ರೆಹಮಾನ್ ಹಾಸನ್ ಯಾರಿಗೆ ತಾನೆ ಗೊತ್ತಿಲ್ಲ…? ಜನಪ್ರಿಯ ಪತ್ರಕರ್ತ, ನಿರೂಪಕ. ಸದ್ಯ ಸುದ್ದಿವಾಹಿನಿಯಿಂದ ದೂರವಿದ್ದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ರೆಹಮಾನ್ ಸ್ಟಾರ್ ಆ್ಯಂಕರ್ ಅಂತ ಗೊತ್ತು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರೋದು ಗೊತ್ತಿದೆ. ಇತ್ತೀಚೆಗೆ ‘ಲವ್ ಬೈಟ್’ ಎಂಬ ಕಿರುಚಿತ್ರ ಮಾಡಿದ್ದರು. ಇದನ್ನು ಸಹ ನೀವು ಈಗಾಗಲೇ ನೋಡಿ ಮೆಚ್ಚಿದ್ದೀರಿ. ರೆಹಮಾನ್ ಅಂದ್ರೆ ಇಷ್ಟೇನಾ…? ಇಲ್ಲ, ಇವರೊಬ್ಬ ಪಾಕ ಪ್ರವೀಣ ಕೂಡ ಹೌದು…!
ಸದಾ ಹೊಸತನ ಬಯಸೋ ರೆಹಮಾನ್ ಈಗ ಅಡುಗೆಗೆ ಸಂಬಂಧಿಸಿದ ವೀಡಿಯೋಗಳನ್ನು ಮಾಡಲಾರಂಭಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋದು ರೆಹಮಾನ್ ಅವರಿಗೆ ಇಷ್ಟವಂತೆ. ಈಗ ಇವರು ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ ‘ಲೆಟ್ಸ್ ಕುಕ್ ವಿತ್ ರೆಹಮಾನ್ ಹಾಸನ್’ ಎಂಬ ಕಾರ್ಯಕ್ರಮ ಆರಂಭಿಸಿದ್ದಾರೆ.
ಇದರ ಮೊದಲ ಎಪಿಸೋಡ್ ರಿಲೀಸ್ ಮಾಡಿದ್ದಾರೆ. ಕೀಮಾ ದೊನ್ನೆ ಬಿರಿಯಾನಿ ಮಾಡೋದು ಹೇಗೆ ಅಂತ ರೆಹಮಾನ್ ಈ ಎಪಿಸೋಡ್ ನಲ್ಲಿ ತಿಳಿಸಿದ್ದಾರೆ. ಈ ವೀಡಿಯೋ ಇಲ್ಲಿದೆ ನೋಡಿ.