆನ್ಸ್ ಸೇವೆ ಪರಿಚಯಿಸಿದೆ. ಇದು ದೇಶದಲ್ಲೇ ಮೊದಲು.
ಕೆ ಎಸ್ ಆರ್ ಟಿ ಸಿ ಪರಿಚಯಿಸಿರುವ ಈ ಆ್ಯಂಬುಲೆನ್ಸ್ ನಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಏಕಕಾಲದಲ್ಲಿ ತುರ್ತು ಚಿಕಿತ್ಸೆ ನೀಡಬಹುದಾಗಿದೆ.
ತುರ್ತು ಅಗತ್ಯದ ವೈದ್ಯಕೀಯ ಉಪಕರಣ ವ್ಯವಸ್ಥೆಯಿದೆ. ನುರಿತ ದಾದಿಯರನ್ನು ನೇಮಿಸಲಾಗಿದೆ.