ಚುನಾವಣೆ ಸಮೀಪಿಸ್ತಾ ಇದ್ದಂತೆ ವೋಟ್ ಬ್ಯಾಂಕ್ ರಾಜಕಾರಣ ಹೆಚ್ಚಾಗಿದೆ..! ಇದು ಸರ್ವೇ ಸಾಮಾನ್ಯ ಕೂಡ. ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಸಂಘಟನೆಯಲ್ಲಿ ತೊಡಿವೆ. ಆಡಳಿತ ರೂಢ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆಲೋಚನೆಯಲ್ಲಿ ಯೋಜನೆಗಳನ್ನು ರೂಪಿಸ್ತಾ ಇದೆ. ಸದ್ಯ ಮಹಿಳೆಯರ ವೋಟ್‍ಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡುತ್ತಿದೆ…!
ಹೌದು, ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಚಿಂತನೆ ನಡೆದಿದೆ…! ಮದ್ಯ ನಿಷೇಧದ ಬಗ್ಗೆ ಅವಲೋಕನ ಮಾಡುವ ಉದ್ದೇಶದಿಂದ ಈಗಾಗಲೇ ಬಿಹಾರಕ್ಕೆ ನಿಯೋಗವೊಂದನ್ನು ಕಳುಹಿಸಲಾಗಿದ್ದು,
ಅಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣ ಅವಲೋಕಿಸಿ, ಬಳಿಕ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುತ್ತೆ ಅಂತ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಹೇಳಿದ್ದಾರೆ.
ಮದ್ಯ ನಿಷೇದಿಂದ ಆಗುವ ಆರ್ಥಿಕ ಲಾಭ-ನಷ್ಟಗಳ ಲೆಕ್ಕಚಾರ ಹಾಕಿ ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. ಹೀಗೆ ಮದ್ಯ ನಿಷೇಧದಿಂದ ಏನಿಲ್ಲ ಅಂದ್ರೂ ಶೇ.45ರಷ್ಟು ಮಹಿಳೆಯರು ಕಾಂಗ್ರೆಸ್‍ಗೆ ವೋಟ್ ಹಾಕ್ತಾರೆ ಎಂಬ ಲೆಕ್ಕಚಾರ ಇದೆ ಎಂದು ಹೇಳಲಾಗ್ತಿದೆ.