ಶೇ35ರಷ್ಟು ವೇತನ ಪರಿಷ್ಕರಿಸಬೇಕು, ಸೂಕ್ತ ಆರೋಗ್ಯ ಸೇವೆ ನೀಡಬೇಕೆಂಬ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿಯಿಂದಲೇ ರಾಜ್ಯ ಸರ್ಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದು, ರಾತ್ರಿಯಿಂದಲೇ ಬಸ್‍ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ವಾಯುವ್ಯ ಸಾರಿಗೆ ನೌಕರರು ಅನಿರ್ದಿಷ್ಠಾಧಿ ಮುಷ್ಕರ ಕೈಗೊಂಡಿದ್ದು ಇದಕ್ಕೆ ಬೆಂಗಳೂರು ಸಾರಿಗೆ ನೌಕರರೂ ಕೂಡ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಅಹೋರಾತ್ರಿಯಿಂದಲೇ ಮುಷ್ಕರ ಹೂಡಿದರಿಂದ ರಾಜ್ಯದ ಬೇರೆ ಬೇೀರೆ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದರಿಂದ ಬಸ್‍ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್‍ಗಳಿದ್ದರೂ ಪ್ರಯಾಣಿಸದಂತಹ ಸನ್ನಿವೇಶ ನಿರ್ಮಾಣವಾಗಿದೆ.
ಹಾಸನ ಮಂಡ್ಯ ಚಿಕ್ಕಬಳ್ಳಾಪುರ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಎಲ್ಲರೂ ಖಾಸಗಿ ಬಸ್‍ಗಳತ್ತ ಮುಖ ಮಾಡಿದ್ದಾರೆ.
ಬೇಡಿಕೆ ಈಡೇರೋವರೆಗೂ ಮುಷ್ಕರ ನಿಲ್ಲೊಲ್ಲ.
ಈ ವೇಳೆ ಮುಷ್ಕರ ಕೈಬಿಡುವಂತೆ ಸರ್ಕಾರ ನಡೆಸಿದ ಹಲವಾರು ಸಂಧಾನಗಳು ವಿಫಲವಾಗಿದ್ದು, ಸಂಪುಟ ಸಭೆಯಲ್ಲಿ ಸರ್ಕಾರ ನೀಡಿರುವ ಶೇ8 ರಷ್ಟು ವೇತನ ಪರಿಷ್ಕರಣೆಯನ್ನು ಶೇ35 ರಷ್ಟು ಹೆಚ್ಚಿಸಬೇಕು. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನೌಕರರಿಗೆ ಶೇ35 ರಷ್ಟು ವೇತನ ಹೆಚ್ಚಿಸಿದೆ ಎಂದಿದ್ದಾರೆ. ಆದರೆ ಸರ್ಕಾರ ಇವರ ಒತ್ತಾಯಕ್ಕೆ ಮಣಿದು ಶೇ 10 ರಷ್ಟು ವೇತನ ಹೆಚ್ಚಿಸಲು ನಿರ್ಧಾರ ಕೈಗೊಂಡಿದ್ದು ನೌಕರರು ಅದನ್ನು ತಿರಸ್ಕರಿಸಿದ್ದಾರೆ.
ಏನು ಇವರ ಬೇಡಿಕೆ… ?
ಆಂಧ್ರದಲ್ಲಿರುವಂತೆ ನಮ್ಮ ರಾಜ್ಯದ ಸಾರಿಗೆ ನೌಕರರಿಗೆ ಶೇ.35ರಷ್ಟು ವೇತನ ಹೆಚ್ಚಿಸಬೇಕು. ತರಬೇತಿ ನೌಕರರಿಗೆ 6 ತಿಂಗಳ ತರಬೇತಿಯ ನಂತರ ಅವರನ್ನು ಪರ್ಮನೆಂಟ್ ಮಾಡಬೇಕು, ಅಲ್ಲದೇ ಅವರ ಕನಿಷ್ಟ ವೇತನ 18 ಸಾವಿರ ನಿಗಧಿ ಮಾಡಬೇಕು, ಹಾಗೆಯೇ ನಿವೃತ್ತ ನೌಕರರ ಪಿಂಚಣಿ 10 ಸಾವಿಕ್ಕೆ ಹೆಚ್ಚಿಸಬೇಕು ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ನಿಗಧಿ ಮಾಡಬೇಕು, ಹಾಗೂ ಇನ್ನಿತರೆ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟುದ್ದಾರೆ.
ಆದರೆ ಸರ್ಕಾರ ಈಗಾಗಲೇ ಶೇ10ರಷ್ಟು ವೇತನ ಹೆಚ್ಚಿಕೆ ಮಾಡಿದ್ದು ಅದಕ್ಕಿಂತ ಹೆಚ್ಚು ವೇತನ ಹೆಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ವೇತನ ಹೊರತು ಪಡಿಸಿ ಉಳಿದೆಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಿಧ್ದ. 2012 ರಲ್ಲೇ ವೇತನ ಹೆಚ್ಚಿಸಿದ್ದ ಪರಿಣಾಮವಾಗಿ ಸರ್ಕಾರಕ್ಕೆ 750 ಕೋಟಿ ರೂ ನಷ್ಟವಾಗಿದೆ ಎಂದು ವಾದಿಸುತ್ತಿದೆ.
ಬಸ್ ಮೇಲೆ ಕಲ್ಲು ತೂರಾಟ
ಆ ವೇಳೆ ರಾಜ್ಯ ಸಾರಿಗೆ ನೌಕರರ ಮುಷ್ಕರದ ಕಾವು ರಾಜ್ಯಾದ್ಯಂತ ವಿಸ್ತರಿಸಿದ್ದು ಹಲವೆಡೆ ಸರ್ಕಾರಿ ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ತುಮಕೂರು ಬೆಳಗಾವಿ ಚಿಕ್ಕಮಗಳೂರು ಹಾಸನ ಮೈಸೂರು ಮುಂತಾದ ಜಿಲ್ಲೆಯ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ನಗರದ ಬಹುತೇಕ ಕಡೆ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದ್‍ನಿಂದ ಸರ್ಕಾರ ಪರ್ಯಾಯ ವ್ಯವಸ್ಥೆ ಕೈಗೊಂಡಿದೆ. ಈ ವೇಳೆ ರಾಜ್ಯ ವ್ಯಾಪ್ತಿ ಖಾಸಗೀ ವಾಹನಗಳ ಹಾವಳಿ ಹೆಚ್ಚಾಗಿದೆ. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
POPULAR STORIES :
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!
6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!
ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ