ನಿಮ್ಗೆಲ್ಲಾ ಯಶಸ್ವಿನಿ ಬಗ್ಗೆ ಗೊತ್ತೇ ಇರತ್ತೆ ಅನ್ಕೊಳ್ತೆನೆ. ಮೀಟರ್ ದಂಧೆ ನಡೆಸುತ್ತಾ ಹಯಬುಜಾ ಬೈಕ್‍ನಲ್ಲಿ ಸಕತ್ ಫೋಸ್ ಕೊಡ್ತಾ ಲೇಡಿ ಡಾನ್ ಅನ್ನೋ ಪಟ್ಟ ಕೂಡ ಸಿಕ್ಕಿತ್ತು. ಆದರೆ ಅವರನ್ನು ಅರೆಸ್ಟ್ ಮಾಡಿದ ಕೂಡಲೇ ಆಸ್ಪತ್ರೆಗೆ ಸೇರಿ ಅಲ್ಲಿಂದ ಎಸ್ಕೇಪ್ ಆಗಿದ್ರು. ಅದೇ ಲೇಡಿ ಈಗ ನ್ಯೂ ಗೆಟಪ್‍ನಲ್ಲಿ ಸುದ್ದಿಯಾಗುತ್ತಿದ್ದಾರೆ.
ಹೌದು… ಇದೀಗ ಯಶಸ್ವಿನಿ ನಾಯಕೀಯ ಸ್ಟೈಲ್‍ನಲ್ಲಿ ಮಿಂಚಿ ಅಮಾಯಕರ ಪರವಾಗಿ ನಿಂತಿದ್ದಾರೆ ನೋಡಿ… ಅಮಾಯಕ ಜನರಿಂದ ಹಣ ಪಡೆದು ಅವರಿಗೆ ವಂಚನೆ ಮಾಡುದ್ರೆ ರಸ್ತೆಯಲ್ಲೆ ಸಿಗುತ್ತೆ ಧರ್ಮದೇಟು.. ಇದಕ್ಕೆ ಉದಾಹರಣೆ ಎಂಬಂತೆ ಉಷಾರಾಣಿ ಎಂಬ ಮಹಿಳೆಗೆ ಕತ್ರಿಗುಪ್ಪೆಯ ನಡುರಸ್ತೆಯಲ್ಲೇ ಹಿಗ್ಗಾ ಮುಗ್ಗ ಥಳಿಸಿದ ಘಟನೆಯೊಂದು ನಡೆದಿದೆ.
ಈ ಉಷಾ ರಾಣಿ ಎಂಬಾಕೆ ಸಾಲ ಕೊಡುಸ್ತೀನಿ ಅಂತೇಳಿ ಅಮಾಯಕರ ಬಳಿ ಲಕ್ಷಾಂತರ ಹಣವನ್ನು ಪೀಕಿದ್ದಲ್ಲದೇ, ಹಣ ಕೇಳಿದವರಿಗೆ ಧಮ್ಕಿ ಹಾಕಿ ಹಲ್ಲೆಯೂ ಕೂಡ ನಡೆಸಿದ್ದಳು. ಅಲ್ಲದೇ ಈಕೆ ನರೇಂದ್ರ ಶರ್ಮಾ ಎಂಬುವವನ ಜೊತೆ ಬೆಂಗಳೂರು ಮತ್ತು ಬೆಂಗಳೂರಿನ ಹೊರ ವಲಯದಲ್ಲಿ ಸುಮಾರು 72 ಕೋಟಿ ಹಣ ವಂಚನೆ ಮಾಡಿದ ಆರೋಪವೂ ಇದೆ.
ಈ ಹಿಂದೆ ಉಷಾ ರಾಣಿ ಜೊತೆಯಲ್ಲೇ ಇದ್ದು ವ್ಯವಹಾರ ಮಾಡುತ್ತಿದ್ದ ರೌಡಿ ಶೀಟರ್ ಯಶಸ್ವಿನಿ, ತನ್ನ ಸ್ನೇಹಿತರೊಂದಿಗೆ ಬಂದು ಉಷಾರಾಣಿಯನ್ನು ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಸಧ್ಯಕ್ಕೆ ಉಷಾ ರಾಣಿ ಪೊಲೀಸರ ಅಥಿತಿಯಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ
https://youtu.be/jDy9UfQgRbM
POPULAR STORIES :
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!