ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ .ಕರುಣಾನಿಧಿ ಅವರು ವಿಧಿವಶರಾಗಿರುವುದರಿಂದ, ಮುಂಜಾಗೃತ ಉದ್ದೇಶದಿಂದ ತಮಿಳುನಾಡಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕರುಣಾನಿಧಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಯುತ್ತಿದ್ದಂತೆ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿ ಬಿಗ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ತಮಿಳುನಾಡಿಗೆ ಮಾತ್ರವಲ್ಲ , ಆ ಕಡೆಯಿಂದಲೂ ರಾಜ್ಯದತ್ತ ಯಾವುದೇ ಬಸ್ ಸಂಚಾರವಿಲ್ಲ. ತಮಿಳುನಾಡಿನಲ್ಲಿರುವ ಬಸ್ ಗಳನ್ನು ಅಲ್ಲಿಯೇ ನಿಲ್ಲಿಸಲಾಗಿದೆ.ಬಸ್ ಗಳಿಗೆ ಯಾವುದೇ ಹಾನಿ ಆಗದಂತೆ ಪೊಲೀಸ್ ಬಂದೋ ಬಸ್ತ್ ನೀಡಲಾಗಿದೆ.
ಗಡಿಭಾಗ ಒಳಗೊಂಡಂತೆ ಬೆಂಗಳೂರಿನ ತಮಿಳು ಭಾಷಿಕರ ಪ್ರದೇಶಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ತಮಿಳುನಾಡಿಗೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಸ್ಥಗಿತ
Date: